More

    ಬಾಲಿವುಡ್​ನ ಮೊದಲ ಆಕ್ಷನ್​ ಹೀರೋಯಿನ್​ ಆಗಲು ಹೊರಟಿದ್ದಾರೆ ಕಂಗನಾ!

    ಮುಂಬೈ: ‘ತಲೈವಿ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ತಮ್ಮ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಕಂಗನಾ, ಇದೀಗ ಆ ತೂಕ ಇಳಿಸಿಕೊಳ್ಳುವುದಕ್ಕೆ ಪ್ರಯತ್ನಪಡುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮುಂದಿನ ಚಿತ್ರಗಳಿಗಾಗಿ ವಿಭಿನ್ನ ಪಾತ್ರಗಳನ್ನು ಮಾಡುತ್ತಿರುವುದರಿಂದ ಅದಕ್ಕೆ ದೈಹಿಕ ತರಬೇತಿಯನ್ನು ಪಡೆಯುತ್ತಿದ್ದಾರೆ.

    ಇದನ್ನೂ ಓದಿ: ಕೊಡೈಕೆನಾಲ್​ನತ್ತ ರಕ್ಷಿತ್​ ಶೆಟ್ಟಿ ಮತ್ತು ಚಾರ್ಲಿಯ ಹೆಜ್ಜೆ

    ‘ತಲೈವಿ’ ಚಿತ್ರದ ನಂತರ ಕಂಗನಾ ರಣಾವತ್​ ಅವರು ‘ತೇಜಸ್​’ ಮತ್ತು ‘ಧಾಕ್ಕಡ್​’ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಗಳಲ್ಲಿನ ತಮ್ಮ ಪಾತ್ರಕ್ಕೆ ಅವರು ದೈಹಿಕ ತರಬೇತಿಯನ್ನು ಪ್ರಾರಂಭಿಸಿದ್ದು, ಬಾಕ್ಸಿಂಗ್​ ತರಬೇತಿ ಪಡೆಯುತ್ತಿರುವ ವಿಡಿಯೋವೊಂದನ್ನು ಅವರು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ನನ್ನ ಮುಂದಿನ ಚಿತ್ರಗಳಿಗಾಗಿ ಆಕ್ಷನ್​ ತರಬೇತಿ ಶುರು ಮಾಡಿದ್ದೇನೆ. ‘ತೇಜಸ್​ ಚಿತ್ರದಲ್ಲಿ ನಾನು ಫೌಜಿಯ ಪಾತ್ರ ಮಾಡುತ್ತಿದ್ದೇಬೆ’. ಇನ್ನು ‘ಧಾಕ್ಕಡ್​’ ಚಿತ್ರದಲ್ಲಿ ಮೊದಲ ಬಾರಿಗೆ ಸ್ಪೈ ಆಗಿ ಕಾಣಿಸಿಕೊಂಡಿದ್ದೇನೆ. ‘ಮಣಿಕರ್ಣಿಕಾ’ ಚಿತ್ರದ ಯಶಸ್ಸಿನ ನಂತರ ಬಾಲಿವುಡ್​ ನನಗೆ ಸಾಕಷ್ಟು ಕೊಟ್ಟಿರಬಹುದು. ನಾನು ಸಹ ಬಾಲಿವುಡ್​ಗೆ ಮೊದಲ ಆಕ್ಷನ್​ ಹೀರೋಯಿನ್​ ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ’ ಎಂದು ಕಂಗನಾ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಈ ನಟ ಸಾವಿರಾರು ಕೋಟಿ ರೂ. ಒಡೆಯ; ಇಂಥ ಕೆಲಸ ಮಾಡಿ ಇಷ್ಟು ದುಡ್ಡು ಗಳಿಸಿದ್ರಾ…?

    ‘ತಲೈವಿ’ ಚಿತ್ರದಲ್ಲಿ ಜಯಲಲಿತಾ ಅವರ ಪಾತ್ರವನ್ನು ಕಂಗನಾ ಮಾಡುತ್ತಿದ್ದು, ಪಾತ್ರಕ್ಕಾಗಿ ಒಂದಿಷ್ಟು ತೂಕ ಹೆಚ್ಚಿಸಿಕೊಂಡಿದ್ದರು. ಈಗ ಅದನ್ನು ಇಳಿಸುವುದರ ಜತೆಗೆ ಮೊದಲಿನ ಸೈಜ್​ಗೆ ಹೋಗಬೇಕಾಗಿದೆ ಎಂದು ಕಂಗನಾ ಇತ್ತೀಚೆಗಷ್ಟೇ ಹೇಳಿಕೊಂಡಿದ್ದಾರೆ.

    VIDEO| ಜೂ.ಚಿರು ಸ್ವಾಗತಕ್ಕೆ ಸರ್ಜಾ ಫ್ಯಾಮಿಲಿಯಿಂದ ಸ್ಪೆಷಲ್​ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts