More

    ಸಕ್ಕರೆ ಕಾರ್ಖಾನೆಯ 5 ಲಕ್ಷ ಷೇರು ಖರೀದಿ: ರೂ. 40 ಸಾವಿರ ಕೋಟಿ ಹೂಡಿಕೆ ಮಾಡಿರುವ ಜುಂಜುನ್​ವಾಲಾ ಯಾವೆಲ್ಲ ಸ್ಟಾಕ್​ ಖರೀದಿಸಿದ್ದಾರೆ ನೋಡಿ…

    ಮುಂಬೈ: ಹಿರಿಯ ಹೂಡಿಕೆದಾರರಾದ ರೇಖಾ ರಾಕೇಶ್ ಜುಂಜುನ್ವಾಲಾ ಅವರು ತಮ್ಮ ಪೋರ್ಟ್​ಫೋಲಿಯೊಗೆ ಹೊಸ ಸ್ಟಾಕ್ ಸೇರಿಸಿದ್ದಾರೆ. ರೇಖಾ ಜುಂಜುನ್‌ವಾಲಾ ಅವರು ಎನ್‌ಕೆಎಂ ಶುಗರ್ ಮಿಲ್ಸ್ ಲಿಮಿಟೆಡ್‌ನಲ್ಲಿ ಬೆಟ್ಟಿಂಗ್ ಕಟ್ಟಿದ್ದಾರೆ. ರೇಖಾ ಜುಂಜುನ್​ವಾಲಾ ಅವರು ಮಾರ್ಚ್ 2024 ತ್ರೈಮಾಸಿಕದಲ್ಲಿ KM ಸಕ್ಕರೆ ಕಾರ್ಖಾನೆಯ ಅಂದಾಜು 5 ಲಕ್ಷ ಷೇರುಗಳನ್ನು ಖರೀದಿಸಿದ್ದಾರೆ. ಕಂಪನಿಯಲ್ಲಿ ಅವರ ಪಾಲು ಶೇಕಡಾ 0.54 ಆಗಿದೆ.

    ಕೆಎಂ ಶುಗರ್ ಮಿಲ್ಸ್ ಲಿಮಿಟೆಡ್ ಷೇರುಗಳ ಬೆಲೆ ಏಪ್ರಿಲ್ 17 ಬುಧವಾರದಂದು 30.05 ರೂ. ತಲುಪಿತು. ಕೆಎಂ ಶುಗರ್ ಮಿಲ್ಸ್ ಷೇರುಗಳ 52 ವಾರಗಳ ಗರಿಷ್ಠ ಬೆಲೆ 39.20 ರೂ. ಹಾಗೂ ಕನಿಷ್ಠ ಬೆಲೆ 24.25 ರೂ. ಇದೆ.

    ರೇಖಾ ಜುಂಜುನ್‌ವಾಲಾ ಅವರು ಡಿಸೆಂಬರ್ 2023 ತ್ರೈಮಾಸಿಕದಲ್ಲಿ 26 ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದರು ಮತ್ತು ಅವರ ಹೂಡಿಕೆಯ ಮೌಲ್ಯವು 4.9 ಶತಕೋಟಿ ಡಾಲರ್​ (40,987 ಕೋಟಿ ರೂಪಾಯಿ) ಆಗಿತ್ತು. ಈ 26 ಕಂಪನಿಗಳಲ್ಲಿ, 13 ಕಂಪನಿಗಳು ಮಾರ್ಚ್ 2024 ತ್ರೈಮಾಸಿಕದಲ್ಲಿ ತಮ್ಮ ಷೇರುದಾರರ ಮಾಹಿತಿ ಬಹಿರಂಗಪಡಿಸಿವೆ. ಕ್ರಿಸಿಲ್, ಟಾಟಾ ಕಮ್ಯುನಿಕೇಷನ್ಸ್, ಫೋರ್ಟಿಸ್ ಹೆಲ್ತ್‌ಕೇರ್, ರಾಘವ್ ಪ್ರಾಡಕ್ಟ್ ವಿಟಿ ಎನ್‌ಹಾನ್ಸರ್ಸ್, ಎನ್‌ಸಿಸಿ ಮತ್ತು ಕೆನರಾ ಬ್ಯಾಂಕ್‌ಗಳಲ್ಲಿ ಈ ಕಂಪನಿಗಳಲ್ಲಿ ಜುಂಜುನ್‌ವಾಲಾ ಅವರ ಪಾಲು ಕಡಿಮೆಯಾಗಿದೆ. ಆದರೆ, 6 ಕಂಪನಿಗಳಲ್ಲಿನ ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

    ರೇಖಾ ಜುಂಜುನ್‌ವಾಲಾ ಅವರು ಟಾಟಾ ಕಂಪನಿಯ 7 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅವರು ಮಾರ್ಚ್ 2024 ರ ತ್ರೈಮಾಸಿಕದಲ್ಲಿ ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್‌ನ 7.34 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈಗ ತಮ್ಮ ಪಾಲನ್ನು 1.58% ಕ್ಕೆ ಇಳಿಸಿದ್ದಾರೆ. ಇದಕ್ಕೂ ಮೊದಲು ಪಾಲು ಶೇ. 1.84ರಷ್ಟಿತ್ತು.

    ಮಾರ್ಚ್ 2024 ತ್ರೈಮಾಸಿಕದಲ್ಲಿ ಜುಂಜುನ್‌ವಾಲಾ ಅವರು ಕ್ರಿಸಿಲ್‌ನ 20000 ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈಗ ಕ್ರಿಸಿಲ್‌ನಲ್ಲಿ ಜುಂಜುನ್‌ವಾಲಾ ಅವರ ಪಾಲು 5.47% ರಿಂದ 5.44% ಕ್ಕೆ ಇಳಿದಿದೆ. ಇದಲ್ಲದೆ, ಜುಂಜುನ್‌ವಾಲಾ ಅವರು ಫೋರ್ಟಿಸ್ ಹೆಲ್ತ್‌ಕೇರ್‌ನ 44.28 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈಗ ಇದರಲ್ಲಿ ತಮ್ಮ ಪಾಲನ್ನು ಶೇಕಡಾ 4.66 ರಿಂದ 4.07 ಕ್ಕೆ ಇಳಿಸಿದ್ದಾರೆ. ಅವರು ರಾಘವ್ ಪ್ರಾಡಕ್ಟ್ ವಿಟ್ಟಿ ಎನ್‌ಹಾನ್ಸರ್ಸ್‌ನ 12000 ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈಗ ಈ ಕಂಪನಿಯಲ್ಲಿ ಇವರ ಪಾಲು ಶೇಕಡಾ 5.06ಕ್ಕೆ ಇಳಿದಿದೆ. ರೇಖಾ ಜುಂಜುನ್‌ವಾಲಾ ಅವರು ಎನ್‌ಸಿಸಿಯ 38.07 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ.

    ಜಿಯೋ ಫೈನಾನ್ಶಿಯಲ್​ ಸರ್ವೀಸ್​ ಷೇರುಗಳನ್ನು ಏಕೆ ಖರೀದಿಸಬೇಕು?: ತಜ್ಞರ ವಿಶ್ಲೇಷಣೆ ಹೀಗಿದೆ…

    ಪಾಲು ಹೆಚ್ಚಿಸಿಕೊಂಡ ಸ್ಟಾರ್ ಹೂಡಿಕೆದಾರ ದಮಾನಿ; ಸಿಗರೇಟ್ ಕಂಪನಿ ಷೇರು ಬೆಲೆ ಹೆಚ್ಚಳ

    10 ಸಾವಿರವಾಯ್ತು 2.44 ಕೋಟಿ ರೂಪಾಯಿ: ಎನ್​ಬಿಎಫ್​ಸಿ ಸ್ಟಾಕ್​ನ ಅದ್ಭುತ ಗಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts