More

    ಭಕ್ತರಿಲ್ಲದೆ ನಡೆಯುತ್ತೆ ಪುರಿ ಜಗನ್ನಾಥ ರಥಯಾತ್ರೆ; ಕೊನೆಗೂ ಸುಪ್ರೀಂ ಕೋರ್ಟ್​ ಅಸ್ತು

    ನವದೆಹಲಿ: ಶತಮಾನಗಳ ಇತಿಹಾಸವಿರುವ ಒಡಿಶಾದ ಪುರಿ ಜಗನ್ನಾಥ ರಥೋತ್ಸವಕ್ಕೆ ಕೊನೆಗೂ ಸೋಮವಾರ ಸುಪ್ರೀಂ ಕೋರ್ಟ್​ ಅನುಮತಿ ನೀಡಿದೆ. ಆ ಮೂಲಕ ಕೋಟ್ಯಂತರ ಜನರ ಭಕ್ತಿ, ನಂಬಿಕೆಗಳ ಆಚರಣೆಗೆ ಅವಕಾಶ ಕಲ್ಪಿಸಿದೆ.

    ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ಅವಕಾಶ ನೀಡಲು ಸುಪ್ರೀಂ ಕೋರ್ಟ್​ ಅವಕಾಶ ನಿರಾಕರಿಸಿತ್ತು. ಇದಕ್ಕೆ ಅನುಮತಿ ನಿಡಿದಲ್ಲಿ ಜಗನ್ನಾಥನೇ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.

    ಇದನ್ನೂ ಓದಿ; ಸಾಧ್ವಿಯ ಕಣ್ಣಿನ ದೃಷ್ಟಿಯನ್ನೇ ಕಳೆದ ಕಾಂಗ್ರೆಸ್​; ಭೋಪಾಲ್​ ಸಂಸದೆ ಆರೋಪ 

    ಆದರೆ, ನೂರಾರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿರುವ ರಥಯಾತ್ರೆಯನ್ನು ಭಕ್ತರ ಪಾಲ್ಗೊಳ್ಳುವಿಕೆ ಇಲ್ಲದೆ ನಡೆಸಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್​ಗೆ ತಿಳಿಸಿತು. ಜತೆಗೆ, ಒಡಿಶಾ ಸರ್ಕಾರ ಕೂಡ ಇದಕ್ಕೆ ಸಹಮತಿ ವ್ಯಕ್ತಪಡಿಸಿತು. ಈ ಹಿನ್ನೆಲೆಯಲ್ಲಿ ಅಗತ್ಯ ಮುನ್ನಚ್ಚರಿಕೆ ಕ್ರಮಗಳೊಂದಿಗೆ ದೇವಸ್ಥಾನ ಸಮಿತಿಯೊಂದಿಗೆ ಚರ್ಚಿಸಿ ರಥಯಾತ್ರೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್​ ಆದೇಶ ನೀಡಿದೆ.

    ಭಕ್ತರು ಪಾಲ್ಗೊಳ್ಳುವಂತಿಲ್ಲ: ರಥಯಾತ್ರೆಗೆ ಅವಕಾಶ ನೀಡಿದ್ದರೂ ಭಕ್ತರು ಪಾಲ್ಗೊಳ್ಳಲು ಅವಕಾಶವಿಲ್ಲ. ಹೀಗಾಗಿ ಜಗನ್ನಾಥ, ಬಲಭದ್ರ ಹಾಗೂ ಸುಭದ್ರಾ ರಥಗಳು ಸಾಗುವ ಮಾರ್ಗದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಟಿ.ವಿಯಲ್ಲಿ ನೇರ ಪ್ರಸಾರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಭಕ್ತರೇ ಇಲ್ಲದೇ ನಡೆಯುತ್ತಿರುವ ಮೊದಲ ರಥಯಾತ್ರೆ ಇದಾಗಿದೆ. ಇಲ್ಲದಿದ್ದರೆ ಕನಿಷ್ಠ 10 ಲಕ್ಷ ಜನರು ಇದರಲ್ಲಿ ಭಾಗವಹಿಸುತ್ತಿದ್ದರು.

    ಇದನ್ನೂ ಓದಿ;  ಪುರಿ ಜಗನ್ನಾಥನೇ ನಮ್ಮನ್ನು ಕ್ಷಮಿಸುವುದಿಲ್ಲ ಎಂದ ಸುಪ್ರೀಂ ಕೋರ್ಟ್​ 

    ರಥಯಾತ್ರೆಯಲ್ಲಿ ಒಟ್ಟು 500-600 ಜನರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ಎಲ್ಲರೂ ಕೋವಿಡ್​ ಮುಕ್ತರಾಗಿದ್ದಾರೆ ಎಂಬುದನ್ನು ಪರೀಕ್ಷೆ ಮೂಲಕ ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಜೂನ್ 23ರಂದು ರಥಯಾತ್ರೆ ಆರಂಭವಾಗಲಿದ್ದರೆ, ಜುಲೈ 1ರಂದು ಬಹುದಾ ಜಾತ್ರೆ ( ತೇರುಗಳು ಮರಳುವುದು) ನಡೆಯಲಿದೆ. ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ದೇವಸ್ಥಾನ ಸಮಿತಿಯೇ ನಿರ್ಧರಿಸಲಿದೆ.

    ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್​; ಯಾವುದರ ಮುನ್ಸೂಚನೆ ಇದು…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts