More

    ಕೊನೆಯುಸಿರು ಇರೋವರೆಗೂ ರಾಜಕೀಯ ಬಿಡಲ್ಲ ಎಂದ ಕಮಲ್​ ಹಾಸನ್​

    ಚೆನ್ನೈ: ಮಕ್ಕಳ್​ ನಿಧಿ ಮಯ್ಯಮ್​ ಎಂಬ ಪಕ್ಷವನ್ನು ಸ್ಥಾಪಿಸಿ, ಇತ್ತೀಚೆಗಷ್ಟೇ ತಮಿಳು ನಾಡು ಅಸೆಂಬ್ಲಿ ಚುನಾವಣೆಗಳನ್ನು ಸ್ಪರ್ಧಿಸಿದ್ದ ಹಿರಿಯ ನಟ-ನಿರ್ದೇಶಕ ಕಮಲ್​ ಹಾಸನ್​ ತಾವು ಕೊನೆಯುಸಿರು ಇರುವವರೆಗೂ ರಾಜಕೀಯ ಬಿಡುವುದಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ‘ಅಮೃತಮತಿ’ಗೆ ಚಿತ್ರಕ್ಕೆ ಮತ್ತೆರೆಡು ಪ್ರಶಸ್ತಿಗಳು

    ಮೂರು ವರ್ಷಗಳ ಮುನ್ನ ರಾಜಕೀಯ ಪಕ್ಷ ಸ್ಥಾಪಿಸಿದ್ದ ಕಮಲ್​ ಹಾಸನ್​, ಅದರ ಮೂಲಕ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಈ ಬಾರಿಯ ಚುನಾವಣೆಗಳಲ್ಲೂ ಅವರು ಸ್ಪರ್ಧಿಸಿದ್ದರು. ಅವರೂ ಸೇರಿದಂತೆ, ಅವರ ಪಕ್ಷದ ಎಲ್ಲರೂ ಸೋತು ಹೋಗಿದ್ದರು. ಚುನಾವಣೆಗಳಲ್ಲಿ ಪಕ್ಷ ಹೀನಾಯ ಸೋಲು ಕಾಣುತ್ತಿದ್ದಂತೆಯೇ, ಹಲವು ಮುಖಂಡರು ಪಕ್ಷವನ್ನು ಬಿಟ್ಟು ಹೋಗಿದ್ದರು. ಅಷ್ಟೇ ಅಲ್ಲ, ಕಮಲ್​ ಹಾಸನ್​ ಹೆಚ್ಚು ದಿನಗಳ ಕಾಲ ರಾಜಕೀಯದಲ್ಲಿ ಇರುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಸದ್ಯದಲ್ಲೇ ಅವರು ಪಕ್ಷವನ್ನು ವಿಸರ್ಜಿಸಿ, ಚಿತ್ರರಂಗಕ್ಕೆ ವಾಪಸ್ಸು ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.

    ಈ ಕುರಿತು ಮಾತನಾಡಿರುವ ಕಮಲ್​ ಹಾಸನ್​, ‘ನಾನು ಚುನಾವಣೆಗಳಲ್ಲಿ ಸೋತಿರಬಹುದು. ಆದರೆ, ಅದು ದೊಡ್ಡ ಹಿನ್ನಡೆಯೇನಲ್ಲ. ನಾನು ರಾಜಕೀಯದಲ್ಲೇ ಮುಂದುವರೆಯುತ್ತೇನೆ ಮತ್ತು ಯಾವ ಕಾರಣಕ್ಕೂ ಪಕ್ಷವನ್ನು ವಿಸರ್ಜಿಸುವುದಿಲ್ಲ. ಪಕ್ಷವನ್ನು ಬಿಟ್ಟು ಹೋದವರು ನನ್ನಿಂದ ಬಿಟ್ಟು ಹೋಗಲಿಲ್ಲ. ಅವರು ಬಹಳಷ್ಟು ನಿರೀಕ್ಷಿಸಿ ಬಂದಿದ್ದರು. ಅವರಿಗೆ ನನ್ನ ಸ್ಟೈಲ್​ ಇಷ್ಟವಾಗಲಿಲ್ಲ. ಬಿಟ್ಟು ಹೋದ ಕೆಲವರು ವಾಪಸ್ಸು ಬರಬಹುದು. ಆದರೆ, ಯಾವುದೇ ಕಾರಣಕ್ಕೂ ಅವರನ್ನು ಸೇರಿಸಿಕೊಳ್ಳುವುದಿಲ್ಲ’ ಎಂದು ಕಮಲ್​ ಹೇಳಿದ್ದಾರೆ.

    ಇದನ್ನೂ ಓದಿ: ಇಂದು ಅನುಪಮ್​ ಖೇರ್​ ಪಾಲಿಗೆ ವಿಶೇಷ ದಿನ … ಯಾಕೆ?

    ಕೊನೆಯುಸಿರು ಇರುವವರೆಗೂ ರಾಜಕೀಯ ಬಿಡುವುದಿಲ್ಲ ಎಂದಿರುವ ಕಮಲ್​, ಮುಂದಿನ ದಿನಗಳಲ್ಲಿ ಪಕ್ಷವನ್ನು ಪುನರುಜ್ಜೀವನಗೊಳಿಸಿ, ಮತ್ತೊಮ್ಮೆ ಜನರ ಎದುರು ಬರುವುದಾಗಿ ಹೇಳಿದ್ದಾರೆ.

    ಟ್ವಿಟರ್​ನಲ್ಲಿ ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್; ಸ್ಯಾಂಡಲ್​ವುಡ್​​ನಲ್ಲಿ ಗರಿಷ್ಠ ಫಾಲೋವರ್ಸ್​ ಹೊಂದಿರುವ 2ನೇ ನಟ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts