More

    ನನ್ನನ್ನು ಕ್ಷಮಿಸಿ; ಸಲ್ಮಾನ್​ ಖಾನ್​ಗೆ ಬಹಿರಂಗ ಕ್ಷಮೆ ಕೇಳಿದ ಕೆಆರ್​ಕೆ

    ಮುಂಬೈ: ಬಾಲಿವುಡ್​ ನಟ ಸಲ್ಮಾನ್​ ಖಾನ್​ ಎಂದರೆ ಉರಿದು ಬೀಳುತ್ತಿದ್ದ ಸ್ವಯಂಘೋಷಿತ ಬಾಲಿವುಡ್​ ಪಂಡಿತ ಕಮಾಲ್​ ಆರ್ ಖಾನ್​ ಅಲಿಯಾಸ್​ ಕೆಆರ್​ಕೆ, ಇದೀಗ ಸಲ್ಮಾನ್​ ಖಾನ್​ ಅವರ ಕ್ಷಮೆ ಕೇಳಿದ್ದಾರೆ. ತಮ್ಮ ಅರೆಸ್ಟ್​ ಹಿಂದೆ ಸಲ್ಮಾನ್​ ಖಾನ್​ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಪುನೀತ್​​ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಹಿನ್ನೆಲೆ; ಅಪ್ಪು ಮನೆಗೆ ಭೇಟಿ ನೀಡಿ ಸಚಿವರಿಂದ ಆಹ್ವಾನ

    ಕೆಲವು ತಿಂಗಳ ಹಿಂದೆ ಕೆಆರ್​ಕೆ ಅವರನ್ನು ಮುಂಬೈ ಪೊಲೀಸರು ಅರೆಸ್ಟ್​ ಮಾಡಿದ್ದರು. ತನ್ನನ್ನು ಬಂಧಿಸಿರುವ ಹಿಂದೆ ಸಲ್ಮಾನ್​ ಖಾನ್​ ಕೈವಾಡವಿದೆ ಎಂದು ಕೆಆರ್​ಕೆ ಆರೋಪಿಸಿದ್ದರು. ಈಗ ಕೆಆರ್​ಕೆ ಉಲ್ಟಾ ಹೊಡೆದಿದ್ದು, ತಮ್ಮ ಬಂಧನಕ್ಕೂ ಸಲ್ಮಾನ್​ ಖಾನ್​ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಕೆಆರ್​ಕೆ, ‘ನನ್ನ ಬಂಧನದ ಹಿಂದೆ ಸಲ್ಮಾನ್​ ಅವರ ಕೈವಾಡವಿದೆ ಎಂದು ನಾನು ತಿಳಿದುಕೊಂಡಿದ್ದೆ. ಆದರೆ, ಇದರೆ ಹಿಂದೆ ಬೇರೆ ಯಾರೋ ಇದ್ದಾರೆ ಎಂಬುದು ಗೊತ್ತಾಗಿದೆ. ಸಲ್ಮಾನ್​ ಅವರ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ. ಅವರ ಮನಸ್ಸು ನೋಯಿಸಿದ್ದರೆ ನಾನು ಕ್ಷಮೆ ಕೋರುತ್ತೇನೆ. ಇನ್ನು ಮುಂದೆ ಅವರ ಚಿತ್ರಗಳ ವಿಮರ್ಶೆ ಮಾಡುವುದಿಲ್ಲ’ ಎಂದು ಹೇಳಿಕೊಂಡಿದ್ದಾರೆ.

    ಕಳೆದ ವರ್ಷ ಸಲ್ಮಾನ್​ ಅಭಿನಯದ ‘ರಾಧೇ’ ಬಿಡುಗಡೆಯಾಗಿತ್ತು. ಈ ಚಿತ್ರ ನೋಡಿದ ಕೆಆರ್​ಕೆ ಹಿಗ್ಗಾಮುಗ್ಗ ಬೈದು ವಿಮರ್ಶೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ, ಅವರ ವಿರುದ್ಧ ಸಲ್ಮಾನ್​ ಖಾನ್​ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮೊದಲಿಗೆ, ಇನ್ನು ಮುಂದೆ ಸಲ್ಮಾನ್​ ಚಿತ್ರಗಳನ್ನು ವಿಮರ್ಶೆ ಮಾಡುವುದಿಲ್ಲ ಎಂದು ಹೇಳಿದ್ದ ಕಮಾಲ್​ ಆರ್​ ಖಾನ್​ ಅಲಿಯಾಸ್​ ಕೆಆರ್​ಕೆ, ಆ ನಂತರ ಉಲ್ಟಾ ಹೊಡೆದಿದ್ದರು. ಸಲ್ಮಾನ್​ ಖಾನ್​ ಬಂದು ಕಾಲು ಹಿಡಿದುಕೊಂಡರೂ, ಅವರ ಚಿತ್ರಗಳ ವಿಮರ್ಶೆ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದರು.

    ಇದನ್ನೂ ಓದಿ: ಡಿಸೆಂಬರ್​ನಲ್ಲಿ ಬಿಡುಗಡೆಯಾಗಲಿದೆ ಮಂಸೋರೆ ನಿರ್ದೇಶನದ ‘19.20.21’ …

    ಆ ನಂತರ ಈ ವರ್ಷ ಕೆಆರ್​ಕೆ ಅವರನ್ನು ಮುಂಬೈನ ಪೊಲೀಸರು ಕೆಲವು ಕೇಸ್​ಗಳಲ್ಲಿ ಬಂಧಿಸಿದ್ದರು. ಇದರ ಹಿಂದೆ ಸಲ್ಮಾನ್​ ಇದ್ದಾರೆ ಎಂದು ಕೆಆರ್​ಕೆ ಹಲ್ಲು ಮಸೆದಿದ್ದರು. ಈಗ ಸಲ್ಮಾನ್​ ಕೈವಾಡವಿಲ್ಲ ಎಂದು ಕೆಆರ್​ಕೆ ಕ್ಷಮೆ ಯಾಚಿಸಿದ್ದಾರೆ.

    ಕಾಂತಾರ ಸಿನಿಮಾ ನೋಡಿದ್ರಾ ಎಂಬ ಪ್ರಶ್ನೆಗೆ ಸಮಯ ಸಿಕ್ಕಿಲ್ಲ ಎಂದು ಉತ್ತರ ಕೊಟ್ಟ ರಶ್ಮಿಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts