More

    ವಸಿಷ್ಠ ಸಿಂಹ-ಹರಿಪ್ರಿಯಾ ಮದುವೆ ಸುದ್ದಿ ಪಕ್ಕಾ … ಪುಷ್ಠಿ ನೀಡಿದ ಹೊಸ ಪೋಸ್ಟ್​!

    ಬೆಂಗಳೂರು: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸದ್ಯದಲ್ಲೇ ಮದುವೆಯಾಗಲಿದ್ದಾರೆ, ಅವರ ನಿಶ್ಚಿತಾರ್ಥವೂ ಗುಟ್ಟಾಗಿ ನಡೆದಿದೆ ಎಂದು ಸುದ್ದಿ ಹರಿದಾಡುತ್ತಿರುವುದು ಗೊತ್ತೇ ಇದೆ. ಈಗ ಅದು ನಿಜವಾಗಿದ್ದು, ಇನ್ನು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅಧಿಕೃತವಾಗಿ ಈ ಕುರಿತು ಘೋಷಿಸುವುದಷ್ಟೇ ಬಾಕಿ ಇದೆ.

    ಇದನ್ನೂ ಓದಿ: ನಟ-ನಿರ್ದೇಶಕ ರಿಷಬ್‌ ಶೆಟ್ಟಿಗೆ ಪ್ರತಿಷ್ಠಿತ ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿ ಪ್ರದಾನ

    ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಮದುವೆಯ ಬಗ್ಗೆ ಇಬ್ಬರಲ್ಲಿ ಯಾರೊಬ್ಬರೂ ಮಾತನಾಡಿರಲಿಲ್ಲ. ಎಷ್ಟೇ ಚರ್ಚೆಗಳಾದರೂ, ಇಬ್ಬರೂ ಸುಮ್ಮನೆ ಇದ್ದರು. ಹಾಗಾಗಿ, ಸುದ್ದಿ ನಿಜವೋ, ಸುಳ್ಳೋ ಅಥವಾ ಹೊಸ ಚಿತ್ರಕ್ಕಾಗಿ ಮಾಡುತ್ತಿರುವ ಪ್ರಚಾರವೋ ಎಂಬ ಗೊಂದಲ ಎಲ್ಲರಲ್ಲೂ ಇತ್ತು.

    ಹೀಗಿರುವಾಗಲೇ ಶುಕ್ರವಾರ ರಾತ್ರಿ, ಸೋಷಿಯಲ್​ ಮೀಡಿಯಾದಲ್ಲಿ ಹರಿಪ್ರಿಯಾ ಒಂದು ಪೋಸ್ಟ್​ ಹಾಕಿದ್ದರು. ಸಿಂಹದ ಕೈಯಲ್ಲಿ ಹೆಣ್ಣು ಮಗುವೊಂದು ಇರುವಂಥ ಫೋಟೋ ಅದು. ಅದರ ಜತೆಗೆ ‘ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು …’ ಎಂಬ ಶೀರ್ಷಿಕೆ ಇತ್ತು. ಅದನ್ನು ನೋಡಿ, ಅವರ ಮತ್ತು ವಸಿಷ್ಠ ಸಿಂಹರ ನಡುವೆ ಕೇಳಿಬರುತ್ತಿದ್ದ ಸುದ್ದಿಗಳು ನಿಜ ಎನ್ನುವಂತಿತ್ತು

    ಈಗ ಅದೇ ಫೋಟೋವನ್ನು ವಸಿಷ್ಠ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘ಎಂದೂ ನಿನ್ನ ನೆರಳಾಗಿ ಕಾಯುವೆ ನಾನು …’ ಎಂದು ಬರೆದುಕೊಂಡಿದ್ದಾರೆ. ಅಲ್ಲಿಗೆ, ಅವರು ಹರಿಪ್ರಿಯಾ ಅವರನ್ನು ವರಿಸುವುದು ಪಕ್ಕಾ ಆಗಿದೆ. ಆದರೆ, ಯಾವಾಗ, ಎಲ್ಲಿ ಎಂಬುದಷ್ಟೇ ಸ್ಪಷ್ಟವಾಗಬೇಕಿರುವ ವಿಷಯ.

    ಇದನ್ನೂ ಓದಿ: ರಿಪಬ್ಲಿಕ್ ಸ್ಟುಡಿಯೋದಲ್ಲಿ ‘ವಿಜಯಾನಂದ’ ಚಿತ್ರತಂಡ; ಡಿ. 9ರಂದು ಅದ್ಧೂರಿ ಬಿಡುಗಡೆ …

    ಅಂದಹಾಗೆ, ವಸಿಷ್ಠ ಮತ್ತು ಹರಿಪ್ರಿಯಾ ಇಬ್ಬರೂ ‘ಎವಡು’ ಚಿತ್ರದ ಕನ್ನಡ ರೀಮೇಕ್​ನಲ್ಲಿ ನಟಿಸುತ್ತಿದ್ದು, ಅದು ಮೊದಲು ಬಿಡುಗಡೆಯಾಗುತ್ತದೋ ಅಥವಾ ಅವರಿಬ್ಬರೂ ಮೊದಲು ಮದುವೆಯಾಗುತ್ತಾರೋ ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಪತಿಯ ಸ್ನೇಹಿತನ ಜತೆ 2ನೇ ಮದುವೆಗೆ ತಯಾರಿ! ನಟಿ ಮೀನಾ ಕೊಟ್ಟ ಸ್ಪಷ್ಟನೆ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts