More

    ಎಸ್ಸಿ-ಎಸ್ಟಿ ಮೀಸಲು ಪ್ರಮಾಣ ಏರಿಸಿ: ಗಂಗಾವತಿಯಲ್ಲಿ ದಸಂಸ ಮುಖಂಡರ ಪ್ರತಿಭಟನೆ

    ಗಂಗಾವತಿ: ಎಸ್ಸಿ ಮತ್ತು ಎಸ್ಟಿ ಮೀಸಲು ಪ್ರಮಾಣ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಮಿತಿ ಮಂಗಳವಾರ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
    ಜಿಲ್ಲಾಧ್ಯಕ್ಷ ಸಿ.ಕೆ.ಮರಿಸ್ವಾಮಿ ಬರಗೂರು ಮಾತನಾಡಿ, ಹಲವು ವರ್ಷಗಳಿಂದ ಶೋಷಣೆಗೆ ಒಳಗಾದ ಎಸ್ಸಿ, ಎಸ್ಟಿ ಸಮುದಾಯವನ್ನು ಸರ್ಕಾರ ನಿರ್ಲಕ್ಷಿಸುತ್ತಿದ್ದು, ಮೀಸಲು ಹೆಚ್ಚಿಸುವಂತೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಬೇಡ ಜಂಗಮ ಸಮುದಾಯವನ್ನು ಯಾವುದೇ ಕಾರಣಕ್ಕೂ ಎಸ್ಸಿ ಮೀಸಲಿನಲ್ಲಿ ಸೇರ್ಪಡೆ ಮಾಡಬಾರದು. ನಗರ ಸೇರಿ ಗ್ರಾಮೀಣ ಭಾಗದಲ್ಲಿ ಮದ್ಯದ ಅಕ್ರಮ ಮಾರಾಟ ಹೆಚ್ಚುತ್ತಿದ್ದು, ಇಸ್ಪೀಟ್, ಮಟ್ಕಾಕ್ಕೆ ಕಡಿವಾಣ ಹಾಕುತ್ತಿಲ್ಲ. ಮರಳು ಮಾಫಿಯಾದಿಂದ ನೈಸರ್ಗಿಕ ಸಂಪತ್ತಿಗೆ ಕುತ್ತು ಬರುತ್ತಿದೆ. ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ತಹಸೀಲ್ದಾರ್ ಯು.ನಾಗರಾಜಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಸುಂಕಪ್ಪ ಭೋವಿ, ದುರುಗೇಶ ಅಳ್ಳಳ್ಳಿ, ಸುರೇಶ ಛಲವಾದಿ, ಸುರೇಶ ಗಾಂಧಿನಗರ, ಶಿವರಾಜ ಸಂಗಾಪುರ, ಭೋಜಪ್ಪ ಮಾಳೇಮನಿ, ಯಮನೂರಭಟ್, ಶಂಕರ ಗಿಣಿಮೋತಿ, ಗಣೇಶ ಹೊಸ್ಕೇರಾ, ಮಂಜುನಾಥ ಗೋಮರ್ಶಿ, ಮಾರುತಿ ಹುಳ್ಕಿಹಾಳ್, ಬಸಪ್ಪ ಬರಗೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts