More

    ಪ್ರಿಯಕರನ ಮರ್ಮಾಂಗ ಕತ್ತರಿಸಿ ಟಾಯ್ಲೆಟ್​ ಕಮೋಡ್​ನಲ್ಲಿ ಬೀಸಾಡಿ ಪೊಲೀಸರಿಗೆ ಶರಣಾದ ಪ್ರೇಯಸಿ!

    ಬೀಜಿಂಗ್​: ಪ್ರಿಯಕರ ಮೊಸ ಮಾಡುತ್ತಿದ್ದಾನೆಂದು ತಿಳಿದ ಪ್ರೇಯಸಿ ಪ್ರಿಯಕರ ಮಲಗಿರುವಾಗ ಆತನ ಮರ್ಮಾಂಗವನ್ನು ಕತ್ತರಿಸಿ ಟಾಯ್ಲೆಟ್​ ಕಮೋಡ್​ನಲ್ಲಿ ಹಾಕಿ ನೀರು ಹರಿಸಿರುವ ಘಟನೆ ಚೀನಾದ ತೈವಾನ್​ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

    ಸಂತ್ರಸ್ತನನ್ನು ಹೌಂಗ್​ ಎಂಬ ಆತನ ಕೊನೆಯ ಹೆಸರಿನಿಂದ ಗುರುತಿಸಲಾಗಿದೆ. ಆತ ಹೇಳಿರುವಂತೆ ನೋವಿನಿಂದ ಎಚ್ಚರಗೊಂಡಾಗ ಮರ್ಮಾಂಗ ತುಂಡಾಗಿತ್ತು ಎಂದಿದ್ದಾನೆ.

    52 ವರ್ಷದ ಸಂತ್ರಸ್ತ ತೈವಾನ್​ನ ಚಾಂಘುವಾ ಕೌಂಟಿಯ ಕ್ಸಿಹು ಟೌನ್‌ಶಿಪ್​ನ ನಿವಾಸಿ. ಚಿಕನ್​, ನೂಡಲ್ಸ್​ ಅಂತಾ ಚೆನ್ನಾಗಿ ತಿಂದು ಗಾಢ ನಿದ್ರೆಗೆ ಜಾರಿದ್ದ. ಬಳಿಕ ತೀವ್ರ ರಕ್ತಸ್ರಾವದ ನೋವಿನಿಂದ ಎಚ್ಚರಗೊಂಡಾಗ ಆತನ ಮರ್ಮಾಂಗವನ್ನು ಕತ್ತರಿಸಲಾಗಿತ್ತು ಎಂದು ತಿಳಿದುಬಂದಿದೆ.

    ಇದನ್ನೂ ಓದಿರಿ: ತಿಂಗಳ ಹಿಂದೆ ಮದುವೆಯಾಗಿದ್ದವಳು ಅಪಘಾತಕ್ಕೆ ಬಲಿ! ಗಂಡನ ಸ್ಥಿತಿ ಗಂಭೀರ

    ಗರ್ಲ್​ಫ್ರೆಂಡ್​ ಫುಂಗ್​ (40) ಅಡುಗೆ ಮನೆಯಲ್ಲಿ ಕತ್ತರಿಗಳ ಸಹಾಯದಿಂದ ಪ್ರಿಯಕರ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ಇದಾದ ಬಳಿಕ ಲೈಂಗಿಕ ಅಂಗವನ್ನು ಟಾಯ್ಲೆಟ್​ ಕಮೋಡ್​ನಲ್ಲಿ ಹಾಕಿ ನೀಡರು ಬಿಟ್ಟಿದ್ದಾಳೆ. ನಂತರ ತಾನೇ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾಳೆ. ಅವಳು ಹೇಳಿದ್ದನ್ನು ಕೇಳಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾಗಿರುವ ಕತ್ತರಿಸಿದ ಮರ್ಮಾಂಗಕ್ಕಾಗಿ ಹುಡುಕಾಡುತ್ತಿದ್ದಾರೆ.

    ಸಂತ್ರಸ್ತನನ್ನು ಆಂಬುಲೆನ್ಸ್​ ಸಹಾಯದಿಂದ ಆಸ್ಪತ್ರಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಮರ್ಮಾಂಗದ 1.5 ಸೆಂಟಿ ಮೀಟರ್​ ಭಾಗವನ್ನು ಪ್ರೇಯಸಿ ಕತ್ತರಿಸಿದ್ದಾಳೆ. ಆದರೆ, ಅವನ ಸ್ಕ್ರೋಟಮ್ ಮತ್ತು ವೃಷಣಗಳು ಇನ್ನೂ ಹಾಗೇ ಇವೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೆ, ಇನ್ಮುಂದೆ ಲೈಂಗಿಕ ಕ್ರಿಯೆ ನಡೆಸುವುದು ಕಷ್ಟಸಾಧ್ಯ ಎಂದು ಹೇಳಿದ್ದಾರೆ. ಹೀಗಾಗಿ ಕೃತಕ ಮರ್ಮಾಂಗವನ್ನು ಅಳವಡಿಸುವುದೊಂದೇ ದಾರಿ ಎಂದಿದ್ದಾರೆ.

    ಸಂತ್ರಸ್ತನಿಗೆ ಮತ್ತಷ್ಟು ಸರ್ಜರಿಯ ಜತೆಗೆ ಆಪ್ತ ಸಮಾಲೋಚನೆಯನ್ನು ಕೊಡಿಸಬೇಕಾಗಿದೆ. ಆರೋಪಿ ಪ್ರೇಯಿಸಿ ಫುಂಗ್​ ವಿಯೆಟ್ನಾಂ ಮೂಲದವಳು. ತೈವಾನ್​ ಮೂಲದ ವ್ಯಕ್ತಿಯನ್ನು ಮದುವೆಯಾದ ಬಳಿಕ ಅಲ್ಲಿನ ನಾಗರಿಕತ್ವ ಪಡೆದುಕೊಂಡಿದ್ದಳು. ಇದಾದ ಬಳಿಕ ಪತಿಯಿಂದ ಡಿವೋರ್ಸ್​ ಪಡೆದುಕೊಂಡಿದ್ದಳು. ಬಳಿಕ ಹೌಂಗ್​ ಪರಿಚಯವಾಗಿತ್ತು. ಆದರೆ, ಕಳೆದ ಹತ್ತು ತಿಂಗಳಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತಿತ್ತೆಂದು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿರಿ: ‘ಆ ದಿನ’ ಮೂರ್ನಾಲ್ಕು ಆ್ಯಂಗಲ್​ಗಳಲ್ಲಿ ವಿಡಿಯೋ ರೆಕಾರ್ಡಿಂಗ್​ ಆಗಿದ್ಯಲ್ಲಾ? ಯಾರು ಮಾಡಿದ್ರು?

    ಸದ್ಯ ಫುಂಗ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    2 ದಿನ ಜೀವಂತ ಸಮಾಧಿಯಾದವನ ರೋಚಕ ವಿಡಿಯೋ ಇದು: ಸಾವಿಗೂ ಸೆಡ್ಡು ಹೊಡೆದ ಯೂಟ್ಯೂಬರ್​!

    ಸ್ವಲ್ಪ ಉಸಿರು ಬಿಡುವಂತಾದ ಯುವರತ್ನ; ನಿರ್ಮಾಪಕರು, ಚಿತ್ರಮಂದಿರ ಮಾಲೀಕರಿಗೆ 4 ದಿನ ಕೊಂಚ ನಿರಾಳ!

    ಪರೀಕ್ಷೆ ಮುಂದೂಡುವಂತೆ ಬೆದರಿಕೆ; ಆನ್​ಲೈನ್​ ಕ್ಲಾಸಿನಲ್ಲೇ ಬಂತು ಬೆತ್ತಲೆ ಫೋಟೋಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts