More

  ಬಿಎಸ್‌ವೈ ಪರ ಶಾಮನೂರು ಬ್ಯಾಟಿಂಗ್

  ದಾವಣಗೆರೆ : ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷರೂ ಆಗಿರುವ ಡಾ. ಶಾಮನೂರು ಶಿವಶಂಕರಪ್ಪ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
   ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾರೋ ಮಹಿಳೆ ಬಂದು ದೂರು ಕೊಟ್ಟ ತಕ್ಷಣ ಅರೆಸ್ಟ್ ಎಂದರೆ ಏನರ್ಥ, ಇದರ ಬಗ್ಗೆ ಏನು ಹೇಳೋಣ ಎಂದು ಪ್ರಶ್ನಿಸಿದರು.
   ಆರೋಪ ಸಾಬೀತಾದ ನಂತರ ಶಿಕ್ಷೆ ಕೊಟ್ಟರೆ ಅದೊಂದು ಲೆಕ್ಕಾಚಾರ. ಯಾರೋ ದಾರಿಯಲ್ಲಿ ಹೋಗುವವರು ದೂರು ಕೊಟ್ಟರೆ ಬಂಧಿಸುವುದು ತಪ್ಪಲ್ಲವೆ? ಇದರಲ್ಲಿ ಏನೋ ನಡೆದಿದೆ. ಆ ಮಹಿಳೆ 55 ಜನರ ವಿರುದ್ಧ ದೂರು ನೀಡಿದ್ದಾಳೆ. ಅದಕ್ಕೇನು ಬೆಲೆ ಇದೆಯೆ ಎಂದರು.
   ನಟ ದರ್ಶನ್ ಮೇಲೆ ಕೇಳಿ ಬಂದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ದರ್ಶನ್ ಆಗಲಿ, ಯಾರೇ ಆಗಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ರೇಣುಕಸ್ವಾಮಿ ಅವರನ್ನು ಸಾಯುವ ಹಾಗೆ ಹೊಡೆಯಬಾರದಿತ್ತು. ದರ್ಶನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
   
   

  See also  ಹರಿಹರದಲ್ಲಿ ಮೇರಿ ಮಾತೆಯ ಜಾತ್ರಾ ಮಹೋತ್ಸವ ಸಂಭ್ರಮ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts