More

    ಕಾನ್ ಎಂದರೆ ಉಡುಗೆಯಷ್ಟೇ ಅಲ್ಲ: ಚಿತ್ರೋತ್ಸವದ ಅನುಭವ ಹಂಚಿಕೊಂಡ ನಿರ್ದೇಶಕ ಪಿ. ಶೇಷಾದ್ರಿ

    | ಪ್ರಮೋದ ಮೋಹನ ಹೆಗಡೆ

    ಕಾನ್ ಚಲನಚಿತ್ರೋತ್ಸವ ಎಂದರೆ ವಿಶ್ವದಲ್ಲೇ ಅತಿ ದೊಡ್ಡ ಹಾಗೂ ಪ್ರತಿಷ್ಠಿತ ಚಿತ್ರೋತ್ಸವ. ಪ್ರತಿ ವರ್ಷ ಸಾವಿರಾರು ನಟ, ನಟಿಯರು, ನಿರ್ದೇಶಕರು ಫ್ರಾನ್ಸ್​ನಲ್ಲಿ ನಡೆಯುವ ಈ ಸಿನಿಮಾ ಹಬ್ಬದಲ್ಲಿ ಭಾಗಿಯಾಗುತ್ತಾರೆ. ಕಾನ್ ಎಂದರೆ ಎಲ್ಲೆಡೆ ನಟಿಯರ ಉಡುಪುಗಳ ಪ್ರದರ್ಶನದಂತೆ ಕಾಣುತ್ತದೆ. ಆದರೆ, ಅದನ್ನು ಹೊರತುಪಡಿಸಿದ ಒಂದು ದೊಡ್ಡ ಪ್ರಪಂಚ ಅಲ್ಲಿದೆ. ಮೊದಲ ಬಾರಿಗೆ ಈ ಉತ್ಸವದಲ್ಲಿ ಭಾಗಿಯಾಗಿದ್ದ ನಿರ್ದೇಶಕ ಪಿ. ಶೇಷಾದ್ರಿ ವಿಜಯವಾಣಿ ಜತೆ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    ಬಹಳ ವರ್ಷಗಳ ಕನಸು:
    ವಿಶ್ವಾದ್ಯಂತ 50,000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ 12 ದಿನಗಳ ಈ ಹಬ್ಬದಲ್ಲಿ ಶೇಷಾದ್ರಿ 8 ದಿನ ಭಾಗಿಯಾಗಿದ್ದರು. ‘ನನಗೆ ಬಹಳ ವರ್ಷಗಳಿಂದ ಕಾನ್‌ಗೆ ಹೋಗಬೇಕೆಂಬ ಆಸೆಯಿತ್ತು. ಆದರೆ, ಮೊದಲ ಬಾರಿಗೆ ಹೋಗಿದ್ದು. ಅಲ್ಲಿ ಎರಡು ರೀತಿಯ ಪ್ರವೇಶ ಪಾಸ್ ಇದೆ. ಒಂದು ಸಿನಿಮಾ ನೋಡಲು. ಮತ್ತೊಂದು ಮಾರುಕಟ್ಟೆಗೆ. ನಾನು ಸಿನಿಮಾ ನೋಡುವ ಪಾಸ್ ಖರೀದಿಸಿ, ಅಂದಾಜು 20ರಿಂದ 22 ಸಿನಿಮಾ ವೀಕ್ಷಿಸಿದ್ದೇನೆ’ ಎಂದರು.

    ಇದನ್ನೂ ಓದಿ:ಸಿಎಂ ಸಿದ್ದು ಭೇಟಿಗೆ ಸೈಕಲ್ ಸವಾರಿ

    ಸಿನಿಮಾಗೆ ಅತ್ಯುತ್ತಮ ಮಾರುಕಟ್ಟೆ:
    ಒಂದು ಸಿನಿಮಾ ಆಯ್ಕೆಯಾಗಿ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವುದು ಎಂದರೆ ಅದೊಂದು ಹೆಮ್ಮೆಯ ವಿಷಯ. ಅಲ್ಲಿ ಸಿನಿಮಾ ಪ್ರದರ್ಶನಕ್ಕಿಂತ ಮಾರುಕಟ್ಟೆಯ ಉಪಯೋಗಗಳು ಸಾಕಷ್ಟಿವೆ. ‘ಚಿತ್ರಕ್ಕೆ ಸಂಬಂಧಿಸಿದಂತೆ ಓಟಿಟಿ, ಸ್ಯಾಟಲೈಟ್ ಸೇರಿದಂತೆ ಸುಮಾರು 150ಕ್ಕೂ ಅಧಿಕ ಹಕ್ಕುಗಳಿವೆ. ಅಲ್ಲಿಗೆ ಬರುವ ಜನರಿಗೆ ಭಾರತೀಯ ಸಿನಿಮಾ ಎಂದರೆ ಕೇವಲ ಬಾಲಿವುಡ್, ಹಾಡು, ಡಾನ್ಸ್ ಎಂಬ ಅಭಿಪ್ರಾಯವಿದೆ. ಅದನ್ನು ಹೋಗಿಸುವ ಪ್ರಯತ್ನ ಮಾಡಬೇಕು’ ಎನ್ನುತ್ತಾರೆ ಪಿ. ಶೇಷಾದ್ರಿ.

    ಶಿಸ್ತು ಅಲ್ಲಿನ ವಿಶೇಷ
    ‘ಕಾನ್‌ನಲ್ಲಿ ಅತ್ಯಂತ ಶಿಸ್ತನ್ನು ಪಾಲಿಸಲಾಗುತ್ತದೆ. ಸಿನಿಮಾ ಕ್ಷೇತ್ರದವರು, ಪತ್ರಕರ್ತರು, ವಿಮರ್ಶಕರನ್ನು ಹೊರತುಪಡಿಸಿ ಮೂರನೆಯವರಿಗೆ ಪ್ರವೇಶವಿಲ್ಲ. ಒಂದು ಸಿನಿಮಾ ವೀಕ್ಷಿಸಲು ಹಿಂದಿನ ದಿನವೇ ಆನ್‌ಲೈನ್‌ನಲ್ಲಿ ಬುಕ್ ಮಾಡಿಕೊಳ್ಳಬೇಕು. ಸಿನಿಮಾ ನೋಡಲು ಹೋಗದಿದ್ದರೆ ಮುಂದಿನ ಚಿತ್ರಗಳನ್ನು ನೋಡಲು ಅವಕಾಶ ಇರುವುದಿಲ್ಲ’ ಎನ್ನುತ್ತಾರೆ ಶೇಷಾದ್ರಿ.

    ಇದನ್ನೂ ಓದಿ: 9 ವರ್ಷ, 9 ಪ್ರಶ್ನೆ: ಮೌನ ಮುರಿದು ಉತ್ತರಿಸಿ ಎಂದು ಮೋದಿಗೆ ಕಾಂಗ್ರೆಸ್ ಸವಾಲು

    ಕರ್ನಾಟಕದ ಸ್ಟಾಲ್ ಕೂಡ ಇರುವಂತಾಗಬೇಕು
    ಕಾನ್‌ನಲ್ಲಿ ಭಾರತದ ಎರಡು ಸ್ಟಾಲ್‌ಗಳನ್ನು ಹಾಕಲಾಗಿದೆ. ಒಂದು ಕೇಂದ್ರ ಸರ್ಕಾರ, ಮತ್ತೊಂದು ಮಹಾರಾಷ್ಟ್ರ ಸರ್ಕಾರದ ಸ್ಟಾಲ್. ‘ಮಹಾರಾಷ್ಟ್ರ, ಗುರಾತ್ ಹಾಗೂ ಪಶ್ಚಿಮ ಬಂಗಾಳ ಕಳೆದ 8-10 ವರ್ಷಗಳಿಂದ ಅಲ್ಲಿ ಸ್ಟಾಲ್ ಹಾಕುತ್ತಿವೆ. ಅದೇ ರೀತಿ ಕರ್ನಾಟಕ ಸರ್ಕಾರ ಕೂಡ ಮಾಡಬೇಕು. ಹೊಸಬರಿಗೆ ಅವಕಾಶ ಸಿಗುವಂತಾಗುತ್ತದೆ’ ಎಂದು ಪಿ. ಶೇಷಾದ್ರಿ ಅಭಿಪ್ರಾಯ ತಿಳಿಸಿದರು.

    ಹೊಸ ಸಿನಿಮಾದ ಮಾತುಕತೆ:
    ಪಿ. ಶೇಷಾದ್ರಿ ಅವರು ಅಲ್ಲಿನ ಅನುಭವಗಳನ್ನು ಹಂಚಿಕೊಳ್ಳುತ್ತ ‘ನಾನು ಅಲ್ಲಿಗೆ ಹೋಗಿದ್ದು ಒಂದು ಹೊಸ ಸಿನಿಮಾದ ಕುರಿತು ಮಾಹಿತಿ ನೀಡಲು. ಕನ್ನಡದ ನಿಘಂಟು ತಯಾರಿಸಿದ ಜರ್ಮನಿಯ ರ್ಡಿನಂಡ್ ಕಿಲ್ ಜೀವನಾಧಾರಿತ ಸಿನಿಮಾ ಮಾಡುವ ಯೋಚನೆಯಿದೆ. ಈ ನಿಟ್ಟಿನಲ್ಲಿ ಅನೇಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದೆ’ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts