More

    ಟೆಸ್ಟ್​ ವಿಶ್ವಕಪ್​ ಫೈನಲ್​ಗೆ ಮುನ್ನ ಭಾರತ ತಂಡಕ್ಕೆ ಕಪಿಲ್​ ದೇವ್​ ಕಿವಿಮಾತು

    ನವದೆಹಲಿ: ಈಗಾಗಲೆ ಏಕದಿನ ಮತ್ತು ಟಿ20 ವಿಶ್ವಕಪ್​ಗಳನ್ನು ಜಯಿಸಿರುವ ಭಾರತ ತಂಡ, ಟೆಸ್ಟ್​ ವಿಶ್ವಕಪ್​ ಖ್ಯಾತಿಯ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲೂ ಗೆದ್ದು ಮೂರೂ ಪ್ರಕಾರದಲ್ಲಿ ವಿಶ್ವಕಪ್​ ಜಯಿಸಿದ ಮೊದಲ ತಂಡವೆನಿಸುವ ಹುರುಪಿನಲ್ಲಿದೆ. ನ್ಯೂಜಿಲೆಂಡ್​ ವಿರುದ್ಧ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯದಲ್ಲಿ ಕಣಕ್ಕಿಳಿಯುವುದಕ್ಕೆ ಮುನ್ನ ಭಾರತ ತಂಡಕ್ಕೆ 1983ರ ಏಕದಿನ ವಿಶ್ವಕಪ್​ ವಿಜೇತ ನಾಯಕ ಕಪಿಲ್​ ದೇವ್​ ಕೆಲ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.

    ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ ಪಂದ್ಯದಲ್ಲಿ ಭಾರತ ತಂಡ ತಾಳ್ಮೆ ಪ್ರದಶಿರ್ಸಬೇಕು. ಅತಿಯಾದ ಆಕ್ರಮಣಕಾರಿಯಾಗಬಾರದು. ಪಂದ್ಯವನ್ನು ಅವಧಿಯಿಂದ ಅವಧಿಗೆ ತಕ್ಕಂತೆ ಆಡಬೇಕು. ಯಾಕೆಂದರೆ ಇಂಗ್ಲೆಂಡ್​ನಲ್ಲಿ ಪ್ರತಿ ನಿಮಿಷಕ್ಕೂ ವಾತಾವರಣ ಬದಲಾಗುತ್ತದೆ ಎಂದು ಕಪಿಲ್​ ದೇವ, ವಿರಾಟ್​ ಕೊಹ್ಲಿ ಬಳಗಕ್ಕೆ ಕಿವಿಮಾತು ಹೇಳಿದ್ದಾರೆ.

    ಇದನ್ನೂ ಓದಿ: ಟೆಸ್ಟ್​ ವಿಶ್ವಕಪ್ ಫೈನಲ್​ ಪಂದ್ಯ ಕನ್ನಡ ಕಾಮೆಂಟರಿಯಲ್ಲೂ ನೇರಪ್ರಸಾರ

    ಭಾರತ ಬಲಿಷ್ಠವಾದ ಬ್ಯಾಟಿಂಗ್​ ವಿಭಾಗ ಹೊಂದಿದೆ. ಆದರೆ ಇಂಗ್ಲೆಂಡ್​ ವಾತಾವರಣವನ್ನು ಸಮರ್ಥವಾಗಿ ನಿಭಾಯಿಸುವುದು ಪ್ರಮುಖವಾಗಿದೆ. ಇತ್ತೀಚೆಗೆ ಬ್ಯಾಟ್ಸ್​ಮನ್​ಗಳ ಪರಿಶ್ರಮಕ್ಕೆ ಬೌಲರ್​ಗಳು ಸಮರ್ಥವಾಗಿ ನಿಲ್ಲುತ್ತಿದ್ದಾರೆ. ಆದರೆ ಫೈನಲ್​ ಪಂದ್ಯದಲ್ಲಿ ಬ್ಯಾಟ್ಸ್​ಮನ್​ಗಳ ಆಟವೇ ನಿರ್ಣಾಯಕವಾದುದು ಎಂದು ಕಪಿಲ್​ ದೇವ್​ ಅಭಿಪ್ರಾಯಪಟ್ಟಿದ್ದಾರೆ.

    ಭಾರತ ತಂಡದ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ರಿಷಭ್​ ಪಂತ್​ಗೂ ಕೆಲ ಅಮೂಲ್ಯ ಸಲಹೆಗಳನ್ನು ನೀಡಿರುವ 62 ವರ್ಷದ ಕಪಿಲ್​ ದೇವ್​, ಪಂತ್​ ಈಗ ಪಕ್ವ ಕ್ರಿಕೆಟಿಗರಂತೆ ಕಾಣಿಸುತ್ತಿದ್ದಾರೆ. ಆದರೆ ಇಂಗ್ಲೆಂಡ್​ನಲ್ಲಿ ಅವರು ಕ್ರೀಸ್​ನಲ್ಲಿ ಹೆಚ್ಚಿನ ಸಮಯ ಕಳೆಯಬೇಕಾದ ಅಗತ್ಯವಿದೆ. ಪ್ರತಿ ಎಸೆತವನ್ನೂ ಹೊಡೆಯಲು ಹೋಗಬಾರದು. ಇದೇ ಮಾತನ್ನು ಹಿಂದೆ ರೋಹಿತ್​ ಶರ್ಮಗೂ ಹೇಳುತ್ತಿದ್ದೆ. ಅವರೂ ಎಲ್ಲ ಎಸೆತಗಳಿಗೆ ದೊಡ್ಡ ಹೊಡೆತಗಳನ್ನು ಬಾರಿಸಲು ಪ್ರಯತ್ನಿಸಿ ಔಟಾಗುತ್ತಿದ್ದರು ಎಂದು ಹೇಳಿದ್ದಾರೆ.

    ಹಾಟ್ ಫೋಟೋಗಳ ಮೂಲಕ ಭರ್ಜರಿ ಸೌಂಡ್ ಮಾಡುತ್ತಿದ್ದಾರೆ ವಿಂಡೀಸ್ ಕ್ರಿಕೆಟಿಗನ ಪತ್ನಿ…

    ಪೈಲ್ವಾನ್​ಗಳಿಗೆ ನೀಡುವ ಆಹಾರವೇ ಬೇಕೆಂದ ಸುಶೀಲ್​, ಪೊಲೀಸ್​ ಕಸ್ಟಡಿಯಲ್ಲೇ ಬರ್ತ್​ಡೇ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts