More

    ಕೇರಳ ಸ್ಥಳೀಯ ಚುನಾವಣೆ ಫಲಿತಾಂಶ: ಒಂದೇ ಮತದಿಂದ ಕಾಂಗ್ರೆಸ್​ ಮೇಯರ್​ ಅಭ್ಯರ್ಥಿಯನ್ನೇ ಮಣಿಸಿದ ಬಿಜೆಪಿ; ಶಬರಿಮಲೆಯಲ್ಲೂ ಅರಳಿದ ಕಮಲ

    ಕೊಚ್ಚಿ: ಕೇರಳದಲ್ಲಿ ಸ್ಥಳೀಯ ಚುನಾವಣೆಯ ಮತಗಳ ಎಣಿಕೆ ಇಂದು ನಡೆಯುತ್ತಿದೆ. 244 ಮತಎಣಿಕಾ ಕೇಂದ್ರಗಳಲ್ಲಿ ಎಣಿಕೆ ನಡೆಯುತ್ತಿದ್ದು, ಬಹುತೇಕ ಕೇಂದ್ರಗಳಿಂದ ಫಲಿತಾಂಶ ಹೊರಬಿದ್ದಿದೆ. ಕೊಚ್ಚಿ ಕಾರ್ಪೋರೇಷನ್​ ಉತ್ತರ ಐಲ್ಯಾಂಡ್​ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಭಾರಿ ಪೈಪೋಟಿ ಉಂಟಾಗಿದ್ದು, ಬಿಜೆಪಿ ಒಂದೇ ಒಂದು ಮತದಿಂದ ಕಾಂಗ್ರೆಸ್​​ನ್ನು ಮಣಿಸಿದೆ.

    ಇದನ್ನೂ ಓದಿ: ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದವ ಪಂಚಾಯಿತಿ ಆವರಣದಲ್ಲೇ ಸಾವು!

    ಕಾಂಗ್ರೆಸ್​ನ ಮೇಯರ್​ ಅಭ್ಯರ್ಥಿ ಎನ್​.ವೇಣುಗೋಪಾಲ್​ ಕೊಚ್ಚಿ ಉತ್ತರ ಭಾಗದಿಂದ ಸೋಲನ್ನು ಕಂಡಿದ್ದಾರೆ. ಈ ಹಿಂದೆ ಕೊಚ್ಚಿ ದಕ್ಷಿಣ ಭಾಗದಿಂದ ಸ್ಪರ್ಧಿಸಿದ್ದ ವೇಣುಗೋಪಾಲ್​ ಜಯ ಕಂಡಿದ್ದರು. ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದರು. ಗೆಲುವು ನಮ್ಮದೇ ಎನ್ನುವ ವಿಶ್ವಾಸ ಅವರಲ್ಲಿತ್ತು. ಆದರೆ ಕೇವಲ ಒಂದು ಮತದಿಂದ ಅವರು ಸೋಲುಂಡಿದ್ದಾರೆ.

    “ಇದು ನಮಗೆ ಖಚಿತವಾದ ಸ್ಥಾನವಾಗಿತ್ತು. ಏನಾಯಿತು ಎಂದು ನಾನು ಹೇಳಲಾರೆ. ಪಕ್ಷದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಮತದಾನ ಯಂತ್ರದಲ್ಲಿ ಸಮಸ್ಯೆ ಇತ್ತು. ಅದು ಬಿಜೆಪಿಯ ಗೆಲುವಿಗೆ ಕಾರಣವಾಗಿರಬಹುದು” ಎಂದು ವೇಣುಗೋಪಾಲ್ ತಿಳಿಸಿದ್ದಾರೆ. “ಮತದಾನ ಯಂತ್ರದ ಸಮಸ್ಯೆಯ ಬಗ್ಗೆ ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿಲ್ಲ. ನಿಖರವಾಗಿ ಏನಾಯಿತು ಎಂದು ಪರಿಶೀಲಿಸುತ್ತೇನೆ. ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ” ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಕತ್ತೆ ಸಗಣಿಯಿಂದ ತಯಾರಾಗುತ್ತೆ ಕಾರದ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ! ಸಿಎಂ ಯೋಗಿ ಸಂಘಟನೆಯ ನಾಯಕ ಅರೆಸ್ಟ್​!

    ಶಬರಿಮಲೆ ಕ್ಷೇತ್ರವಿರುವ ಪಂದಳಂ ಪುರಸಭೆಯಲ್ಲಿ 33 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ. ಈ ಮೂಲಕ ಎಲ್​ಡಿಎಫ್​ನಿಂದ ಅಧಿಕಾರವನ್ನು ಕಸಿದುಕೊಂಡು ಅಧಿಕಾರಕ್ಕೇರುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. (ಏಜೆನ್ಸೀಸ್​)

    ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

    ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts