More

    ಅಂಗವಿಕಲರಿಗೆ ವಿಶೇಷ ಆರೋಗ್ಯ ವಿಮೆ ಯೋಜನೆ ಜಾರಿ: ಸಿಎಂ ಬೊಮ್ಮಾಯಿ ಘೋಷಣೆ

    ಬೆಂಗಳೂರು: ಅಂಗವಿಕಲರಿಗೆ 5 ಲಕ್ಷ ರೂ.ವರೆಗಿನ ವಿಶೇಷ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

    ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ವತಿಯಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಅಂಗವಿಕಲ ಮಕ್ಕಳಿಗೆ ಎಲ್ಲ ಮಕ್ಕಳಂತೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಯೋಜನೆ ಅನುಷ್ಠಾನಕ್ಕೆ ಮುಂದಿನ ಬಜೆಟ್‌ನಲ್ಲಿ ಹಣ ಮೀಸಲಿಡಲಾಗುವುದು. ಸರ್ಕಾರ ನೀಡುವ ಮನೆಗಳಲ್ಲಿ ಅಂಗವಿಕಲರಿಗೆ ಶೇ.3 ಮೀಸಲು ಕಲ್ಪಿಸಲಾಗುವುದು. ಬುದ್ದಿಮಾಂಧ್ಯ ಮಕ್ಕಳಿಗೆ ಶೆಲ್ಟರ್ ವರ್ಕ್‌ಶಾಪ್ ಮಾಡಲಾಗುವುದು. ತ್ರಿಚಕ್ರ ಸೈಕಲ್ ವಿತರಣೆಗೆ ಈಗಾಗಲೆ 15 ಕೋಟಿ ರೂ. ಅನುದಾನ ನೀಡಿದ್ದರೂ ಮತ್ತೆ ಹೆಚ್ಚುವರಿಯಾಗಿ 25 ಕೋಟಿ ರೂ.ನೀಡಲಾಗುವುದು. ಬರುವ ಬಜೆಟ್‌ನಲ್ಲಿ ಇನ್ನಷ್ಟು ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಿಎಂ ಭರವಸೆ ನೀಡಿದರು.

    ಸಿರವಾರ ಪಿಎಸ್​ಐ ಗೀತಾಂಜಲಿ ಶಿಂಧೆ ವಿರುದ್ಧ ಗಂಭೀರ ಆರೋಪ: ಡೆತ್​ನೋಟ್​ ಬರೆದಿಟ್ಟು ಯುವಕ ನಾಪತ್ತೆ

    VIDEO: ಪೊಲೀಸರ ಅಮಾನವೀಯತೆಗೆ ತನ್ನ ಕಾಲುಗಳನ್ನೇ ಕಳೆದುಕೊಂಡ ಬೀದಿ ಬದಿ ವ್ಯಾಪಾರಿ!

    ‘ವರಾಹ ರೂಪಂ‌’ ಈಸ್​ ಬ್ಯಾಕ್​; ಇಂದಿನಿಂದ ಚಿತ್ರಮಂದಿರ, ಓಟಿಟಿ ಸೇರಿದಂತೆ ಎಲ್ಲೆಡೆ ಹಾಡು ಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts