More

    ಶಿವಮೊಗ್ಗದಲ್ಲಿ 16 ವರ್ಷದ ಬಾಲಕಿ ಮೇಲೆ ಭೀಕರ ಗ್ಯಾಂಗ್​ರೇಪ್​: ನಿರ್ಭಯಾ, ಅರುಣಾ ಶಾನುಭಾಗ್​ ಪ್ರಕರಣ ಹೋಲಿಕೆ

    ಶಿವಮೊಗ್ಗ: ನಿರ್ಭಯಾ ಪ್ರಕರಣ, ಅರುಣಾ ಶಾನುಭಾಗ್ ಪ್ರಕರಣವನ್ನು ನೆನಪಿಸುವ ಗ್ಯಾಂಗ್ ರೇಪ್ ಪ್ರಕರಣವೊಂದು ಶಿವಮೊಗ್ಗದಲ್ಲಿ ನಡೆದಿದೆ. ಅಪ್ರಾಪ್ತೆಯನ್ನು ಕಾರಿನಲ್ಲಿ ಕರೆದೊಯ್ದು ಮೂವರು ಅತ್ಯಾಚಾರ ಎಸಗಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತ ತಾಯಿಯ ಆರೈಕೆಯಲ್ಲಿದ್ದ ಅಪ್ರಾಪ್ತೆ ಮೇಲೆ ಆಸ್ಪತ್ರೆಯ ವಾರ್ಡ್ ಬಾಯ್ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ.

    ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಮಹಿಳೆಯೊಬ್ಬರು ಕರೊನಾ ಸೋಂಕಿನಿಂದಾಗಿ ಮೆಗ್ಗಾನ್ ಕರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೈಕೆಗೆಂದು ಅವರ 16 ವರ್ಷದ ಮಗಳೂ ವಾರ್ಡ್ ಹೊರಗೆ ಇರುತ್ತಿದ್ದಳು. ಮೂರ್ನಾಲ್ಕು ದಿನಗಳಿಂದ ಆಕೆಗೆ ಊಟ, ತಿಂಡಿ ತಂದುಕೊಟ್ಟು ಆಸ್ಪತ್ರೆಯ ವಾರ್ಡ್ ಬಾಯ್ ಮನೋಜ ಎಂಬಾತ ಸ್ನೇಹ ಗಳಿಸಿದ್ದ. ಕಳೆದ ಮೂರು ದಿನಗಳಿಂದ ಶಿವಮೊಗ್ಗ ಸೆಕ್ಷನ್ 144 ಇರುವುದರಿಂದ ಎಲ್ಲೂ ಊಟ, ತಿಂಡಿ ಸರಿಯಾಗಿ ಸಿಗುತ್ತಿರಲಿಲ್ಲ. ಇದನ್ನೇ ದುರ್ಬಳಕೆ ಮಾಡಿಕೊಂಡ ಮನೋಜ ಶನಿವಾರ ರಾತ್ರಿ ಬಾಲಕಿಗೆ ಹೊರಗೆ ಕರೆದುಕೊಂಡು ಹೋಗಿ ಊಟ ಕೊಡಿಸುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ಬಾಲಕಿ ಹೊರಬರಲು ಒಪ್ಪಿದ್ದಾಳೆ.

    ಇದನ್ನೂ ಓದಿ:  ಮೂವರು ಶಾಸಕರಿದ್ದರೂ ಮಾರ್ಜೆನಹಳ್ಳಿ ಗ್ರಾಮ ಪಂಚಾಯಿತಿ ಅನಾಥ: 2500ಕ್ಕೂ ಹೆಚ್ಚು ವಸತಿ ಹೀನರು, ಗ್ರಾಮ ಸ್ವರಾಜ್ಯದ ಕನಸಿಗೆ ಅಡ್ಡಿ

    ಪೂರ್ವ ಯೋಜಿತ
    ಇದಕ್ಕೂ ಮುನ್ನ ಮನೋಜ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಸಂಚು ರೂಪಿಸಿದ್ದಾನೆ. ಆಸ್ಪತ್ರೆ ಹೊರಗೆ ಕಾರು ನಿಲ್ಲಿಸಿಕೊಂಡಿರುವಂತೆ ತನ್ನ ಸ್ನೇಹಿತರಾದ ಪ್ರಜ್ವಲ್ ಹಾಗೂ ವಿನಯ್ ಅವರಿಗೆ ತಿಳಿಸಿದ್ದ. ಪೂರ್ವ ಯೋಜನೆಯಂತೆ ಮನೋಜ ಬಾಲಕಿಯನ್ನು ಕರೆದುಕೊಂಡು ಕಾರಿನತ್ತ ಬಂದಿದ್ದಾನೆ. ಕಾರಿನಲ್ಲಿ ಮನೋಜ, ಪ್ರಜ್ವಲ್, ವಿನಯ್ ಜತೆಗೆ ಇನ್ನೂ ಒಬ್ಬ ಇದ್ದ ಎನ್ನಲಾಗುತ್ತಿದೆ.  ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ಬಾಲಕಿ ಮೇಲೆ ಮೊದಲು ಮನೋಜ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆತನ ಮೂವರು ಸ್ನೇಹಿತರೂ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ.

    ಇದನ್ನೂ ಓದಿ: ಮತ್ತೊಂದು ಬೈರಮಂಗಲ ಆಗಲಿದೆ ಬಿಡದಿ: ತ್ಯಾಜ್ಯ ವಿದ್ಯುತ್ ಘಟಕ ಕೈಬಿಡಿ, ಮಾಜಿ ಶಾಸಕ ಬಾಲಕೃಷ್ಣ ಒತ್ತಾಯ

    ಬಳಿಕ ಆಕೆಯನ್ನು ಆಸ್ಪತ್ರೆಗೆ ತಂದು ಬಿಟ್ಟಿದ್ದಾರೆ. ಆಘಾತಕ್ಕೆ ಒಳಗಾಗಿದ್ದ ಬಾಲಕಿ ತನ್ನ ತಾಯಿ ಬಳಿ ನಡೆದಿರುವ ಘಟನೆಯನ್ನು ವಿವರಿಸಿದ್ದಾಳೆ. ವಿಷಯ ಮೆಗ್ಗಾನ್ ಆಸ್ಪತ್ರೆ ಸಖಿ ಕೇಂದ್ರದ ಸಿಬ್ಬಂದಿಗೆ ತಿಳಿದ ಬಳಿಕ ಬಾಲಕಿಯನ್ನು ದಾಖಲಿಸಿಕೊಂಡು ಪರೀಕ್ಷೆ ನಡೆಸಿದರು. ಆಪ್ತ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡುತ್ತಿದ್ದಾರೆ. ದೊಡ್ಡಪೇಟೆ ಪೊಲೀಸರು ಪ್ರಮುಖ ಆರೋಪಿ ಮನೋಜನನ್ನು ಬಂಧಿಸಿದ್ದು, ಆತನ ಉಳಿದ ಸ್ನೇಹಿತರಿಗಾಗಿ ಹುಡುಕಾಟ ನಡೆಸಿದ್ದಾರೆ.

    ಪರಮಾಧಿಕಾರ ಬಳಸೋದಕ್ಕೆ ಅವಕಾಶ ಕೊಡಬೇಡಿ : ದೀದಿ ಸರ್ಕಾರಕ್ಕೆ ಗರ್ವನರ್ ವಾರ್ನಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts