More

    ಬದುಕು ಬದಲಾಗಬಹುದು, ಭಾವನೆಗಳಲ್ಲ … ಮತ್ತೆ ಬರಲಿದೆ ‘ಮಾಯಾಮೃಗ’

    ಬೆಂಗಳೂರು: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ ಎಂದರೆ ಅದು ‘ಮಾಯಾಮೃಗ’. 90ರ ದಶಕದ ಕೊನೆಯಲ್ಲಿ ಆಗಷ್ಟೇ ಮೆಗಾ ಸೀರಿಯಲ್​ಗಳ ಜಮಾನ ಪ್ರಾರಂಭವಾಗಿತ್ತು. ಇಂಥ ಸಂದರ್ಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿ ಅದ್ಭುತ ಜನಪ್ರಿಯತೆ ಪಡೆದ ಧಾರಾವಾಹಿ ಎಂದರೆ ಅದು ‘ಮಾಯಾಮೃಗ’. ಈ ಧಾರಾವಾಹಿಯನ್ನು. ಟಿ.ಎನ್​. ಸೀತಾರಾಂ, ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾನ್​ ಜಂಟಿಯಾಗಿ ನಿರ್ದೇಶಿಸಿದ್ದರು. ಈಗ 20 ವರ್ಷಗಳ ನಂತರ ಆ ಧಾರಾವಾಹಿಯ ‌ಮುಂದುವರೆದ ಭಾಗ ‘ಮತ್ತೆ ಮಾಯಾಮೃಗ’ ಎಂಬ ಹೆಸರಿನಲ್ಲಿ ಪ್ರಸಾರವಾಗುವುದಕ್ಕೆ ಸಿದ್ಧವಿದೆ. ಅಕ್ಟೋಬರ್ 31 ರ ಸೋಮವಾರ ರಾತ್ರಿ 9 ಗಂಟೆಗೆ ಸಿರಿಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿಯ ಪ್ರಸಾರ ಪ್ರಾರಂಭವಾಗಲಿದೆ.

    ಇದನ್ನೂ ಓದಿ: ಚಿತ್ರ ವಿಮರ್ಶೆ – ‘ಗಂಧದ ಗುಡಿ’ ಒಂದು ಚಿತ್ರವಲ್ಲ, ಅದೊಂದು ಅನುಭವ

    ಈ ಕುರಿತು ಮಾತನಾಡುವ ನಿರ್ದೇಶಕ ಟಿ.ಎನ್​. ಸೀತಾರಾಂ, ‘ಆಗ ನಿರ್ದೇಶನ ವಿಭಾಗದಲ್ಲಿ ನಾನು, ಪಿ.ಶೇಷಾದ್ರಿ ಹಾಗೂ ನಾಗೇಂದ್ರ ಶಾ ಇದ್ದೆವು. ಈಗಲೂ ನಾವು ಮೂವರು ಸೇರಿ ‘ಮತ್ತೆ ಮಾಯಾಮೃಗ’ ನಿರ್ದೇಶಿಸುತ್ತಿದ್ದೇವೆ. ಕಥಾ ವಿಸ್ತರಣೆಯಲ್ಲಿ ನನ್ನ ‌ಮಗಳು ಅಶ್ವಿನಿ ಹಾಗೂ ಪ್ರಹ್ಲಾದ್ ನಮ್ಮೊಂದಿಗಿದ್ದಾರೆ. ೨೩ ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. ನಾನು ಸೇರಿದಂತೆ ಹಲವರಿಗೆ ವಯಸ್ಸಾಗಿದೆ. ಹಳೆಯ ಕಲಾವಿದರು ಹಾಗೂ ಈಗಿನ ಹೊಸ ಕಲಾವಿದರ ಸಮಾಗಮದಲ್ಲಿ ಈ ಧಾರಾವಾಹಿ ಮೂಡಿಬರಲಿದೆ. ‘ಬದುಕು ಬದಲಾಗಬಹುದು, ಆದರೆ ಭಾವಗಳಲ್ಲ’ ಎಂಬ ಘೋಷವಾಕ್ಯದೊಂದಿಗೆಈ ಧಾರಾವಾಹಿ ಪ್ರಸಾರವಾಗಲಿದೆ’ ಎನ್ನುತ್ತಾರೆ ಟಿಎನ್​ಎಸ್​.

    ಆಗ “ಮಾಯಾಮೃಗ” ಮಾಡುತ್ತಿದ್ದಾಗ ನಮಗೆ ಪೈಪೋಟಿ ಇರಲಿಲ್ಲ ಎನ್ನುವ ಶೇಷಾದ್ರಿ, ‘ಆಗ ಧಾರಾವಾಹಿ ಸಂಖ್ಯೆ ತುಂಬಾ ಕಡಿಮೆ ಇರುತ್ತಿತ್ತು. ಈಗ ಎಲ್ಲಾ ವಾಹಿನಿಗಳಿಂದ ಸುಮಾರು 60ಕ್ಕೂ ಹೆಚ್ಚು ಧಾರಾವಾಹಿಗಳು ದಿನ ಪ್ರಸಾರವಾಗುತ್ತಿದೆ. ಇವುಗಳ ಮಧ್ಯೆ ನಾವು ಪ್ರೇಕ್ಷಕರನ್ನು ನಮ್ಮ ಧಾರಾವಾಹಿಯತ್ತ ಸೆಳೆಯುವ ದೊಡ್ಡ ಸವಾಲು ನಮ್ಮ ಮುಂದಿದೆ. ಜನ ‘ಮತ್ತೆ ಮಾಯಾಮೃಗ’ವನ್ನು ಜನ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ’ ಎಂದರು ಪಿ.ಶೇಷಾದ್ರಿ.

    ‘ಮಾಯಾಮೃಗ’ ಜನಪ್ರಿಯತೆಗೆ ಮತ್ತೊಂದು ಕಾರಣವೆಂದರೆ, ಕೆ.ಎಸ್​. ನರಸಿಂಹಸ್ವಾಮಿ ಬರೆದ ಶೀರ್ಷಿಕೆ ಗೀತೆ. ಆ ಗೀತೆಯನ್ನು ಇಲ್ಲೂ ಸ್ವಲ್ಪ ಬದಲಾವಣೆಗಳೊಂದಿಗೆ ಬಳಸಿಕೊಳ್ಳಲಾಗುತ್ತಿದೆಯಂತೆ. ‘ನರಸಿಂಹಸ್ವಾಮಿ ಅವರು ರಚಿಸಿದ ಸಾಲುಗಳನ್ನು ಯಾವುದೇ ಕಾರಣಕ್ಕು ಬದಲಿಸಲು ಸಾಧ್ಯವೇ ಇಲ್ಲ. ಅಂಥ ಕವಿ ಸಿಗುವುದಿಲ್ಲ. ಇನ್ನು ಅದಕ್ಕೆ ರಾಗ ಸಂಯೋಜಿಸಿದ ಅಶ್ವತ್ಥ್​ ಸಹ ಇಲ್ಲ. ಹಾಗಾಗಿ, ಟ್ಯೂನ್​ ಬದಿಲಿಸಿಸ. ಹಳೆಯ ಹಾಡನ್ನು ಇಟ್ಟುಕೊಂಡು, ಪ್ರವೀಣ್ ಡಿ. ರಾವ್​ ಸಾರಥ್ಯದಲ್ಲಿ ಒಂದಿಷ್ಟು ಹೊಸದು ಮಾಡಲಾಗಿದೆ’ ಎನ್ನುತ್ತಾರೆ ಸೀತಾರಾಂ.

    ಇದನ್ನೂ ಓದಿ: ಗಂಧದ ಗುಡಿ ನನ್ನ ಹೆಮ್ಮೆ; ಅಪ್ಪು ಜತೆಗಿನ ಟ್ರೆಕಿಂಗ್ ನೆನಪಿಸಿಕೊಂಡ ಅಶ್ವಿನಿ

    ಮೊದಲ ಧಾರಾವಾಹಿಯಲ್ಲಿ ನಟಿಸಿದ್ದ ಲಕ್ಷ್ಮೀ ಚಂದ್ರಶೇಖರ್​, ಮಾಳವಿಕಾ, ಎಂ.ಡಿ. ಪಲ್ಲವಿ, ದೀಪಶ್ರೀ ಮುಂತಾದವರು ಇಲ್ಲಿ ನಟಿಸಉತ್ತಿದ್ದು, ಅವರೊಂದಿಗೆ ಒಂದಿಷ್ಟು ಹೊಸ ಪ್ರತಿಭೆಗಳು ಸಹ ನಟಿಸುತ್ತಿದ್ದಾರೆ.

    ಬ್ರಹ್ಮಾಸ್ತ್ರ ಬಿಡ್ತಾರಾ? ಕರ್ಣ ಆಗ್ತಾರಾ? ಯಶ್​ ಮುಂದಿದೆ ಎರಡು ಆಯ್ಕೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts