More

    ಕಿಚ್ಚ ಸುದೀಪ್ ಬೆನ್ನಲ್ಲಿ ಇದೇನಿದು ಚಿತ್ತಾರ?; ಎಲ್ಲ ‘ಫ್ಯಾಂಟಮ್​’ ಮಹಿಮೆ!

    ಬೆಂಗಳೂರು: ಸ್ಟಾರ್ ಎಂದಮೇಲೆ ಬಹುತೇಕ ಎಲ್ಲರೂ ಸಿಕ್ಸ್ ಪ್ಯಾಕ್​ ತೋರಿಸುತ್ತಾರೆ, ಎದೆಗಾರಿಕೆ ತೋರುತ್ತಾರೆ. ಆದರೆ ಕಿಚ್ಚ ಸುದೀಪ್​ ಫಾರ್ ಎ ಚೇಂಜ್​ ಬೆನ್ನಲ್ಲೇ ಚಿತ್ತಾರ ತೋರಿದ್ದಾರೆ. ‘ಫ್ಯಾಂಟಮ್​’ ಪ್ರಪಂಚ ಅವರನ್ನು ಹೀಗೆಲ್ಲ ಮಾಡಿಸಿದೆ.

    ಅನೂಪ್​ ಭಂಡಾರಿ ನಿರ್ದೇಶನದಲ್ಲಿ ಸುದೀಪ್ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವ ‘ಫ್ಯಾಂಟಮ್’ ಸಿನಿಮಾ ಚಿತ್ರೀಕರಣ ಕ್ಲೈಮ್ಯಾಕ್ಸ್​ ಹಂತದಲ್ಲಿದ್ದು, ಅದರಲ್ಲಿನ ಒಂದು ಝಲಕ್ ಹಂಚಿಕೊಂಡಿದ್ದಾರೆ ಸುದೀಪ್. ಸಿನಿಮಾದ ಕ್ಲೈಮ್ಯಾಕ್ಸ್​ಗಾಗಿ ಕಳೆದ ಒಂದು ತಿಂಗಳಿಂದ ಎಲ್ಲರೂ ದಣಿದಿರುವ ಬಗ್ಗೆ ಹೇಳಿಕೊಂಡಿದ್ದಾರೆ ಕಿಚ್ಚ.

    ಈ ಮಧ್ಯೆ ತಮ್ಮ ಕಟ್ಟುಮಸ್ತಾದ ದೇಹ, ಅದರಲ್ಲೂ ಹುರಿಗೊಳಿಸಿದ ಬೆನ್ನಿನ ಗಮನ ಸೆಳೆಯುವ ಚಿತ್ರವೊಂದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಸುದೀಪ್​, ಬಹಳ ದಿನಗಳ ಬಳಿಕ ವರ್ಕ್​ ಔಟ್​ ಆರಂಭಿಸಿರುವ ಕುರಿತೂ ಹೇಳಿಕೊಂಡಿದ್ದಾರೆ.

    ಒಳ್ಳೇ ಫುಡ್ಡು, ಡೀಸೆಂಟ್​ ಲೈಫ್​ಸ್ಟೈಲ್​, ಸ್ವಲ್ಪ ಶಿಸ್ತು.. ಕೊನೆಗೂ ಕೆಟ್ಟದ್ದೇನೂ ಆಗಿಲ್ಲ ಎಂದಿರುವ ಅವರು, ಸಿನಿಮಾಗಾಗಿ ಹುರಿಗೊಳಿಸಿರುವ ತಮ್ಮ ಮೈಯನ್ನು ಪ್ರದರ್ಶಿಸಿದ್ದಾರೆ. ಹಾಗೆಯೇ ‘ಫ್ಯಾಂಟಮ್​’ ಸಿನಿಮಾಗಾಗಿ ಡಿಸೆಂಬರ್ 4ರಿಂದ ನಾಲ್ಕನೇ ಹಂತದ ಚಿತ್ರೀಕರಣ ಆರಂಭವಾಗಲಿರುವ ಸಂತೋಷವನ್ನೂ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಹಳಿಗೆ ಮರಳಿದ ಶರ್ವಿುಳಾ; ನೋವು ಮರೆಯುವ ಹಾದಿಯಲ್ಲಿ…

    ಬಕೆಟ್​ ಹಿಡಿಯೋನು ಎಂದವರಿಗೆ ಜಗ್ಗೇಶ್​ ಖಡಕ್​ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts