More

    ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಕೊಹ್ಲಿ, ರೋಹಿತ್‌ಗೆ ಬಡ್ತಿ

    ದುಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮ ಐಸಿಸಿ ಟಿ20 ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ ಬಡ್ತಿ ಸಂಪಾದಿಸಿದ್ದಾರೆ. ಕೊಹ್ಲಿ 1 ಸ್ಥಾನ ಮೇಲೇರಿ 4ನೇ ಸ್ಥಾನಕ್ಕೇರಿದ್ದರೆ, ರೋಹಿತ್ 3 ಸ್ಥಾನ ಮೇಲೇರಿ 14ನೇ ಸ್ಥಾನ ಗಳಿಸಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ 5ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಇದರಿಂದಾಗಿ ಕೊಹ್ಲಿ ಈಗ ಟಿ20 ರ‌್ಯಾಂಕಿಂಗ್‌ನಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಬ್ಯಾಟ್ಸ್‌ಮನ್ ಆಗಿದ್ದಾರೆ.

    ಶ್ರೇಯಸ್ ಅಯ್ಯರ್ 26ನೇ ಸ್ಥಾನಕ್ಕೇರಿದ್ದರೆ, ಸೂರ್ಯಕುಮಾರ್ ಯಾದವ್ 66ನೇ ಮತ್ತು ರಿಷಭ್ ಪಂತ್ 69ನೇ ಸ್ಥಾನದಲ್ಲಿ ನೆಲೆಸಿದ್ದಾರೆ. ಇಂಗ್ಲೆಂಡ್‌ನ ಡೇವಿಡ್ ಮಲಾನ್ ವಿಶ್ವ ನಂ. 1 ಬ್ಯಾಟ್ಸ್‌ಮನ್ ಆಗಿ ಮುಂದುವರಿದಿದ್ದಾರೆ. ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಭಾರತದ ಬೌಲರ್‌ಗಳು ಅಗ್ರ 10ರೊಳಗಿಲ್ಲ. 14ನೇ ಸ್ಥಾನಕ್ಕೆ ಕುಸಿದಿರುವ ನಡುವೆಯೂ ವಾಷಿಂಗ್ಟನ್ ಸುಂದರ್ ಭಾರತದ ಅಗ್ರ ಶ್ರೇಯಾಂಕಿತ ಬೌಲರ್ ಆಗಿದ್ದಾರೆ. ಭುವನೇಶ್ವರ್ ಕುಮಾರ್ 24 ಮತ್ತು ಶಾರ್ದೂಲ್ ಠಾಕೂರ್ 26ನೇ ಸ್ಥಾನಕ್ಕೇರಿದ್ದಾರೆ. ಮದುವೆಯ ಹಿನ್ನೆಲೆಯಲ್ಲಿ ಬಿಡುವಿನಲ್ಲಿರುವ ವೇಗಿ ಜಸ್‌ಪ್ರೀತ್ ಬುಮ್ರಾ 28ನೇ ಸ್ಥಾನಕ್ಕೆ ಕುಸಿದಿದ್ದಾರೆ.

    ಇದನ್ನೂ ಓದಿ: PHOTO | ಪುಣೆಯಲ್ಲಿ ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸಲು ಬೆಟ್ಟ ಏರಿದ ಕ್ರಿಕೆಟ್ ಪ್ರೇಮಿ!

    ಏಕದಿನ ಕ್ರಿಕೆಟ್ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ರೋಹಿತ್ ಶರ್ಮ 3ನೇ ಸ್ಥಾನಕ್ಕೆ ಕುಸಿದಿದ್ದು, ಪಾಕಿಸ್ತಾನದ ಬಾಬರ್ ಅಜಮ್ 2ನೇ ಸ್ಥಾನಕ್ಕೇರಿದ್ದಾರೆ. ಶಿಖರ್ ಧವನ್ 15ನೇ ಸ್ಥಾನಕ್ಕೇರಿದ್ದಾರೆ. ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾ 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

    ಟೆನಿಸ್ ತಾರೆ ಜೋಕೊವಿಕ್‌ರನ್ನು ಹನಿಟ್ರ್ಯಾಪ್ ಮಾಡಲು ರೂಪದರ್ಶಿಗೆ ಭಾರಿ ಮೊತ್ತದ ಆಮಿಷ!

    VIDEO| ಚೆನ್ನೈ ಸೂಪರ್‌ಕಿಂಗ್ಸ್ ಹೊಸ ಜೆರ್ಸಿಯಲ್ಲಿ ಸೈನಿಕರಿಗೆ ವಿಶೇಷ ಗೌರವ

    ‘ಕೂ’ ಆ್ಯಪ್‌ನಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಬಂಡವಾಳ ಹೂಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts