ಪರೀಕ್ಷೆ ಮುಂದೂಡುವಂತೆ ಬೆದರಿಕೆ; ಆನ್​ಲೈನ್​ ಕ್ಲಾಸಿನಲ್ಲೇ ಬಂತು ಬೆತ್ತಲೆ ಫೋಟೋಗಳು!

ಅಹಮದಾಬಾದ್​: ಆನ್​ಲೈನ್​ ತರಗತಿಗಳು ಆರಂಭವಾದಾಗಿನಿಂದ ಸೈಬರ್​ ಕ್ರೈಂಗಳ ಸಂಖ್ಯೆಯೂ ಹೆಚ್ಚಾಗಿದೆ. ಅದೇ ರೀತಿ ಪರೀಕ್ಷೆಯನ್ನು ಮುಂದೂಡಲು ಬೆದರಿಕೆ ಹಾಕಿದ ಹ್ಯಾಕರ್​ ಒಬ್ಬ, ಅದಕ್ಕೆ ಕಾಲೇಜಿನವರು ಒಪ್ಪದಿದ್ದಾಗ ಆನ್​ಲೈನ್​ ತರಗತಿಯಲ್ಲಿ ಬೆತ್ತಲೆ ಫೋಟೋಗಳನ್ನು ಬಿಟ್ಟಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ. ಬುಧವಾರದಂದು 12ನೇ ತರಗತಿ ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಗತಿ ನಡೆಸಲಾಗುತ್ತಿತ್ತು. ಈ ವೇಳೆ ಯಾವುದೋ ಅಪರಿಚಿತ ವ್ಯಕ್ತಿಯೊಬ್ಬ ಜೂಮ್​ ತರಗತಿಗೆ ಜಾಯ್ನ್​​ ಆಗಿದ್ದಾನೆ. ವಿಡಿಯೋ ಆನ್ ಮಾಡಿಕೊಳ್ಳದೆಯೇ, ಬೆತ್ತಲೆ ಫೋಟೋಗಳಿದ್ದ ವೆಬ್​ಸೈಟ್​ ಲಿಂಕ್​ಗಳನ್ನು ಚಾಟ್​ನಲ್ಲಿ ಕಳುಹಿಸಲಾರಂಭಿಸಿದ್ದಾನೆ. ಅದನ್ನು ಕಂಡೊಡನೆ ಶಿಕ್ಷಕರು … Continue reading ಪರೀಕ್ಷೆ ಮುಂದೂಡುವಂತೆ ಬೆದರಿಕೆ; ಆನ್​ಲೈನ್​ ಕ್ಲಾಸಿನಲ್ಲೇ ಬಂತು ಬೆತ್ತಲೆ ಫೋಟೋಗಳು!