More

    ವರದಿಗಾರರ ಕೂಟದ ಪ್ರಪ್ರಥಮ ಪ್ರಧಾನ ಕಾರ್ಯದರ್ಶಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವ

    ಬೆಂಗಳೂರು: ವರದಿಗಾರರ ಕೂಟದ ಪ್ರಪ್ರಥಮ ಪ್ರಧಾನ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಪ್ರಹ್ಲಾದ ಕುಳಲಿ ಅವರು 86ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಸನ್ಮಾನಿಸಿ ಗೌರವಿಸಿದೆ.

    75ನೇ ಸ್ವಾತಂತ್ರ್ಯೋತ್ಸವದ ಸಲುವಾಗಿ ಕೆಯುಡಬ್ಲ್ಯುಜೆ ಹಿರಿಯ ಪತ್ರಕರ್ತರನ್ನು ಗೌರವಿಸುವ “ಮನೆಯಂಗಳದಲ್ಲಿ ಮನದುಂಬಿ ನಮನ” ಕಾರ್ಯಕ್ರಮದಲ್ಲಿ ಪ್ರಹ್ಲಾದ ಕುಳಲಿ ಅವರನ್ನು ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

    ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸಂಪಾದಕರಾಗಿದ್ದ ಮೊಹರೆ ಹನುಮಂತರಾಯರ ಗರಡಿಯಲ್ಲಿ ಪಳಗಿದ ಪ್ರಹ್ಲಾದ ಕುಳಲಿಯವರು 4 ದಶಕಗಳ ಕಾಲ ಒಂದೇ ಪತ್ರಿಕೆಯಲ್ಲಿ ಕೆಲಸ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಚ್ಚಾರಿತ್ರ್ಯದ ಪತ್ರಕರ್ತ ಎಂದು ಗುರುತಿಸಿಕೊಂಡಿದ್ದಕ್ಕೆ ಇವರಿಗೆ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಅವರ ಒಡನಾಟದ ಅವಕಾಶ ಲಭಿಸಿತ್ತು‌ ಎಂದರು.

    ಸುದ್ದಿಮನೆಯ ಒಳಗಡೆ ಅನೇಕ ಏಳು-ಬೀಳುಗಳನ್ನು ಕಂಡ ಇವರು ತಮ್ಮ ವೃತ್ತಿಬದ್ಧತೆ ಬಿಡದೆ ಕಿರಿಯ ಪತ್ರಕರ್ತರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡಿದ್ದನ್ನು ಯಾರೂ ಮರೆಯುವಂತಿಲ್ಲ ಎಂದು ಹೇಳಿದರು. ವರದಿಗಾರರ ಕೂಟ (ರಿಪೋರ್ಟರ್ಸ್ ಗಿಲ್ಡ್​)ದ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಇವರು ಪತ್ರಕರ್ತರ ಸಂಘಟನೆಯಲ್ಲಿ ಒಡನಾಟ ಇರಿಸಿಕೊಂಡಿದ್ದರು ಎಂದು ಹೇಳಿದರು.

    ವರದಿಗಾರರ ಕೂಟದ ಪ್ರಪ್ರಥಮ ಪ್ರಧಾನ ಕಾರ್ಯದರ್ಶಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವ

    ವೃತ್ತಿ ಬದ್ದತೆಯನ್ನು ತಮ್ಮ ಅವಧಿಯಲ್ಲಿ ಕಾಪಾಡಿಕೊಂಡು ಬಂದ 86ರ ಇಳಿವಯಸ್ಸಿನ ಸರಳಜೀವನದ ಹಿರಿಯಪತ್ರಕರ್ತರಾದ ಪ್ರಹ್ಲಾದ ಕುಳಲಿ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲು ಹೆಮ್ಮೆ ಎನಿಸುತ್ತದೆ ಎಂದು ಶಿವಾನಂದ ತಗಡೂರು ಹೇಳಿದರು.

    ಕೆಯುಡಬ್ಲ್ಯುಜೆ ಮಾಜಿ ಅಧ್ಯಕ್ಷ ಎಚ್.ಎಸ್. ಸುಧೀಂದ್ರಕುಮಾರ್ ಮಾತನಾಡಿ, ಕೆಯುಡಬ್ಲ್ಯುಜೆ ದೊಡ್ಡ ಆಲದ ಮರವಿದ್ದಂತೆ. ಸ್ವಾರ್ಥ ಕಾರಣದಿಂದ ದೂರ ಸರಿದವರು ಹೊಟ್ಟೆಕಿಚ್ಚಿನಿಂದ ಮಾತನಾಡುವುದು ತಪ್ಪು. ಸಂಘಟನೆ ಮುಖ್ಯವಾದಾಗ ಮಾತ್ರ ಪತ್ರಕರ್ತರು ಆ ಮೂಲಕ ಹೋರಾಟದಿಂದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.

    ನೊಂದ ಬಹಳಷ್ಟು ಪತ್ರಕರ್ತರಿಗೆ ಶಿವಾನಂದ ತಗಡೂರು ಅವರು ಅಧ್ಯಕ್ಷರಾದ ಮೇಲೆ ಪರಿಹಾರ ಕೊಡಿಸುವ ಮೂಲಕ ನೆರವಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಮಾಧ್ಯಮ ಸಲಹೆಗಾರರಾಗಿ ಪ್ರಹ್ಲಾದ್ ಕುಳಲಿ ಕಾರ್ಯನಿರ್ವಹಿಸಿದ್ದನ್ನು ಸುಧೀಂದ್ರಕುಮಾರ್ ಸ್ಮರಿಸಿಕೊಂಡರು. ಆಕಾಶವಾಣಿ, ದೂರದರ್ಶನ ಸೇರಿದಂತೆ ಹಲವು ಕಡೆಯಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಅಂಥ ಹಿರಿಯರನ್ನು ಸನ್ಮಾನಿಸುತ್ತಿರುವ ಕೆಯುಡಬ್ಲ್ಯುಜೆ ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು.

    ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಸ್ವಾಗತಿಸಿದರು. ನಿಯೋಜಿತ ಖಜಾಂಚಿ ವಾಸುದೇವ ಹೊಳ್ಳ ವಂದಿಸಿದರು. ಹಿರಿಯ ಪತ್ರಕರ್ತ ಕಂ.ಕ.ಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯ ದೇವರಾಜ್, ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಛಾಯಾಗ್ರಾಹಕ ಶರಣ ಬಸಪ್ಪ ಇನ್ನಿತರರು ಹಾಜರಿದ್ದರು.

    ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts