More

    ಪರೀಕ್ಷೆ ಮುಂದೂಡುವಂತೆ ಬೆದರಿಕೆ; ಆನ್​ಲೈನ್​ ಕ್ಲಾಸಿನಲ್ಲೇ ಬಂತು ಬೆತ್ತಲೆ ಫೋಟೋಗಳು!

    ಅಹಮದಾಬಾದ್​: ಆನ್​ಲೈನ್​ ತರಗತಿಗಳು ಆರಂಭವಾದಾಗಿನಿಂದ ಸೈಬರ್​ ಕ್ರೈಂಗಳ ಸಂಖ್ಯೆಯೂ ಹೆಚ್ಚಾಗಿದೆ. ಅದೇ ರೀತಿ ಪರೀಕ್ಷೆಯನ್ನು ಮುಂದೂಡಲು ಬೆದರಿಕೆ ಹಾಕಿದ ಹ್ಯಾಕರ್​ ಒಬ್ಬ, ಅದಕ್ಕೆ ಕಾಲೇಜಿನವರು ಒಪ್ಪದಿದ್ದಾಗ ಆನ್​ಲೈನ್​ ತರಗತಿಯಲ್ಲಿ ಬೆತ್ತಲೆ ಫೋಟೋಗಳನ್ನು ಬಿಟ್ಟಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ.

    ಬುಧವಾರದಂದು 12ನೇ ತರಗತಿ ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಗತಿ ನಡೆಸಲಾಗುತ್ತಿತ್ತು. ಈ ವೇಳೆ ಯಾವುದೋ ಅಪರಿಚಿತ ವ್ಯಕ್ತಿಯೊಬ್ಬ ಜೂಮ್​ ತರಗತಿಗೆ ಜಾಯ್ನ್​​ ಆಗಿದ್ದಾನೆ. ವಿಡಿಯೋ ಆನ್ ಮಾಡಿಕೊಳ್ಳದೆಯೇ, ಬೆತ್ತಲೆ ಫೋಟೋಗಳಿದ್ದ ವೆಬ್​ಸೈಟ್​ ಲಿಂಕ್​ಗಳನ್ನು ಚಾಟ್​ನಲ್ಲಿ ಕಳುಹಿಸಲಾರಂಭಿಸಿದ್ದಾನೆ. ಅದನ್ನು ಕಂಡೊಡನೆ ಶಿಕ್ಷಕರು ತರಗತಿಯನ್ನು ಮುಗಿಸಿದ್ದಾರೆ. ತಕ್ಷಣ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

    ಈ ಹಿಂದೆ ಪರೀಕ್ಷಾ ದಿನಾಂಕವನ್ನು ಮುಂದೂಡುವಂತೆ ಹ್ಯಾಕರ್​ ಒಬ್ಬನಿಂದ ಬೆದರಿಕೆ ಬಂದಿತ್ತಂತೆ. ಈ ವಿಚಾರವಾಗಿ ಕಾಲೇಜು ಆಡಳಿತ ಪೊಲೀಸ್​ ಠಾಣೆಯ ಮೆಟ್ಟಿಲೇರಿತ್ತು. ಆದರೆ ಸೈಬರ್​ ಕ್ರೈಂ ಪೊಲೀಸರು ಹ್ಯಾಕರ್​ನನ್ನು ಹುಡುಕುವಲ್ಲಿ ವಿಫಲವಾಗಿದ್ದರು. ಇದೀಗ ಅದೇ ಹ್ಯಾಕರ್​ನಿಂದ ಈ ಕೃತ್ಯವಾಗಿರುವ ಅನುಮಾನವನ್ನು ಕಾಲೇಜು ಆಡಳಿತ ವ್ಯಕ್ತಪಡಿಸಿದೆ. (ಏಜೆನ್ಸೀಸ್​)

    ಮೂರು ಜನನಾಂಗದೊಂದಿಗೆ ಜನಿಸಿದ ಮಗು! ವಿಶ್ವದಲ್ಲೇ ಮೊದಲೆಂದ ವೈದ್ಯರು

    ಮದುವೆ ಉಡುಗೆಯಲ್ಲೇ ಗಿನ್ನೆಸ್​ ರೆಕಾರ್ಡ್​! ಆಕೆ ಧರಿಸಿದ್ದು 7 ಕಿಮೀ ಉದ್ದದ ಗೌನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts