More

    ಕತ್ತೆ ಸಗಣಿಯಿಂದ ತಯಾರಾಗುತ್ತೆ ಕಾರದ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ! ಸಿಎಂ ಯೋಗಿ ಸಂಘಟನೆಯ ನಾಯಕ ಅರೆಸ್ಟ್​!

    ಲಖನೌ: ನೀವು ಮನೆಯಲ್ಲಿ ಅಡುಗೆ ಮಾಡಲು ಕಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುರಿ, ಮಸಾಲೆ ಪುಡಿಗಳನ್ನು ಬಳಸುತ್ತೀರಲ್ಲವೇ? ಹಾಗಾದರೆ ಆ ಪುಡಿ ಎಲ್ಲಿ ತಯಾರಾಗುತ್ತದೆ, ಹೇಗೆ ತಯಾರಾಗುತ್ತದೆ ಎನ್ನುವ ವಿಚಾರವನ್ನು ಅವಶ್ಯವಾಗಿ ತಿಳಿದುಕೊಳ್ಳಿ. ಏಕೆಂದರೆ ಕತ್ತೆ ಸಗಣಿ, ಭೂಸಾ, ಆ್ಯಸಿಡ್​ ಬಳಸಿ ಈ ಎಲ್ಲ ಮಸಾಲೆ ಪದಾರ್ಥಗಳನ್ನು ತಯಾರಿಸುತ್ತಿದ್ದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ.

    ಇದನ್ನೂ ಓದಿ: ಧರಿಸಿರುವ ಒಳ ಉಡುಪು ಮಾರಿ ಸಂಪಾದಿಸುತ್ತಿದ್ದಾಳೆ ಈ ಬೆಡಗಿ! ತುದಿಗಾಲಲ್ಲಿ ನಿಂತಿರೋ 20 ಸಾವಿರ ಗ್ರಾಹಕರು

    ಕತ್ತೆ ಸಗಣಿಯಿಂದ ತಯಾರಾಗುತ್ತೆ ಕಾರದ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ! ಸಿಎಂ ಯೋಗಿ ಸಂಘಟನೆಯ ನಾಯಕ ಅರೆಸ್ಟ್​!
    ಕಾರ್ಖಾನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು

    ಉತ್ತರ ಪ್ರದೇಶದ ಹತ್ರಾಸದಲ್ಲಿ ಒಂದು ಮಸಾಲೆ ಪುಡಿಗಳ ಕಾರ್ಖಾನೆಯಿತ್ತು. ಸಿಎಂ ಯೋಗಿ ಆದಿತ್ಯಾನಾಥ ಅವರು 2002ರಲ್ಲಿ ಹಿಂದೂ ಯುವ ವಾಹಿನಿ ಎನ್ನುವ ಸಂಘಟನೆಯೊಂದನ್ನು ಆರಂಭಿಸಿದ್ದರು. ಈ ಸಂಘಟನೆಯ ಮಂಡಲ ಸಹ ಪ್ರಭಾರಿ ಅನೂಪ್​ ವರ್ಶ್ನಿ ಈ ಕಾರ್ಖಾನೆಯ ಮಾಲೀಕ. ಆದರೆ ಇತ್ತೀಚೆಗೆ ಈ ಕಾರ್ಖಾನೆಯ ಮೇಲೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ಕಾರ್ಖಾನೆಯ ಮೇಲೆ ದಾಳಿ ನಡೆಸಿದ್ದಾರೆ. ಆ ಸಮಯದಲ್ಲಿ ಕಾರ್ಖಾನೆಯ ನಿಜ ಬಣ್ಣ ಬಯಲಾಗಿದೆ.

    ಇದನ್ನೂ ಓದಿ: ನಾಗಲಾಪುರ ವೀರಸಿಂಹಾಸನ ಸಂಸ್ಥಾನ ಮಠದ ಅಭಿವೃದ್ಧಿಗೆ ಸಹಕರಿಸಿ : ಭಕ್ತರಲ್ಲಿ ಶಾಸಕ ಶ್ರೀನಿವಾಸಗೌಡ ಮನವಿ

    ಕತ್ತೆ ಸಗಣಿಯಿಂದ ತಯಾರಾಗುತ್ತೆ ಕಾರದ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ! ಸಿಎಂ ಯೋಗಿ ಸಂಘಟನೆಯ ನಾಯಕ ಅರೆಸ್ಟ್​!
    ಈ ಕಾರ್ಖಾನೆಯಲ್ಲಿ ಕಾರದ ಪುಡಿ, ಅರಿಶಿಣ ಪುಡಿ, ಕೊತ್ತಂಬುರಿ ಪುಡಿ ಸೇರಿ ಒಟ್ಟು 27 ಮಾದರಿಯ ಮಸಾಲ ಪುಡಿಗಳನ್ನು ತಯಾರಿಸಲಾಗುತ್ತದೆ. ನಿಜವಾದ ಮಸಾಲೆ ಪುಡಿಗೆ, ಕತ್ತೆಯ ಸಗಣಿ, ಭೂಸಾ, ಆ್ಯಸಿಡ್​ ಮತ್ತು ಬಣ್ಣಗಳನ್ನು ಬೆರಸಿ ಮಸಾಲೆ ಪದಾರ್ಥಗಳನ್ನು ಮಾಡಲಾಗುತ್ತಿತ್ತು. ಇದೀಗ ಕಾರ್ಖಾನೆಯ ಮೇಲೆ ದಾಳಿ ಮಾಡಿರುವ ಪೊಲೀಸರು 27 ಮಾದರಿಯ ಮಸಾಲೆ ಪುಡಿಗಳನ್ನು ಪರೀಕ್ಷೆಗೆಂದು ಲ್ಯಾಬೋರೇಟರಿಗೆ ಕಳುಹಿಸಿದ್ದಾರೆ. ಅನೂಪ್​ರನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಖಾಋನೆಯಲ್ಲಿದ್ದ 300ಕೆಜಿಗೂ ಹೆಚ್ಚು ಮಸಾಲೆ ಪದಾರ್ಥವನ್ನು ವಶಕ್ಕೆ ಪಡೆಯಲಾಗಿದೆ. ಲ್ಯಾಬೋರೇಟರಿಯಿಂದ ವರದಿ ಬಂದ ನಂತರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಜಂಟಿ ಮ್ಯಾಜಿಸ್ಟ್ರೇಟ್ ಪ್ರೇಮ್ ಪ್ರಕಾಶ್ ಮೀನಾ ತಿಳಿಸಿದ್ದಾರೆ. (ಏಜೆನ್ಸೀಸ್​)

    ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

    ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts