More

    VIDEO | ಪ್ಲಾಸ್ಟಿಕ್ ಕುರ್ಚಿ ಮೇಲೆ ಕೋಪ ಪ್ರದರ್ಶಿಸಿದ ಕೊಹ್ಲಿ; ಐಪಿಎಲ್​ ನೀತಿ ಸಂಹಿತೆ ಉಲ್ಲಂಘನೆಗೆ ಛೀಮಾರಿ

    ಚೆನ್ನೈ: ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲಿ ಔಟಾಗಿ ಡಗೌಟ್‌ಗೆ ಮರಳಿದಾಗ ಪ್ಲಾಸ್ಟಿಕ್ ಕುರ್ಚಿಯ ಮೇಲೆ ತಮ್ಮ ಹತಾಶೆಯನ್ನು ಪ್ರದರ್ಶಿಸಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಛೀಮಾರಿ ಹಾಕಲಾಗಿದೆ.

    29 ಎಸೆತಗಳಲ್ಲಿ 33 ರನ್ ಗಳಿಸಿ ಜೇಸನ್ ಹೋಲ್ಡರ್ ಎಸೆತದಲ್ಲಿ ಔಟಾದ ಕೊಹ್ಲಿ, ಕೋಪದಿಂದ ಡಗೌಟ್‌ನಲ್ಲಿದ್ದ ಕುರ್ಚಿಯನ್ನು ಬ್ಯಾಟ್‌ನಿಂದ ತಳ್ಳಿದ್ದರು. ಇದರಿಂದ ಕುರ್ಚಿ ಪಲ್ಟಿ ಹೊಡೆದಿತ್ತು. ಐಪಿಎಲ್ ನೀತಿಸಂಹಿತೆ ಲೆವೆಲ್ 1ರ 2.2 ನಿಯಮ ಉಲ್ಲಂಘನೆಯ ತಪ್ಪನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮ್ಯಾಚ್ ರೆಫ್ರಿ ವೆಂಗಲಿಲ್ ನಾರಾಯಣ್ ಕುಟ್ಟಿ, ಕೊಹ್ಲಿಗೆ ವಾಗ್ದಂಡನೆ ಹಾಕಿದ್ದಾರೆ. ಈ ಪ್ರಕರಣದಲ್ಲಿ ಮ್ಯಾಚ್ ರೆಫ್ರಿ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಬಿಸಿಸಿಐ ತಿಳಿಸಿದೆ.

    ಇದನ್ನೂ ಓದಿ: ಮಿಂಚಿದ ಮ್ಯಾಕ್ಸ್‌ವೆಲ್, ಶಾಬಾಜ್ ಅಹ್ಮದ್; ಆರ್‌ಸಿಬಿಗೆ ಸತತ 2ನೇ ಜಯ

    ಕೊಹ್ಲಿ 13ನೇ ಓವರ್ ತನಕ ಕ್ರೀಸ್‌ನಲ್ಲಿದ್ದರೂ ಹೆಚ್ಚಿನ ರನ್ ಗಳಿಸಲು ಶಕ್ತರಾಗಿರಲಿಲ್ಲ. ಚೆಪಾಕ್ ಪಿಚ್‌ನಲ್ಲಿ ಚೆಂಡು ಹಳೆಯದಾದಂತೆ ರನ್ ಗಳಿಸುವುದು ಕಠಿಣವಾಗುತ್ತಿದೆ ಎಂದು ಅವರು ಪಂದ್ಯದ ಬಳಿಕ ಅಭಿಪ್ರಾಯಪಟ್ಟರು. ವಿಶ್ವದ ಸ್ಟಾರ್ ಬ್ಯಾಟ್ಸ್‌ಮನ್ ಆಗಿದ್ದರೂ, ರನ್ ಗಳಿಸಲು ಪರದಾಡಿದ ತನ್ನ ಹತಾಶೆಯನ್ನು ಕೊಹ್ಲಿ ಕುರ್ಚಿ ಮೇಲೆ ಪ್ರದರ್ಶಿಸಿ ಸಮಾಧಾನ ಕಂಡರು ಎನ್ನಲಾಗಿದೆ.

    ಇಂದು ಯುವ ನಾಯಕರ ಮುಖಾಮುಖಿ; ರಾಯಲ್ಸ್‌ಗೆ ಕ್ಯಾಪಿಟಲ್ಸ್ ಸವಾಲು

    ಐಪಿಎಲ್ ಮೊದಲ ವಾರದಲ್ಲಿ ದೇಶೀಯ ಕ್ರಿಕೆಟಿಗರ ದರ್ಬಾರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts