More

    ಐಪಿಎಲ್ ಮೊದಲ ವಾರದಲ್ಲಿ ದೇಶೀಯ ಕ್ರಿಕೆಟಿಗರ ದರ್ಬಾರ್!

    ಬೆಂಗಳೂರು: ಐಪಿಎಲ್ 14ನೇ ಆವೃತ್ತಿ ಶುರುವಾಗಿ 6 ದಿನ ಕಳೆಯುವಷ್ಟರಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯಕ್ಕೆ ಬಿಕರಿಯಾಗಿ ಸುದ್ದಿಯಾದ ಕ್ರಿಕೆಟಿಗರೆಲ್ಲ ಕೈಕೊಡುತ್ತಿದ್ದರೆ, ದೇಶೀಯ ಕ್ರಿಕೆಟಿಗರು ಭಾರಿ ಸದ್ದು ಮಾಡುತ್ತಿರುವುದು ವಿಶೇಷವಾಗಿದೆ. ಭಾರತ ಪರ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದಿರುವ ದೇಶೀಯ ಪ್ರತಿಭೆಗಳೇ ಸ್ಟಾರ್ ಕ್ರಿಕೆಟಿಗರಿಗಿಂತ ಹೆಚ್ಚು ಗಮನಸೆಳೆಯುತ್ತಿದ್ದಾರೆ.

    ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಪರ ಆಡಿದ ಹರಿಯಾಣದ ವೇಗಿ ಹರ್ಷಲ್ ಪಟೇಲ್ 5 ವಿಕೆಟ್ ಕಬಳಿಸಿ ಗೆಲುವಿನ ರೂವಾರಿಯಾದರು. ಈ ಮೂಲಕ 15 ಮತ್ತು 14.25 ಕೋಟಿ ರೂ.ಗೆ ಆರ್‌ಸಿಬಿ ತಂಡ ಸೇರಿದ್ದ ಕೈಲ್ ಜೇಮಿಸನ್, ಗ್ಲೆನ್ ಮ್ಯಾಕ್ಸ್‌ವೆಲ್‌ಗಿಂತ ನಿರ್ಣಾಯಕ ಪಾತ್ರ ವಹಿಸಿದರು. ರಾಜಸ್ಥಾನ ವಿರುದ್ಧದ ಪಂದ್ಯದಲ್ಲೂ ಬರೋಡದ ದೀಪಕ್ ಹೂಡಾ 28 ಎಸೆತಗಳಲ್ಲಿ 6 ಸಿಕ್ಸರ್ ಸಹಿತ 64 ರನ್ ಸಿಡಿಸಿ ಮಿಂಚಿದರು. ಕೋಲ್ಕತ ನೈಟ್‌ರೈಡರ್ಸ್‌ ಪರ ದೆಹಲಿ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಈಗಾಗಲೆ ಆಡಿದ ಎರಡೂ ಪಂದ್ಯಗಳಲ್ಲಿ ಅರ್ಧಶತಕ (80, 57) ಬಾರಿಸಿ ರನ್‌ದಾಹ ಪ್ರದರ್ಶಿಸಿದ್ದಾರೆ.

    ಇದನ್ನೂ ಓದಿ: ಐಪಿಎಲ್ ಪಂದ್ಯಗಳು ರಾತ್ರಿ 7.30ಕ್ಕೆ ಆರಂಭವಾಗುವ ಬಗ್ಗೆ ಧೋನಿ ಅಸಮಾಧಾನ!

    ಸೋಮವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ಪರ ಸೌರಾಷ್ಟ್ರದ ಯುವ ವೇಗಿ ಚೇತನ್ ಸಕಾರಿಯಾ ಕೂಡ ಗಮನಾರ್ಹ ನಿರ್ವಹಣೆ ತೋರಿದರು. ಎಡಗೈ ವೇಗಿ ಸಕಾರಿಯಾ (31ಕ್ಕೆ 3) ಹೊಸ ಚೆಂಡಿನಲ್ಲಿ ಮತ್ತು ಸ್ಲಾಗ್ ಓವರ್‌ಗಳಲ್ಲಿ ಉತ್ತಮ ದಾಳಿ ಸಂಘಟಿಸಿದರು. ಕೊನೇ 2 ಓವರ್‌ಗಳಲ್ಲಿ ಕೇವಲ 5 ರನ್ ನೀಡಿ 2 ವಿಕೆಟ್ ಕಬಳಿಸಿದರು. ಎದುರಾಳಿ ತಂಡ 221 ರನ್ ಪೇರಿಸಿದ ನಡುವೆ ಸಕಾರಿಯಾ ನಿಯಂತ್ರಿತ ಬೌಲಿಂಗ್ ಪ್ರದರ್ಶಿಸಿದ್ದು ವಿಶೇಷ.

    ಅತ್ತ ಪಂಜಾಬ್ ತಂಡದ ದುಬಾರಿ ಮೊತ್ತದ ವೇಗಿಗಳಾದ ಆಸ್ಟ್ರೇಲಿಯಾದ ಜೇ ರಿಚರ್ಡ್‌ಸನ್ (14 ಕೋಟಿ ರೂ) ಮತ್ತು ರಿಲಿ ಮೆರಿಡಿತ್ (8 ಕೋಟಿ ರೂ) ದಂಡನೆಗೆ ಒಳಗಾಗುತ್ತಿದ್ದರೆ, ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ನಿರ್ಣಾಯಕ ಕೊನೇ ಓವರ್‌ನಲ್ಲಿ 8 ರನ್ ಮಾತ್ರ ಬಿಟ್ಟುಕೊಟ್ಟರು. 22 ವರ್ಷದ ಅರ್ಷದೀಪ್ 35 ರನ್‌ಗೆ 3 ವಿಕೆಟ್ ಕಬಳಿಸಿ ಶತಕವೀರ ಸಂಜು ಸ್ಯಾಮ್ಸನ್ ಗೆಲುವು ಕಸಿಯದಂತೆ ನೋಡಿಕೊಂಡರು.

    ‘ಈ ಸಲ ಕಪ್ ನಮ್ದೆ’ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts