More

    ವಾಟ್ಸಪ್​ನಲ್ಲೇ ಪಡೆಯಬಹುದು ನಿಮ್ಮ LIC ಪಾಲಿಸಿ ಬಗ್ಗೆ ಮಾಹಿತಿ!

    ನವದೆಹಲಿ: ಇನ್ನು ಇಮ್ಮ ಎಲ್​ಐಸಿ ಪಾಲಿಸಿಯ ಮಾಹಿತಿಗಾಗಿ ಏಜೆಂಟರಲ್ಲಿ ಅಥವಾ ಹತ್ತಿರದ ಕೇಂದ್ರಕ್ಕೆ ಹೋಗಿ ಪದೇ ಪದೆ ಹೋಗಿ ಕೇಳಬೇಕಿಲ್ಲ. ಜೀವ ವಿಮೆಯ ಏನೇ ಮಾಹಿತಿ ಬೇಕಿದ್ದರೂ ಇನ್ನು ಬೆರಳತುದಿಯಲ್ಲಿ ಲಭ್ಯ ಆಗಲಿದೆ.

    ಪಾಲಿಸಿದಾರರಿಗಾಗಿ, ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಮೊದಲ ವಾಟ್ಸಪ್​ ಸೇವೆಯನ್ನು ಪರಿಚಯಿಸಿದೆ. LIC ಅಧ್ಯಕ್ಷ ಎಂ.ಆರ್​ ಕುಮಾರ್, ಕಂಪನಿಯ ಕೆಲವು ಸೇವೆಗಳನ್ನು ಪಾಲಿಸಿದಾರರಿಗೆ ವಾಟ್ಸಪ್​ ಮೂಲಕ ಪರಿಚಯಿಸಿದ್ದಾರೆ. 8976862090 ಮೊಬೈಲ್ ಸಂಖ್ಯೆಗೆ “ಹಾಯ್” ಎಂದು ಸಂದೇಶ ಕಳಿಸಿದರೆ ಸಾಕು, ಪಾಲಿಸಿದಾರರು ಮನೆಯಲ್ಲೇ ಕುಳಿತು ಪಾಲಿಸಿ ಸ್ಟೇಟ್​ಮೆಂಟ್​, LIC ಸರ್ವೀಸಸ್​ ಲಿಂಕ್​ಗಳು, ಪಾಲಿಸಿ ಪ್ರಾರಂಭಿಸುವ ಅಥವಾ ಕೊನೆಗೊಳಿಸುವ ಸೇವೆಯನ್ನು ನೀಡುತ್ತಿದೆ.

    ‘LIC ಪೋರ್ಟಲ್‌ನಲ್ಲಿ ತಮ್ಮ ಪಾಲಿಸಿಗಳನ್ನು ನೋಂದಾಯಿಸಿದ ಪಾಲಿಸಿದಾರರು ವಾಟ್ಸಪ್​ನಲ್ಲಿ ಈ ಸೇವೆಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು LIC ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ, ಪಾಲಿಸಿದಾರರು ಈ ಮೊಬೈಲ್ ಸಂಖ್ಯೆ 8976862090 ಗೆ ‘ಹಾಯ್’ ಎಂದು ಸಂದೇಶ ಕಳುಹಿಸಬೇಕು. ಆಗ ಮೇಲೆ ಹೇಳಿದ ಸೇವೆಗಳ ವಿವರ ಕಾಣಸಿಗುತ್ತದೆ. ನಂತರ ಬೇಕಾದದ್ದನ್ನು ಆರಿಸಬಹುದು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts