More

    ಹಿಂದಿ ಬಾಕ್ಸ್​-ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ ಕಾಂತಾರ!

    ನವದೆಹಲಿ: ಹೊಂಬಾಳೆ ಫಿಲಂಸ್​​ ಬ್ಯಾನರ್​​ನಡಿ ಮೂಡಿಬಂದ, ರಿಷಬ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಸಿನಿಮಾ ಕಾಂತಾರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಪ್ಯಾನ್​​ ಇಂಡಿಯಾ ಸಿನಿಮಾವಾಗಿದೆ. ಹಿಂದಿ ವಲಯದಲ್ಲೂ ತೆರೆಕಂಡಿರುವ ಕಾಂತಾರ, ಬಾಕ್ಸ್​-ಆಫೀಸ್​​ನಲ್ಲಿ ಧೂಳೆಬ್ಬಿಸಿದೆ. ಸದ್ಯ ಭಾರತದ ಟಾಪ್​​ 250 ಸಿನಿಮಾಗಳಲ್ಲಿ ಅಗ್ರಸ್ಥಾನ ಕಾಂತಾರಕ್ಕಿದೆ!

    ಹೊಸದಾಗಿ ಬಿಡುಗಡೆಯಾದ ಹಿಂದಿ ಸಿನಿಮಾಗಳಿಂದ ‘ಕಾಂತಾರ’ಕ್ಕೆ ಯಾವುದೇ ಅಡೆತಡೆಗಳಾಗಿಲ್ಲ. ಹಿಂದಿ ಆವೃತ್ತಿಯಲ್ಲಿ ಕಾಂತಾರ ಕಲೆಕ್ಷನ್​​ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹಿಂದಿಯಲ್ಲಿ ಬಿಡುಗಡೆಯಾದ ಎರಡೇ ವಾರದಲ್ಲಿ 31.7 ಕೋಟಿ ರೂ. ಗಳಿಸಿದೆ.

    ಹಿಂದಿ ಆವೃತ್ತಿಯಲ್ಲಿ ಬಿಡುಗಡೆಯಾದ ‘ಕಾಂತಾರ’ ಮೊದಲ ದಿನವೇ 1.27 ಕೋಟಿ ರೂ. ಗಳಿಸುವ ಮೂಲಕ ದೊಡ್ಡ ಮೊತ್ತದ ಕಲೆಕ್ಷನ್‌ನೊಂದಿಗೆ ತೆರೆಕಂಡಿತ್ತು. ಎರಡನೇ ದಿನದ ಕಲೆಕ್ಷನ್ 2.75 ಕೋಟಿ ರೂ., ಮೂರನೇ ದಿನ 3.5 ಕೋಟಿ ರೂ. ದಾಟಿತ್ತು. ವಾರಾಂತ್ಯದ ನಂತರ ಹಿಂದಿ ಮಾರುಕಟ್ಟೆಯಲ್ಲಿ ಟಿಕೆಟ್ ದರಗಳ ಕಡಿತವನ್ನು ಹೊರತು ಪಡಿಸಿದರೆ, ಸಿನಿಮಾದ ಕಲೆಕ್ಷನ್​ ಶುಕ್ರವಾರ(ಅ.14)ಕ್ಕೆ ಹೋಲಿಸಿದರೆ ಸೋಮವಾರದ ಕಲೆಕ್ಷನ್​ನಲ್ಲಿ 1.75 ಕೋಟಿಯೊಂದಿಗೆ ಶೇ.40 ರಿಂದ 50 ಏರಿಕೆ ಕಂಡಿದೆ. ಮಂಗಳವಾರ 1.88 ಕೋಟಿ ರೂ., ಬುಧವಾರ 1.95 ರೂ., ಗುರುವಾರ 1.90 ಕೋಟಿ ರೂ. ಗಳಿಸುವ ಜತೆಗೆ ಸರಾಸರಿ ಕಲೆಕ್ಷನ್​ ಮೂಲಕ ಸ್ಥಿರ ಬೆಳವಣಿಗೆ ಕಂಡುಬಂದಿತ್ತು.

    ಆದರೆ ಅ.21(ಶುಕ್ರವಾರ) ಏಕಾಏಕಿ 2.5 ಕೋಟಿಗೆ ಕಲೆಕ್ಷನ್​​ ಮೊತ್ತ ಏರಿಕೆಯಾಗಿದೆ. ಶನಿವಾರ ಹಿಂದಿ ಬಾಕ್ಸ್​-ಆಫೀಸ್​​​ ಕಲೆಕ್ಷನ್​​ನಲ್ಲಿ 2.55 ಕೋಟಿ ರೂ. ಮತ್ತು ಭಾನುವಾರ 2.65 ಕೋಟಿ ರೂ, ಸೋಮವಾರ 1.90 ಕೋಟಿ ರೂ. ಮೊತ್ತ ಗಳಿಸಿದೆ. ಇದೀಗ ಅ.25(ಮಂಗಳವಾರ)ರ ದಾಖಲೆಗಳ ಪ್ರಕಾರ 2.35 ಕೋಟಿಯಿಂದ ಬುಧವಾರಕ್ಕೆ 2.60 ಕೋಟಿಗೆ ಏರಿಕೆಯಾಗಿದೆ. ಹಾಗೂ ಗುರುವಾರ ಕೂಡ 2.60 ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್​-ಆಫೀಸ್​ನಲ್ಲಿ ಸ್ಥಿರ ದಾಖಲೆ ಸೃಷ್ಟಿಸಿದೆ.

    ಹಿಂದಿ ಬಾಕ್ಸ್​-ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡುತ್ತಿರುವ ಕಾಂತಾರ ಸಿನಿಮಾ ಇದೀಗ ಪ್ರಸ್ತುತ ಭಾರತದ ಟಾಪ್​​ 250 ಸಿನಿಮಾಗಳಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ‘ದ ಇಂಟರ್​ನೆಟ್​​​ ಮೂವೀ ಡೆಟಾಬೆಸ್​​ (IMDb) ವರದಿಯ ಮೂಲಕ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts