More

    2020ರಲ್ಲಿ ವರ್ಷ ಅತಿ ಹೆಚ್ಚು ಗಳಿಸಿದ್ದು ಈ 23 ವರ್ಷದ ಯುವತಿಯೇ! ಅಷ್ಟಕ್ಕೂ ಈಕೆ ಮಾಡುವುದೇನು ಗೊತ್ತಾ?

    ವಾಷಿಂಗ್ಟನ್​: ಅತಿ ಚಿಕ್ಕ ವಯಸ್ಸಿಗೆ ಶ್ರೀಮಂತರಾಗಿ ಹೊರಹೊಮ್ಮುವವರು ಅನೇಕರಿದ್ದಾರೆ. ಆದರೆ ಕೇವಲ 23 ವರ್ಷಕ್ಕೆ ಯುವತಿಯೊಬ್ಬಳು ಪ್ರಪಂಚದಲ್ಲೇ ಅತಿ ಹೆಚ್ಚು ಗಳಿಸುವವರ ಸಾಲಿಗೆ ಬರುತ್ತಾಳೆಂದರೆ ನಂಬುತ್ತೀರಾ? ಆಶ್ಚರ್ಯವಾದರೂ ಇದು ಸತ್ಯ. ಅಮೆರಿಕದ ಕೈಲಿ ಜೆನ್ನರ್​ 2020ರ ಅತಿ ಹೆಚ್ಚು ಗಳಿಕೆ ಪಡೆದ ಶ್ರೀಮಂತೆ!

    ಇದನ್ನೂ ಓದಿ: ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!

    ಕೈಲಿಗೆ ಈಗ 23 ವರ್ಷ. ಅಮೆರಿಕ ಮೂಲದ ಈಕೆ ಅಲ್ಲಿನ ರಿಯಾಲಿಟಿ ಟಿವಿಯಲ್ಲಿ ಸೂಪರ್​ಸ್ಟಾರ್​ ಆಗಿದ್ದಾಳೆ. ಹಾಗೆಯೇ ಈಕೆ ಕಾಸ್ಮೆಟಿಕ್​ ಬಿಸಿನೆಸ್​ನ್ನೂ ನಡೆಸುತ್ತಾಳೆ. ಇವೆರೆಡು ಕೆಲಸದಿಂದ ಈಕೆ 2020ರಲ್ಲಿ 540 ಮಿಲಿಯನ್​ ಡಾಲರ್​ ಅಂದರೆ ಸರಿಸುಮಾರು 3,972 ಕೋಟಿ ರೂಪಾಯಿ. ಫೋರ್ಬ್ಸ್​ ನಿಯತಕಾಲಿಕೆ ಬಿಡುಗಡೆ ಮಾಡಿರುವ ಹೆಚ್ಚು ಆದಾಯ ಗಳಿಸಿದವರ ಪಟ್ಟಿಯಲ್ಲಿ ಈಕೆಯ ಹೆಸರ ಮೊದಲಿದೆ.

    ಫೋರ್ಬ್ಸ್​ ಪಟ್ಟಿಯಲ್ಲಿ ಅಮೆರಿಕದ ರ್ಯಾಪರ್​ ಕೆನ್ನಿ ವೆಸ್ಟ್ ಎರಡನೇ ಸ್ಥಾನದಲ್ಲಿದ್ದು, ಟೆನಿಸ್​ ಆಟಗಾರ ರೋಜರ್​ ಫೆಡರರ್​ ಮೂರನೇ ಸ್ಥಾನ, ಪೋರ್ಚುಗಲ್ ಸೂಪರ್​ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ನಾಲ್ಕನೇ ಸ್ಥಾನ ಮತ್ತು ಅರ್ಜೆಂಟೀನಾದ ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಐದನೇ ಸ್ಥಾನದಲ್ಲಿದ್ದಾರೆ.

    ಇದನ್ನೂ ಓದಿ: ಕೇರಳ ಸ್ಥಳೀಯ ಚುನಾವಣೆ ಫಲಿತಾಂಶ: ಒಂದೇ ಮತದಿಂದ ಕಾಂಗ್ರೆಸ್​ ಮೇಯರ್​ ಅಭ್ಯರ್ಥಿಯನ್ನೇ ಮಣಿಸಿದ ಬಿಜೆಪಿ; ಶಬರಿಮಲೆಯಲ್ಲೂ ಅರಳಿದ ಕಮಲ

    ಕ್ಯಾನಿ ವೆಸ್ಟ್​ 2020ರಲ್ಲಿ 170 ಮಿಲಿಯನ್​ ಡಾಲರ್​ ಗಳಿಸಿದ್ದಾರೆ. 2020 ರ ಫೋರ್ಬ್ಸ್ ಟಾಪ್ 10 ಪಟ್ಟಿಯಲ್ಲಿ, ಕುಸ್ತಿ ಪಟು ಮತ್ತು ಹಾಲಿವುಡ್ ನಟ ಡ್ವೇನ್ ಜಾನ್ಸನ್, ಪ್ರಸಿದ್ಧ ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮಾರ್, ಅಮೇರಿಕನ್ ನಟ ಟೇಲರ್ ಪೆರ್ರಿ ಮತ್ತು ಅಮೆರಿಕದ ಹೊವಾರ್ಡ್ ಸ್ಟೈನ್ ಕೂಡ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

    ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts