More

    ಸ್ಟಾರ್​​ ಹೋಟೆಲ್​ನಲ್ಲಿ ಅಭಿಮಾನಿಗಳಿಗೆ ಪಾರ್ಟಿ ಕೊಡಿಸಿದ ನಟಿ ಕೀರ್ತಿ ಸುರೇಶ್! ಸೌತ್​ ಬ್ಯೂಟಿಗೆ ನೆಟ್ಟಿಗರ ಮೆಚ್ಚುಗೆ​

    ಚೆನ್ನೈ: ಬ್ಯೂಟಿ ಕ್ವೀನ್​​ ಕೀರ್ತಿ ಸುರೇಶ್,​ ಸೌತ್​ ಸಿನಿರಂಗದ ಬಹುಬೇಡಿಕೆಯ, ಬಹುಭಾಷಾ ನಟಿ. ಕೆಲವು ದಿನಗಳ ಹಿಂದಷ್ಟೇ ಕಾಲಿವುಡ್​ ಬ್ಯೂಟಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ದಿನ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ ಹರಿಸುವುದರ ಜೊತೆಗೆ ಕೀರ್ತಿ ಸುರೇಶ್​ ಅವರ ಹೆಸರನ್ನು ಇಡೀ ದಿನ ಟ್ರೆಂಡಿಂಗ್​ನಲ್ಲಿ ಇಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಅಭಿಮಾನಿಗಳಿಗೆ ಪಾರ್ಟಿ ನೀಡುವ ಮೂಲಕ ಕೀರ್ತಿ ಸುರೇಶ್​ ವಿಶೇಷ ಗೌರವ ಸಲ್ಲಿಸಿದ್ದಾರೆ. ಅಲ್ಲದೆ, ಇತರೆ ನಟಿಯರಿಗಿಂತ ಅಭಿಮಾನಿಗಳ ವಿಚಾರದಲ್ಲಿ ವಿಭಿನ್ನ ನಿಂತಿದ್ದಾರೆ.

    ಚೆನ್ನೈನ ಸ್ಟಾರ್​ ಹೋಟೆಲ್​ನಲ್ಲಿ ತಮ್ಮ ಅಭಿಮಾನಿಗಳಿಗೆ ಪಾರ್ಟಿ ನೀಡಿದ ಕೀರ್ತಿ ಸುರೇಶ್​, ಕೆಲ ಕಾಲ ಅವರೊಂದಿಗೆ ಸಂವಾದ ಸಹ ನಡೆಸಿದರು. ಅಲ್ಲದೆ, ಸೆಲ್ಫಿ ಮತ್ತು ವಿಡಿಯೋಗಳಿಗೆ ಪೋಸ್​ ನೀಡಿದರು. ಅಭಿಮಾನಿಗಳ ಜೊತೆ ಕೇಕ್​ ಕತ್ತರಿಸಿದ ಬಳಿಕ ತಾವು ಸಹ ಅಭಿಮಾನಿಗಳ ಜೊತೆ ಕುಳಿತು ಭೋಜನ ಸವಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಕೀರ್ತಿ ಸುರೇಶ್​ ಅವರು ನೆಟ್ಟಿಗರ ಮನ ಗೆದ್ದಿದ್ದಾರೆ.

    ಸ್ಟಾರ್​​ ಹೋಟೆಲ್​ನಲ್ಲಿ ಅಭಿಮಾನಿಗಳಿಗೆ ಪಾರ್ಟಿ ಕೊಡಿಸಿದ ನಟಿ ಕೀರ್ತಿ ಸುರೇಶ್! ಸೌತ್​ ಬ್ಯೂಟಿಗೆ ನೆಟ್ಟಿಗರ ಮೆಚ್ಚುಗೆ​

    ಇದುವರೆಗೂ ನಾಯಕ ನಟರು ಮಾತ್ರ ಇಂತಹ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಓರ್ವ ನಟಿ ತನ್ನ ಅಭಿಮಾನಿಗಳಿಗೆ ಪಾರ್ಟಿ ಆಯೋಜಿಸುವ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಕೀರ್ತಿ ಸುರೇಶ್​ ಪ್ರಸ್ತುತ ಐ ಸಿರೆನ್​ ಹೆಸರಿನ ಸಿನಿಮಾದಲ್ಲಿ ಜಯಂ ರವಿ ಜೊತೆ ನಟಿಸುತ್ತಿದ್ದಾರೆ. ಅವರ ಬಹುಭಾಷ ಸಿನಿಮಾ “ದಸರಾ” ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ ತೆಲುಗು ನಟ ನಾನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

    ಭಾರತದ 8 ಸಿಟಿ ಹೆಚ್ಚು ಮಲಿನ: ವಿಶ್ವ ವಾಯು ಗುಣಮಟ್ಟ ಸೂಚ್ಯಂಕ; ಉತ್ತಮದಲ್ಲಿ ಏಕೈಕ ನಗರ

    ಮಾತು ತಪ್ಪದ ಯಶ್; ಪ್ರಕಾಶ್ ರೈ ಜತೆ ನಿಂತ ಯಶೋಮಾರ್ಗ, ಕೆವಿಎನ್ ಫೌಂಡೇಷನ್

    ಗುರೂಜಿ ಆಕೆಯನ್ನಷ್ಟೇ ಹೊಗಳುತ್ತಿದ್ದರು; ಪ್ರಿಯಾಂಕಾ ನನಗಿಂತ ಉತ್ತಮ ಡಾನ್ಸರ್ ಎಂದ ಕತ್ರಿನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts