More

    ಜಿಮ್ನಾಸ್ಟಿಕ್ಸ್​ ಕೋಚ್​ಗಳ ಕರಾಳ ಮುಖ ಅನಾವರಣ ಮಾಡಿದ ಮಾಜಿ ಜಿಮ್ನಾಸ್ಟ್​ಗಳು…!

    ಲಂಡನ್​: ಒಲಿಂಪಿಕ್​ ಸ್ಟಾರ್​​ ಸೇರಿದಂತೆ ಮಾಜಿ ಬ್ರಿಟಿಷ್​ ಜಿಮ್ನಾಸ್ಟ್​ಗಳು ತಮ್ಮ ಕೋಚ್​ಗಳ ಕರಾಳ ಮುಖವನ್ನು ಅನಾವರಣ ಮಾಡಿದ್ದಾರೆ. ಥಳಿಸಿವುದಲ್ಲದೇ ನಮ್ಮನ್ನು ಹಸಿವಿನಿಂದ ನರಳಿಸುವ ಮೂಲಕ ಬೆದರಿಸುವ ಸಂಸ್ಕೃತಿಗೆ ಮೊರೆ ಹೋಗಿದ್ದರು ಎಂದು ಆರೋಪಿಸಿದ್ದಾರೆ.

    ಕಾಮನ್​ವೆಲ್ತ್​ ಜಿಮ್ನಾಸ್ಟಿಕ್ಸ್​ ಛಾಂಪಿಯನ್​ ಹಾಗೂ 2000ರಲ್ಲಿ ನಡೆದ ಸಿಡ್ನಿ ಒಲಿಪಿಂಕ್​ ಸ್ಪರ್ಧೆಯಲ್ಲಿ ಬ್ರಿಟನ್​ ಪ್ರತಿನಿಧಿಸಿದ್ದ ಲಿಸಾ ಮಾಸನ್, ತಮ್ಮ ಕೋಚ್​ಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಾವು 10ನೇ ವಯಸ್ಸಿನಲ್ಲಿದ್ದಾಗ ಈ ಕರಾಳ ಘಟನೆಗಳು ನಡೆದಿದ್ದಾಗಿ ಹೇಳಿದ್ದಾರೆ.​

    ಇದನ್ನೂ ಓದಿ: ಭಯಾನಕ ವಿಡಿಯೋ| ಫುಟ್​ಬಾಲ್ ತರಬೇತಿ ವೇಳೆ ಸಿಡಿಲು ಬಡಿತ: ಕೋಮಾಗೆ ಜಾರಿದ ಬಾಲಕ!

    ಸದ್ಯ 38 ವಯಸ್ಸಿನ ಲಿಸಾ, ಕೋಚ್​ ಕರಾಳ ಘಟನೆಯನ್ನು ಮೆಲಕು ಹಾಕಿದ್ದಾರೆ. ಕೆಟ್ಟ ಪದಗಳಿಂದ ನಿಂದಿಸುತ್ತಿದ್ದಲ್ಲದೆ, ತರಬೇತಿ ನಡೆಯುವ ಏರಿಯಾದ ಅಡಿಯಲ್ಲಿ ಆಸ್ಟ್ರೋಟೂರ್ಫ್ ಅನ್ನು ಇಟ್ಟು ಅದರ ಮೇಲೆ ಕಾಲಿಡುವಂತೆ ಬಲವಂತ ಮಾಡಿ ಕೈಯಲ್ಲಿ ರಕ್ತ ಬರೋವರೆಗೂ ತರಬೇತಿ ಮಾಡಿಸುತ್ತಿದ್ದರಂತೆ.

    ಮಾಜಿ ಜೂನಿಯರ್ ಯುರೋಪಿಯನ್ ಮತ್ತು ಬ್ರಿಟಿಷ್ ಜಿಮ್ನಾಸ್ಟಿಕ್ಸ್ ಛಾಂಪಿಯನ್ ಕ್ಯಾಥರಿನ್​ ಲಯಾನ್ಸ್​ (19) ಸಹ ಆರೋಪಿಸಿದ್ದು, ಕೋಚ್​ಗಳಿಂದ ಹಲ್ಲೆಗೆ ಒಳಗಾಗಿದ್ದೆ ಎಂದಿದ್ದಾರೆ.

    ಇಬ್ಬರು ಮಾಜಿ ಜಿಮ್ನಾಸ್ಟ್​ಗಳು ಮಾಧ್ಯಮ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಕೋಲುಗಳಿಂದ ನಮ್ಮ ಮೇಲೆ ಹಲ್ಲೆ ನಡೆದಿದೆ. ಅಲ್ಲದೆ ಕೆಲವೊಮ್ಮೆ ಊಟ ಸರಿಯಾಗಿ ಕೊಡದೆ ವಾರಗಳ ಕಾಲ ಹಸಿವಿನಿಂದ ನರಳಿಸಿದ್ದಾರೆ. ಕ್ರೀಡೆಯಿಂದ ಹೊರಗುಳಿದ ದಿನದಿಂದ ನಾವು ಖಿನ್ನತೆಗೆ ಒಳಗಾಗಿ ಆಪ್ತ ಸಮಾಲೋಚನೆ ತೆಗೆದುಕೊಳ್ಳುತ್ತಿದ್ದೇವೆ ಎಂದಿದ್ದಾರೆ.

    ಇದನ್ನೂ ಓದಿ: VIDEO| ಕರೊನಾಗೂ ಕ್ಯಾರೆ ಎನ್ನದೇ ಡ್ಯಾನ್ಸ್​ ಮಾಡಿ ಪತ್ನಿಗೆ ಧೈರ್ಯ ತುಂಬಿದ ಸೋಂಕಿತ…!

    ನಮ್ಮ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನಡೆದಿದೆ. ಸಾಕಷ್ಟು ಬಾರಿ ನೋವು ನಿವಾರಕ ಚುಚ್ಚುಮದ್ದುಗಳನ್ನು ತೆಗೆದುಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದ್ದೇವೆ ಎಂದು ತಮ್ಮ ನೋವುಗಳನ್ನು ಬಹಿರಂಗಪಡಿಸಿದ್ದಾರೆ.

    ಜೂನ್​ 24ರಂದು “ಅಥ್ಲಿಟಿ ಎ” ಚಿತ್ರವು ನೆಟ್​​ಫ್ಲಿಕ್ಸ್​ ಫಿಲ್ಮ್​ನಲ್ಲಿ ಬಿಡುಗಡೆಯಾದ ಬೆನ್ನಲ್ಲೇ ಆರೋಪಗಳು ಕೇಳಿಬಂದಿವೆ. ಈ ಚಿತ್ರದಲ್ಲಿ ಯುಎಸ್​ ತಂಡದ ವೈದ್ಯ ಲಾರಿ ನಾಸ್ಸರ್​ ಅಪರಾಧಗಳನ್ನು ಚಿತ್ರಕರೀಸಲಾಗಿದೆ. ಈತ ನೂರಾರು ಅಪ್ರಾಪ್ತ ಅಮೆರಿಕನ್​ ಜಿಮ್ನಾಸ್ಟ್​ಗಳನ್ನು ತಮ್ಮ ಕಾಮಕ್ರೀಡೆಗೆ ಬಳಸಿಕೊಂಡಿರುವ ಆರೋಪವಿದೆ. ಚಿತ್ರದ ಬೆನ್ನಲ್ಲೇ ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ನಾಸ್ಸರ್​ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದನ್ನು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಇನ್ನು ಕೆಲವು ಕೋಚ್​ಗಳ ಬಗ್ಗೆಯೂ ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್​)

    VIDEO| ಪಾಕ್​ ಧ್ವಜ ಧರಿಸಿ ಭಾರತ ಬಾವುಟ ಕಾಲಲ್ಲಿ ಮೆಟ್ಟಿ ನಿಂತಿರುವ ಈ ದ್ರೋಹಿ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts