More

    ಕುಂಭ ಮೇಳದಲ್ಲಿ ಟೆಂಟ್​ ಹಾಕಿ ಟೋಪಿ ಹಾಕಿದ್ರು; ಕೋಟಿ ಲೂಟಿ ಮಾಡಿ ಸಿಕ್ಕಿಬಿದ್ರು…

    ಪ್ರಯಾಗ್​ ರಾಜ್​: ಕುಂಭ ಮೇಳದಲ್ಲಿ ಟೆಂಟ್​ ಹಾಕಿ ಟೋಪಿ ಹಾಕಲು ಯತ್ನಿಸಿದ ‘ಲಲ್ಲೂಜಿ ಆ್ಯಂಡ್​ ಸನ್ಸ್​’ ಈಗ ಸಿಕ್ಕಿಬಿದ್ದಿದ್ದಾರೆ. ಕುಂಭ ಮೇಳದ ಬಿಲ್ಲಲ್ಲೂ ಕೋಟಿಗಟ್ಟಲೆ ಲೂಟಿ ಮಾಡಲು ಹೋಗಿದ್ದ ಈ ಹನ್ನೊಂದು ಮಂದಿ ವಿರುದ್ಧ ಈಗ ಎಫ್​ಐಆರ್​ ದಾಖಲಾಗಿದೆ.

    ಹೌದು.. ಕುಂಭ ಮೇಳದ ಸಂದರ್ಭದಲ್ಲಿ ಟೆಂಟ್​, ಫರ್ನಿಚರ್ ಮತ್ತು ಲೌಡ್​ ಸ್ಪೀಕರ್​ ಒದಗಿಸುತ್ತಿದ್ದ ‘ಲಲ್ಲೂಜಿ ಆ್ಯಂಡ್ ಸನ್ಸ್’, ಅದರ ಸಲುವಾಗಿ ನೀಡುವ ಬಿಲ್​ನಲ್ಲಿ ಫೋರ್ಜರಿ ಮಾಡಿ ಕೋಟಿಗಟ್ಟಲೆ ಲೂಟಿ ಮಾಡಲು ಯತ್ನಿಸಿದ್ದಕ್ಕೆ ಈಗ ಕೇಸು ಜಡಿಯಲಾಗಿದೆ. 2019ರ ಕುಂಭಮೇಳಕ್ಕೆ ಟೆಂಟ್​ ಇತ್ಯಾದಿ ಒದಗಿಸಿದ ಬಾಬ್ತಿನ ಬಿಲ್​ನಲ್ಲಿ ಬರೋಬ್ಬರಿ 109.85 ಕೋಟಿ ರೂಪಾಯಿ ಗುಳುಂ ಮಾಡಲೆತ್ನಿಸಿದ ಈ ಸಂಸ್ಥೆ ಮೇಲೆ ಈಗ ಪ್ರಯಾಗ್​ರಾಜ್​ನ ದರ್ಗಂಜ್ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

    ದಶಕಗಳಿಂದ ಮಹಾಕುಂಭ, ಕುಂಭ ಮತ್ತು ಮಾಘ ಮೇಳಗಳಲ್ಲಿ ಸೌಲಭ್ಯ ಒದಗಿಸುತ್ತಿದ್ದ ಈ ಸಂಸ್ಥೆ 2017ರಿಂದ 2019ರ ಜುಲೈ 6ರ ವರೆಗೆ ನೀಡಿದ್ದ ಟೆಂಟ್​ ಇತ್ಯಾದಿ ಸೌಕರ್ಯಕ್ಕೆ 196.24 ಕೋಟಿ ರೂಪಾಯಿ ಬಿಲ್ ಸಲ್ಲಿಸಿತ್ತು. ಆದರೆ ಅಸಲಿ ಬಿಲ್​ 86.38 ಕೋಟಿ ರೂಪಾಯಿ ಮಾತ್ರ ಎಂದು ಕುಂಭ ಮೇಳದ ಹೆಚ್ಚುವರಿ ಅಧಿಕಾರಿ ದಯಾನಂದ ಪ್ರಸಾದ್ ಪತ್ತೆ ಹಚ್ಚಿದ್ದರು.

    ಮೋಸ ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ಹನ್ನೊಂದು ಮಂದಿ ವಿರುದ್ಧ ಎಫ್​​ಐಆರ್ ದಾಖಲಿಸಲಾಗಿದೆ. ಮಾತ್ರವಲ್ಲ ಪ್ರಯಾಗ್ ರಾಜ್​ ಮೇಳ ಪ್ರಾಧಿಕಾರವು ಮುಂದಿನ ಐದು ವರ್ಷಗಳ ಕಾಲ ಈ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದೆ. ‘ಈ ಸಂಸ್ಥೆಯು ನಕಲಿ ಬಿಲ್​ಗಳನ್ನು ಸೃಷ್ಟಿಸಿ ಸಲ್ಲಿಸಿದ್ದು, ಎಲ್ಲ ಇಲಾಖೆಗಳಿಂದ ಇವರಿಗೆ ಪಾವತಿಯಾಗಿರುವ ಮೊತ್ತ 171 ಕೋಟಿ ರೂಪಾಯಿ’ ಎಂದು ಪ್ರಯಾಗ್​ರಾಜ್ ಮೇಳ ಪ್ರಾಧಿಕಾರದ ಅಧಿಕಾರಿ ಕಿರಣ್ ಆನಂದ್ ತಿಳಿಸಿದ್ದಾರೆ. ಮಾತ್ರವಲ್ಲ ಈ ಸಂಬಂಧ ಮಧ್ಯಸ್ಥಿಕೆಗೆ ಮುಂದಾಗಿರುವ ಲಲ್ಲೂಜಿ ಆ್ಯಂಡ್ ಸನ್ಸ್ ಅದಕ್ಕಾಗಿ ಸಲ್ಲಿಸಿರುವ ದಾಖಲೆಗಳಲ್ಲೂ ಅಧಿಕಾರಿಗಳ ಸಹಿ ನಕಲು ಮಾಡಿರುವುದು ಕಂಡು ಬಂದಿದೆ ಎಂದು ಕಿರಣ್ ತಿಳಿಸಿದ್ದಾರೆ. (ಏಜೆನ್ಸೀಸ್​)

    ಶಿವಮೊಗ್ಗದಲ್ಲಿ 16 ವರ್ಷದ ಬಾಲಕಿ ಮೇಲೆ ಭೀಕರ ಗ್ಯಾಂಗ್​ರೇಪ್​: ನಿರ್ಭಯಾ, ಅರುಣಾ ಶಾನುಭಾಗ್​ ಪ್ರಕರಣ ಹೋಲಿಕೆ

    ತೃತೀಯ ಲಿಂಗಿ ಅಪ್ಪನಿಗೆ ಅಂಡಾಣು ನೀಡಿ ಮಗು ನೀಡ ಹೊರಟಿದ್ದಾಳೆ ಸಲಿಂಗಿ ಮಗಳು!

    50 ರೂ ಸಂಭಾವನೆ ಪಡೆಯುತ್ತಿದ್ದ ಶಾರುಖ್​ ಖಾನ್ ಕಡೆಯಿರುವ ಈ ನಾಲ್ಕು ಪ್ರಾಪರ್ಟಿ ಬೆಲೆ ಈಗ ಸಾವಿರ ಕೋಟಿ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts