ಸಿನಿಮಾ

ಸಿಎಂ ಸಿದ್ದು ಭೇಟಿಗೆ ಸೈಕಲ್ ಸವಾರಿ

ಬಾಗಲಕೋಟೆ: ಸಿದ್ದರಾಮಯ್ಯ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಿದ್ದರಿಂದ ಅವರ ಅಭಿಮಾನಿಗಳು ಅವರನ್ನು ಖುದ್ದು ಭೇಟಿ ಮಾಡುವ ಆಶಯದೊಂದಿಗೆ ಬಾಗಲಕೋಟೆಯಿಂದ ಬೆಂಗಳೂರವರೆಗೂ ಸೈಕಲ್ ಪಯಣ ಆರಂಭಿಸಿದ್ದಾರೆ.

ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ಮುತ್ತಪ್ಪ ಕೊಂಡ್ರಿ ಹಾಗೂ ಬಸಪ್ಪ ಕುರಿ ಎನ್ನುವ ಇಬ್ಬರು ಯುವಕರು ಪ್ರತ್ಯೇಕವಾಗಿ ಸೈಕಲ್ ತುಳಿದುಕೊಂಡು ಬುಧವಾರ ಬೆಂಗಳೂರು ಕಡೆಗೆ ತೆರಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವುದು ಇವರ ಮಹದಾಸೆ ಆಗಿತ್ತಂತೆ. ಇದೀಗ ಆ ಎರಡು ಆಸೆಗಳು ಈಡೇರಿದ ಹಿನ್ನೆಲೆಯಲ್ಲಿ ಭೇಟಿಗೆ ತೆರಳಿದ್ದಾರೆ.

ಪಾದಯಾತ್ರೆ ಮೂಲಕ ತೆರಳಲು ಇಬ್ಬರು ತೀರ್ಮಾನಿಸಿದ್ದರಂತೆ. ಆದರೆ, ಗ್ರಾಮದ ಹಿರಿಯರು ಕಾಲ್ನಡಿಗೆ ಬೇಡ ಎಂದು ಸಲಹೆ ನೀಡಿದ್ದರಿಂದ ಸೈಕಲ್ ತುಳಿದುಕೊಂಡು ಹೊರಟಿದ್ದಾರೆ. ಗ್ರಾಮದಿಂದ ಬೆಂಗಳೂರುವರೆಗಿನ ಅಂತರ 570 ಕಿ.ಮೀ. ಆಗಲಿದ್ದು, ಅಲ್ಲಿಗೆ ಹೋಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಯೇ ವಾಪಸ್ ಬರುತ್ತೇವೆ ಎಂದು ಅಭಿಮಾನಿಗಳು ಹೇಳುತ್ತಾರೆ.

ಕೊರಳಲ್ಲಿ ಸಿದ್ದರಾಮಯ್ಯ ಭಾವಚಿತ್ರ ಹಾಗೂ ಸೈಕಲ್ಗೆ ಪುನೀತ್ ರಾಜಕುಮಾರ್ ಭಾವಚಿತ್ರ ಮತ್ತು ಕನ್ನಡ, ಕಾಂಗ್ರೆಸ್ ಬಾವುಟ ಕಟ್ಟಿಕೊಂಡು ರಾಜಧಾನಿಗೆ ತೆರಳಿದ್ದಾರೆ.

Latest Posts

ಲೈಫ್‌ಸ್ಟೈಲ್