More

    ವಿಶ್ವದ ಟಾಪ್ 50 ವೈನರಿಗಳಲ್ಲಿ ಭಾರತದ ಏಕೈಕ ವೈನರಿ ಕೊಪ್ಪಳದ ಕ್ರಸ್ಮಾ

    ವಿ.ಕೆ.ರವೀಂದ್ರ
    ಕೊಪ್ಪಳ: ಕೊಪ್ಪಳ ಬರದ ನಾಡು, ಸರಿಯಾಗಿ ಮಳೆಯಾಗಲ್ಲವೆಂಬ ಮಾತು ರೈತವರ್ಗದಲ್ಲಿ ಸಾಮಾನ್ಯ. ಆದರೆ, ಅಲ್ಪ ಮಳೆ ಬೀಳುವ ವಾತಾವರಣದ ಲಾಭ ಪಡೆದ ದಂಪತಿ ಸ್ಥಳೀಯವಾಗಿ ವೈನ್ ತಯಾರಿಸುವ ಮೂಲಕ ವಿಶ್ವದ 50 ಬೆಸ್ಟ್ ವೈನರಿಗಳಲ್ಲಿ 46ನೇ ಸ್ಥಾನ ಪಡೆದಿದ್ದು, ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ದೇಶದ ಮೊದಲ ವೈನರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    2010ರಲ್ಲಿ ಘಟಕ ಆರಂಭಿಸಲಾಗಿದೆ. ಜಗತ್ತಿಗೆ ಭಾರತದಿಂದಲೂ ಗುಣಮಟ್ಟದ ವೈನ್ ನೀಡಬೇಕೆಂಬುದು ಮಾಲೀಕರಾದ ಕೃಷ್ಣ ಪ್ರಸಾದ್ ಕನಸಾಗಿತ್ತು. ಶೇ.80ರಷ್ಟು ಸಾವಯವ ಪದ್ಧತಿಯಲ್ಲಿ ದ್ರಾಕ್ಷಿ ಬೆಳೆದು ಗುಣಮಟ್ಟ ಕಾಯ್ದುಕೊಳ್ಳುತ್ತಿದ್ದೇವೆ. ಎಲ್ಲದ ಫಲವಾಗಿ ವಿಶ್ವದ ಬೆಸ್ಟ್ 50 ವೈನರಿಗಳಲ್ಲಿ ಕ್ರಸ್ಮಾ 46ನೇ ಸ್ಥಾನ ಪಡೆದಿದೆ. ಸದ್ಯ ನಮ್ಮ ದೇಶ ಹಾಗೂ ಅಮೇರಿಕಾಕ್ಕೆ ವೈನ್ ರಫ್ತಾಗುತ್ತಿದೆ. ಫ್ರಾನ್ಸ್ ಸೇರಿ ಇತರ ದೇಶಗಳಿಗೂ ರಫ್ತು ಮಾಡುವ ಚಿಂತನೆಯಿದೆ.
    |ಜೋಗಿ ನಾಯ್ಡು,                                                 ಕ್ರಸ್ಮಾ ಎಸ್ಟೇಟ್ ಮ್ಯಾನೇಜರ್. ತಾವರಗೇರಾ.

    ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಬಳಿಯ ಕ್ರಸ್ಮಾ ವೈನ್ ಉತ್ಪಾದನಾ ಘಟಕ (ಡಿಸ್ಟಲರಿ) ಕೀರ್ತಿಗೆ ಪಾತ್ರವಾದ ವೈನರಿ. ಸದ್ಯ ದೇಶದೆಲ್ಲೆಡೆ ಸ್ವದೇಶಿ ಉತ್ಪನ್ನಗಳ ಜಾಗೃತಿ ಮೂಡುತ್ತಿದೆ. ಇದೇ ಗುರಿಯೊಂದಿಗೆ ವಿಶ್ವಕ್ಕೆ ಗುಣಮಟ್ಟದ ವೈನ್ ನೀಡಬೇಕೆಂಬ ಹೆಬ್ಬಯಕೆ ಹೊಂದಿದ್ದ ಹೈದ್ರಾಬಾದ್ ಮೂಲದ ಕೃಷ್ಣ ಪ್ರಸಾದ ಮತ್ತು ಉಮಾ ದಂಪತಿ ದಶಕದ ಕನಸು ಸದ್ಯ ನನಸಾಗಿದೆ. ಇಂಗ್ಲೆಂಡ್ ಮೂಲದ ವಿಲಿಯಂ ರೀಡ್ ಬಿಸಿನೆಸ್ ಮೀಡಿಯಾ ಸಂಸ್ಥೆ ವೈನ್‍ರಿಗಳ ಸಮೀಕ್ಷೆ ನಡೆಸಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಂಡ್ರೀವ್ ರೀಡ್ ಜು.15ರಂದು ವಿಶ್ವದ ಟಾಪ್ 50 ಬೆಸ್ಟ್ ವೈನ್‍ಯಾಡ್ರ್ಸ-2020 ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಭಾರತದ ಏಕೈಕ ವೈನರಿ ಕ್ರಸ್ಮಾ 46ನೇ ಸ್ಥಾನ ಪಡೆದಿರುವುದು ವಿಶೇಷ. 500 ವೈನ್ ಎಕ್ಸ್‍ಪರ್ಟ್ಸ್‍ಗಳ ತಂಡವು ಜಗತ್ತಿನಾದ್ಯಂತ ಸಮೀಕ್ಷೆ ಕೈಗೊಂಡಿದ್ದು, ಬೆಸ್ಟ್ ವೈನರಿಗಳನ್ನು ಆಯ್ಕೆ ಮಾಡಿದೆ.

    ಇದನ್ನೂ ಓದಿ: ಆಯುಷ್ ವೈದ್ಯರಾಗುವುದು ಹೀಗೆ…

    ಸಮೀಕ್ಷೆಯಲ್ಲಿ 18 ದೇಶಗಳ ವೈನ್ ಡಿಸ್ಟಲರಿಗಳಿಗೆ ವಿಶೇಷ ತಂಡಗಳು ಭೇಟಿ ನೀಡಿ ಸಮೀಕ್ಷೆ ನಡೆಸಿದ್ದು, ಪ್ರಥಮ ಭಾರಿಗೆ ಟಾಪ್ 50ರ ಪಟ್ಟಿಯಲ್ಲಿ ಜಪಾನ್, ಬಲ್ಗೇರಿಯಾ ಹಾಗೂ ಭಾರತ ಸ್ಥಾನ ಪಡೆದಿವೆ. ತಾವರಗೇರಾದಲ್ಲಿ 150 ಎಕರೆಯಲ್ಲಿ 2008ರಲ್ಲಿ ಕ್ರಸ್ಮಾ ಎಸ್ಟೇಟ್ ಆರಂಭವಾಗಿದೆ. ಸಂಸ್ಕರಣ ಘಟಕ ಸೇರಿದಂತೆ ವೈನ್ ತಯಾರಿಕೆಗೆ ಅಗತ್ಯವಿರುವ ಕಪ್ಪು ಹಾಗೂ ಬಿಳಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಹೊರಗಿನ ರೈತರಿಂದ ಖರೀದಿಸದೆ ತಮ್ಮದೇ ತೋಟದಲ್ಲಿ ಬೆಳೆಯುತ್ತಿದ್ದಾರೆ. ಶೇ.80ರಷ್ಟು ಸಾವಯವ ಪದ್ಧತಿ ಅನುಸರಿಸಲಾಗುತ್ತಿದೆ. ಸಿರಾ, ಚಾರ್ಡೋನ್, ಸಾಂಗಿಯೋವಿ ಹೆಸರಿನ ಬಿಳಿ ಮತ್ತು ಕೆಂಪು ವೈನ್ ತಯಾರಿಸಲಾಗುತ್ತಿದ್ದು, ಬೆಂಗಳೂರು, ಗೋವಾ, ಹೈದ್ರಾಬಾದ್ ಸೇರಿದಂತೆ ಅಮೆರಿಕಾ(ಯುಎಸ್‍ಎ)ಗೂ ರಫ್ತಾಗುತ್ತದೆ. ವಾರ್ಷಿಕ 20-30 ಸಾವಿರ ಬಾಟಲ್ ವೈನ್​ ತಯಾರಾಗುತ್ತಿದ್ದು, 750ಮಿ.ಲೀ. ಬಾಟಲ್ ಒಂದಕ್ಕೆ 750 ರೂ.ನಿಂದ 2000ರೂ. ದರ ನಿಗದಿ ಮಾಡಿದೆ.

    ಶ್ರಾವಣ ಮಾಸದಲ್ಲೂ ಚೇತರಿಕೆ ಕಾಣದ ವ್ಯಾಪಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts