More

    ಹೀರೋ ಆದ ಕುರಿ… ಆರ್​ಸಿ ಬ್ರದರ್ಸ್​ನಲ್ಲಿ ಪ್ರತಾಪ

    ಬೆಂಗಳೂರು: ಕುರಿ ಪ್ರತಾಪ್ ಇದುವರೆಗೂ ಅದೆಷ್ಟೋ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಇದೇ ಮೊದಲ ಬಾರಿಗೆ ಹೀರೋ ಲೆವೆಲ್ಲಿನ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಹೆಸರು ‘ಆರ್​ಸಿ ಬ್ರದರ್ಸ್’. ಬ್ರದರ್ಸ್ ಎಂದರೆ ಇನ್ನೊಬ್ಬರು ಇರಲೇಬೇಕಲ್ಲ. ಕುರಿ ಜತೆಗೆ ಇನ್ಯಾರು ನಟಿಸುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ಕುರಿ ಜತೆಗೆ ಇನ್ನೊಬ್ಬ ಬ್ರದರ್ ಆಗಿ ತಬಲಾ ನಾಣಿ ನಟಿಸುತ್ತಿದ್ದಾರೆ. ಇದವರ 125ನೇ ಚಿತ್ರವಂತೆ. ಇದೊಂದು ಅಣ್ಣ-ತಮ್ಮನ ಬಾಂಧವ್ಯದ ಕಥೆ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್. ಚಿತ್ರದ ಕುರಿತು ಮಾತನಾಡುವ ಅವರು, ‘ಆರ್​ಸಿ ಎಂದರೆ ರಾಯಲ್ ಚಾಲೆಂಜರ್ಸ್ ಎಂದು ಎಲ್ಲರಿಗೂ ಗೊತ್ತೇ ಇದೆ. ಇಲ್ಲಿ ಆರ್​ಸಿ ಏನು ಎಂಬುದು ಸದ್ಯಕ್ಕೆ ಸಸ್ಪೆನ್ಸ್.

    ಇದೊಂದು ಪಕ್ಕಾ ಕಾಮಿಡಿ ಚಿತ್ರವಾಗಿದ್ದು, ಯಾರೂ ಹೀರೋ ಅಂತಿಲ್ಲ. ಇಲ್ಲಿ ಕಥೆಯೇ ಹೀರೋ ಆಗಿದ್ದು, ಪ್ರತಾಪ್ ಮತ್ತು ತಬಲಾ ನಾಣಿ ಇಬ್ಬರೂ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಪ್ರತಾಪ್​ಗೆ ಜೋಡಿಯಾಗಿ ‘ಕಾಮಿಡಿ ಕಿಲಾಡಿಗಳು’ ನಯನಾ ಕಾಣಿಸಿಕೊಳ್ಳುತ್ತಿದ್ದಾರೆ. ಮಾರ್ಚ್ 15ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಮಣಿ ಶಶಾಂಕ್ ಮತ್ತು ಸಹನಾ ಗಿರೀಶ್ ನಿರ್ವಿುಸುತ್ತಿರುವ ಈ ಚಿತ್ರಕ್ಕೆ ಕಿರಣ್ ಕುಮಾರ್ ಛಾಯಾಗ್ರಹಣ ಮತ್ತು ಪ್ರದೀಪ್ ವರ್ಮ ಸಂಗೀತವಿದೆ.

    Video| ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ, ಆಫೀಸ್ ಬೇರೆ ಮಾಡ್ಬೇಕಾ?: ಡಾ.ರಾಜ್​ ಕುರಿತು ನಾಲಿಗೆ ಹರಿಬಿಟ್ಟ ಶಾಸಕ

    ದಿಶಾ ರವಿ ಹಿಂದೂನಾ ಕ್ರಿಶ್ಚಿಯನ್ನಾ? ಆಕೆಯ ಸ್ನೇಹಿತರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts