More

    ಗಂಧದ ಗುಡಿ ನನ್ನ ಹೆಮ್ಮೆ; ಅಪ್ಪು ಜತೆಗಿನ ಟ್ರೆಕಿಂಗ್ ನೆನಪಿಸಿಕೊಂಡ ಅಶ್ವಿನಿ

    ‘ಗಂಧದ ಗುಡಿ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರವಾದ ಕಾರಣ ಚಿತ್ರದ ಕುರಿತು ಸಾಕಷ್ಟು ಕುತೂಹಲವಿದೆ. ಹಾಗಂತ ಇದು ಸಾಮಾನ್ಯ ಚಲನಚಿತ್ರವಲ್ಲ. ಬದಲಾಗಿ ಮನರಂಜನೆ, ಸಂಗೀತ, ಕರ್ನಾಟಕದ ಹಸಿರ ಸಿರಿಯ ದೃಶ್ಯವೈಭವವಿರುವ ವಿಭಿನ್ನ ಪ್ರಯತ್ನ. ಅಪು್ಪ ಅಗಲಿಕೆಯ ಬಳಿಕ ಅಶ್ವಿನಿ ಮೌನವಹಿಸಿದ್ದರು. ಯಾವುದೇ ವೇದಿಕೆಗೆ ಬಂದರೂ ಶುಭ ಹಾರೈಸಿ, ತಲೆ ತಗ್ಗಿಸಿ ಅವರ ಪಾಡಿಗೆ ನಿಂತುಬಿಡುತ್ತಿದ್ದರು. ಮೌನ, ಕಣ್ಣೀರ ಮೂಲಕ ಭಾವನೆಗಳಲ್ಲಿ ಮಾತನಾಡುತ್ತಿದ್ದರಷ್ಟೇ. ಆದರೆ, ಈಗ ಮೌನ ಮುರಿದಿದ್ದಾರೆ. ಪುನೀತ ಪರ್ವ ಕಾರ್ಯಕ್ರಮ, ಗಂಧದ ಗುಡಿ ಚಿತ್ರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಇದೇ ಮೊದಲ ಬಾರಿಗೆ ಮಾತಾಡಿದ್ದಾರೆ.

    ‘ಪುನೀತ ಪರ್ವ’ ತೃಪ್ತಿ ನೀಡಿತು…

    ಗಂಧದ ಗುಡಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಇದೇ ಅ. 21ರಂದು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದಿದತ್ತು. ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದರ ಬಗ್ಗೆ ಮಾತನಾಡುತ್ತಾ ಅಶ್ವಿನಿ, ‘‘ಪುನೀತ ಪರ್ವ’ ಅಭಿಮಾನಿಗಳಿಗಾಗಿಯೇ ಮಾಡಿದ ಕಾರ್ಯಕ್ರಮ. ರಾಜ್ಯದ ಮೂಲೆ ಮೂಲೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಬಂದಿದ್ದರು. ನಮ್ಮ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಜತೆ ಬೇರೆ ಚಿತ್ರರಂಗಗಳಿಂದಲೂ ಕಲಾವಿದರು ಬಂದಿದ್ದರು. ಅಪು್ಪ ಕೊನೆಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನನಗೆ ತುಂಬ ಸಂತೋಷವಾಯಿತು. ತೃಪ್ತಿ ನೀಡಿತು. ಅಭಿಮಾನಿಗಳಿಗೆ ಯಾವತ್ತೂ ನಾವು ಮತ್ತು ನಮ್ಮ ಕುಟುಂಬ ಚಿರಋಣಿಯಾಗಿರುತ್ತೇವೆ. ಕಳೆದ ಒಂದು ವರ್ಷದಿಂದ ಸರ್ಕಾರ ಕೂಡ ತುಂಬ ಸಪೋರ್ಟ್ ಮಾಡಿದೆ’ ಎನ್ನುತ್ತಾರೆ.

    ಅಪ್ಪು ಕಣ್ಣಲ್ಲಿ ಕರುನಾಡ ವನ್ಯಸಿರಿ ದರ್ಶನ

    ‘‘ಗಂಧದ ಗುಡಿ’ ಚಿತ್ರದ ಬಗ್ಗೆ ಮಾತನಾಡಿದ ಅವರು, ‘‘ಗಂಧದ ಗುಡಿ’ ಅಂತ ಅಪ್ಪಾಜಿ ಮತ್ತು ಶಿವಣ್ಣ ಸಿನಿಮಾ ಮಾಡಿದ್ದರು. ಆ ಚಿತ್ರಗಳಲ್ಲಿ ಕಥೆಯಿತ್ತು. ಆದರೆ, ಈ ಚಿತ್ರದ ಬಗ್ಗೆ ಅಪು್ಪ ಮತ್ತು ನಿರ್ದೇಶಕ ಅಮೋಘವರ್ಷ ರ್ಚಚಿಸುತ್ತಿರುವಾಗಲೇ ‘ಗಂಧದ ಗುಡಿ’ ಎಂದು ಶೀರ್ಷಿಕೆ ಇಟ್ಟರೆ ಹೇಗೆ ಅಂತ ನಿರ್ಧರಿಸಿದೆವು. ಈ ಚಿತ್ರವೇ ಒಂದು ಜರ್ನಿ. ಇದನ್ನು ಹೀಗೇ ಮಾಡಬೇಕು, ಹಾಗೇ ಮಾಡಬೇಕು ಅಂತ ಪ್ಲಾ್ಯನ್ ಮಾಡಿಕೊಂಡಿಲ್ಲ. ಬದಲಿಗೆ ಆ ಜರ್ನಿಯನ್ನೇ ಸೆರೆಹಿಡಿದಿರುವುದರಿಂದ ಈ ಚಿತ್ರವನ್ನು ಬೇರೆ ಚಿತ್ರಗಳಿಗಿಂತ ವಿಭಿನ್ನವಾಗಿಸಿದೆ. ಅಪು್ಪ ಕಣ್ಣಿನ ಮೂಲಕ ಕರ್ನಾಟಕವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ನನಗೆ ಈ ಚಿತ್ರದ ಬಗ್ಗೆ ತುಂಬ ಹೆಮ್ಮೆಯಿದೆ. ಜನರಿಗೆ ನನ್ನ ಮೂಲಕ ಕರ್ನಾಟಕವನ್ನು ತೋರಿಸಬೇಕು ಎಂಬ ಅಪು್ಪ ಪ್ರಯತ್ನದ ಬಗ್ಗೆ ಖುಷಿಯಿದೆ. ಆ ಜರ್ನಿಯಲ್ಲಿ ಅಪು್ಪ, ಅಪು್ಪ ಆಗಿಯೇ ಇದ್ದರು. ಅವರಿಗೆ ಮೇಕಪ್ ಇರಲಿಲ್ಲ, ಹೆಚ್ಚು ಜನರಿರಲ್ಲ. ಪ್ರತಿ ಶೆಡ್ಯೂಲ್​ಗೆ ಹೋದಾಗಲೂ ಖುಷಿಯಾಗಿದ್ದರು’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಅಶ್ವಿನಿ.

    ಕಾಡಾನೆ ಹಿಮ್ಮೆಟ್ಟಿಸಿದ್ದ ಅಪ್ಪು…

    ‘ಗಂಧದ ಗುಡಿ’ ಚಿತ್ರದಲ್ಲಿ ಫಾರೆಸ್ಟ್ ಗಾರ್ಡ್ ಮಿಲಿಟರಿ ಮಹದೇವು ಕೂಡ ನಟಿಸಿದ್ದಾರೆ. ಪುನೀತ್ ರಾಜಕುಮಾರ್ ಜತೆಗಿನ ಒಡನಾಟದ ಕುರಿತು ಹೇಳಿಕೊಳ್ಳುವ ಅವರು, ‘ಬೂದಿಪಡಗರದಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ ಕಾಡಾನೆಯೊಂದು ಜಮೀನಿಗೆ ನುಗ್ಗಿತ್ತು. ಅದನ್ನು ಹಿಮ್ಮೆಟ್ಟಿಸಲು ನನ್ನೊಂದಿಗೆ ಅಪ್ಪು ಅವರೂ ಬಂದರು. ನಾನು ಪಟಾಕಿ ಸಿಡಿಸಿ ಆನೆಯನ್ನು ಓಡಿಸಿದಾಗ ಜತೆಯಲ್ಲಿದ್ದರು. ಸಿನಿಮಾ ಚಿತ್ರೀಕರಣಕ್ಕಾಗಿ ಬಂದಿದ್ದರೂ ನನ್ನೊಂದಿಗೆ ಒಬ್ಬ ಸ್ನೇಹಿತಂತೆ ಇದ್ದರು. ಏಳು ವಾರದ ಚಿತ್ರೀಕರಣದಲ್ಲಿ ಅವರೆಂದೂ ನನ್ನನ್ನು ಏಕವಚನದಲ್ಲಿ ಮಾತನಾಡಿಸಿರಲಿಲ್ಲ. ಕಾಡಿನ ಬಗ್ಗೆ, ಕಾಡು ಕಾಯುವ ಅರಣ್ಯ ಸಿಬ್ಬಂದಿ ಬಗ್ಗೆ ಕೇಳಿ ತಿಳಿದುಕೊಂಡರು. ಈ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಹಿನ್ನೆಲೆಯಲ್ಲಿ ಮೊದಲ ದಿನವೇ ಚಿತ್ರ ನೋಡಲು ಟಿಕೆಟ್ ಸಿಗುವುದಿಲ್ಲ. ಸ್ವಲ್ಪ ದಿನಗಳ ಬಳಿಕ ನಾನು ಸಿನಿಮಾ ನೋಡುತ್ತೇನೆ. ಅವರೊಂದಿಗೆ ತೆರೆ ಮೇಲೆ ಕಾಣಿಸಿಕೊಂಡ ಪುಣ್ಯ ನನ್ನದು’ ಎಂದು ಹೇಳಿಕೊಂಡಿದ್ದಾರೆ.

    ಬೇಸರ, ಸಂತೋಷ ಎರಡೂ ಇದೆ…

    ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ‘ಗಂಧದ ಗುಡಿ’ ಚಿತ್ರ ಮೂಡಿಬಂದಿರುವ ಬಗ್ಗೆ ಸಂತೋಷವಿದೆ. ‘ಇದು ನನಗೆ ಹೆಮ್ಮೆ ನೀಡಿದ ಪ್ರಾಜೆಕ್ಟ್. ಒಂದು ಕಡೆ ಬೇಸರವಿದೆ, ಮತ್ತೊಂದು ಕಡೆ ಖುಷಿಯೂ ಇದೆ. ಪ್ರತಿ ವರ್ಷ ನಾವು ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣ ಮಾಡುತ್ತಿದ್ದೆವು. ಆಗೆಲ್ಲಾ ನಮ್ಮ ಎಷ್ಟೊಂದು ಪ್ರೇಕ್ಷಣೀಯ ಸ್ಥಳಗಳಿವೆ, ಹೊಸ ಹೊಸ ಜಾಗಗಳನ್ನು ಅನ್ವೇಷಿಸಬೇಕು ಎನ್ನುತ್ತಿದ್ದರು ಅಪು್ಪ. ಈಗ ಒಮ್ಮೆ ಹಿಂತಿರುಗಿ ನೋಡಿದರೆ, ಈ ಪ್ರಾಜೆಕ್ಟ್ ಅವರಿಗಾಗಿಯೇ ಇತ್ತೇನೋ ಅಂತನಿಸುತ್ತೆ’ ಎಂದು ಮೌನಕ್ಕೆ ಜಾರುತ್ತಾರೆ ಅಶ್ವಿನಿ.

    ಅಪ್ಪು ಜತೆ ಟ್ರೆಕಿಂಗ್ ಮಾಡಿದ್ದು ಅವಿಸ್ಮರಣೀಯ

    ಅಂದಹಾಗೆ ‘ಗಂಧದ ಗುಡಿ’ ಚಿತ್ರವನ್ನು ಏಳೆಂಟು ಪ್ರದೇಶಗಳಲ್ಲಿ, ಬೇರೆ ಬೇರೆ ಋತುಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟ, ಮುರುಡೇಶ್ವರ ನೇತ್ರಾಣಿ, ಕಾಳಿ ನದಿ, ಗಾಜನೂರು ಸೇರಿದಂತೆ ಇನ್ನೂ ಕೆಲವೆಡೆ ಶೂಟಿಂಗ್ ನಡೆಸಲಾಗಿದೆ. ಆ ಸಮಯದಲ್ಲಿ ಅಶ್ವಿನಿ ಕೂಡ ಪುನೀತ್ ಜತೆ ಒಮ್ಮೆ ಚಿತ್ರೀಕರಣಕ್ಕೆ ಹೋಗಿದ್ದರಂತೆ. ಆ ಘಟನೆಯ ಬಗ್ಗೆ ವಿವರಿಸುವ ಅವರು, ‘ಒಮ್ಮೆ ಕಾಳಿ ನದಿ ಬಳಿ ಶೂಟಿಂಗ್​ಗೆ ಹೋಗಿದ್ದಾಗ ಅಪು್ಪ ಒಂದಿಡೀ ದಿನ ಕರೆ ಮಾಡಿರಲಿಲ್ಲ. ಸಂಜೆ ಕರೆ ಮಾಡಿ, ‘ನಿನಗೆ ಕಾಲ್ ಮಾಡಲು ದಿನ ಪೂರ್ತಿ ಒಂದು ಬೆಟ್ಟವನ್ನೇ ಹತ್ತಬೇಕಾಯಿತು ಅದೇನು ಮಾಡ್ತಿಯೋ ಗೊತ್ತಿಲ್ಲ, ನೀನು ಇಲ್ಲಿಗೆ ಬರಲೇಬೇಕು. ನಾಳೆ ಬೆಳಗ್ಗೆ ನೀನಿಲ್ಲಿರಬೇಕು’ ಅಂದರು. ಸಡನ್ನಾಗಿ ಹಾಗೆ ಬರಲು ಆಗುವುದಿಲ್ಲ ಎಂದೆ. ‘ಇಲ್ಲ ನೀನು ಬರಲೇಬೇಕು, ಹುಲಿ ಸಂರಕ್ಷಿತಾರಣ್ಯಕ್ಕೆ ಹೋಗಲು ಅನುಮತಿ ಸಿಕ್ಕಿದೆ, ಇಲ್ಲೇ ಟ್ರೆಕಿಂಗ್ ಮಾಡೋಣ’ ಅಂದರು. ಎರಡು ದಿನಗಳ ಬಳಿಕ ನಾನಲ್ಲಿಗೆ ಹೋದೆ. ಬೆಳಗ್ಗೆ ನಾಲ್ಕೂವರೆಗೆ ಟ್ರೆಕಿಂಗ್ ಶುರು ಮಾಡಿದೆವು. ನನ್ನ ಜೀವನದ ಬೆಸ್ಟ್ ಟ್ರೆಕಿಂಗ್​ಗಳಲ್ಲಿ ಅದೂ ಒಂದು. ಆ ಬಳಿಕ ಪಾತಗುಡಿ ಎಂಬ ಚಿಕ್ಕ ಹಳ್ಳಿಗೆ ಹೋಗಿ, ಅಲ್ಲಿಯೇ ಊಟ ಮಾಡಿಕೊಂಡು ಬಂದೆವು’ ಎಂದು ವಿವರವಾಗಿ ಹೇಳಿಕೊಳ್ಳುತ್ತಾರೆ ಅಶ್ವಿನಿ.

    ಅಭಿಮಾನಿಗಳಿಂದ ಹಲವೆಡೆ ಸಂಭ್ರಮಾಚರಣೆ

    ಪುನೀತ್ ರಾಜಕುಮಾರ್ ಅಭಿಮಾನಿಗಳು ಸಹ ಹಲವೆಡೆ ನಾನಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಬರೋಬ್ಬರಿ 75 ಕಟೌಟ್​ಗಳನ್ನು ನಿರ್ವಿುಸಲಾಗಿದೆ. ಎಲ್ಲ ಕಟೌಟ್​ಗಳಿಗೂ ಹಾರ ಹಾಕಿ ಸಂಭ್ರಮಾಚರಣೆ ಆಯೋಜಿಸಲಾಗಿದೆ. ಮೈಸೂರು ದಸರಾ ಅಲಂಕಾರದಂತೆ ಒಂದು ಕಿಲೋಮೀಟರ್ ಉದ್ದಕ್ಕೂ ಲೈಟಿಂಗ್ ವ್ಯವಸ್ಥೆ, ಅಪು್ಪ ಸ್ಮಾರಕದ ದರ್ಶನಕ್ಕೆ ರಾಜ್ಯದ ಹಲವೆಡೆಗಳಿಂದ ಬರುವ ಎರಡು ಲಕ್ಷಕ್ಕೂ ಅಧಿಕ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

    ಚಿತ್ರಕ್ಕೆ ಕುಂಬ್ಳೆ, ಶ್ರೀನಾಥ್, ಲಕ್ಷ್ಮಣ್ ಹಾರೈಕೆ

    ‘ಗಂಧದ ಗುಡಿ’ ಚಿತ್ರಕ್ಕೆ ಹಲವು ಮಾಜಿ, ಹಾಲಿ ಕ್ರಿಕೆಟಿಗರೂ ಸಹ ಶುಭ ಹಾರೈಸಿದ್ದಾರೆ. ‘ನಿಷ್ಕಲ್ಮಶ ನಗು, ಪ್ರೀತಿ ನೀಡಿದ ಪ್ರೀತಿಯ ಪುನೀತ್ ರಾಜಕುಮಾರ್ ಅವರನ್ನು ಅಪ್ಪಿಕೊಳ್ಳುವ ಸಮಯ’ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ. ಹಾಗೆಯೇ ‘‘ಗಂಧದ ಗುಡಿ’ ಚಿತ್ರ ವೀಕ್ಷಿಸಲು ಎದುರು ನೋಡುತ್ತಿರುವುದಾಗಿ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಟ್ವೀಟಿಸಿದ್ದಾರೆ. ಹಾಗೆಯೇ ಪುನೀತ್ ಮತ್ತು ಅಶ್ವಿನಿ ಅವರ ಜತೆಗಿನ ಫೋಟೋ ಹಂಚಿಕೊಂಡಿರುವ ಅಮಿತ್ ಮಿಶ್ರಾ, ‘ಪುನೀತ್ ಎಲ್ಲ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. ವೆಂಕಟೇಶ್ ಪ್ರಸಾದ್, ಭಾರತ ತಂಡದ ಹಾಕಿ ಆಟಗಾರ ಎಸ್.ವಿ ಸುನಿಲ್ ಸಹ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

    24 ತಾಸುಗಳ ನೀತ ನಮನ…

    ಇಂದು ‘ಗಂಧದ ಗುಡಿ’ ಚಿತ್ರ ಬಿಡುಗಡೆಯಾಗುತ್ತಿದ್ದು, ನಾಳೆ ಪುನೀತ್ ರಾಜಕುಮಾರ್ ಮೊದಲ ವರ್ಷದ ಪುಣ್ಯತಿಥಿ ಕಾರ್ಯ ನಡೆಯಲಿದೆ. ಹೀಗಾಗಿ ಕರ್ನಾಟಕ ಫಿಲಂಸ್ ಮ್ಯೂಸಿಕ್ ಅಸೋಸಿಯೇಷನ್ ಮತ್ತು ನಟ, ನಟಿಯರು ಹಾಗೂ ವಾದ್ಯಗೋಷ್ಠಿ ಕಲಾವಿ ದರಿಂದ ಪುನೀತ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂದು ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಮಧ್ಯರಾತ್ರಿ 12 ಗಂಟೆವರೆಗೆ 24 ತಾಸುಗಳ ಸತತ ಸಂಗೀತ ಕಾರ್ಯಕ್ರಮ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts