More

    ಸೌಹಾರ್ದ ಪಂದ್ಯದಲ್ಲಿ ಗಂಗೂಲಿ ತಂಡವನ್ನು ಮಣಿಸಿದ ಜಯ್ ಷಾ ಇಲೆವೆನ್

    ಅಹಮದಾಬಾದ್: ಬಿಸಿಸಿಐ ವಾರ್ಷಿಕ ಮಹಾಸಭೆಗೆ ಪೂರ್ವಭಾವಿಯಾಗಿ ಬುಧವಾರ ನೂತನ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಅಧ್ಯಕ್ಷ ಸೌರವ್ ಗಂಗೂಲಿ ಸಾರಥ್ಯದ ತಂಡವನ್ನು ಕಾರ್ಯದರ್ಶಿ ಜಯ್ ಷಾ ನೇತೃತ್ವದ ತಂಡ 28 ರನ್‌ಗಳಿಂದ ಮಣಿಸಿತು.

    ಇದನ್ನೂ ಓದಿ: ಪಿತೃತ್ವ ರಜೆ ವಿಚಾರದಲ್ಲಿ ಕೊಹ್ಲಿ-ನಟರಾಜನ್ ನಡುವೆ ಬಿಸಿಸಿಐ ತಾರತಮ್ಯ, ಗಾವಸ್ಕರ್ ಆರೋಪ

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದ ಕಾರ್ಯದರ್ಶಿ ಇಲೆವೆನ್ ತಂಡ ನಿಗದಿತ 12 ಓವರ್‌ಗಳಲ್ಲಿ 3 ವಿಕೆಟ್‌ಗೆ 128 ರನ್ ಗಳಿಸಿತು. ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿರುವ ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ್ 22 ಎಸೆತಗಳಲ್ಲಿ 37 ರನ್ ಬಾರಿಸಿದರು. ಸೌರಾಷ್ಟ್ರದ ಮಾಜಿ ಕ್ರಿಕೆಟಿಗ ಜಯ್‌ದೇವ್ ಷಾ ಅಜೇಯ 38 ರನ್ ಬಾರಿಸಿದರು. ಬಿಸಿಸಿಐ ಮಾಜಿ ಖಜಾಂಚಿ ಅನಿರುದ್ಧ ಚೌಧರಿ ಅಜೇಯ 10 ರನ್ ಗಳಿಸಿದರು. ಗಂಗೂಲಿ 26 ರನ್‌ಗೆ 1 ವಿಕೆಟ್ ಕಬಳಿಸಿದರು. ಪ್ರತಿಯಾಗಿ ಅಧ್ಯಕ್ಷರ ಇಲೆವೆನ್ 100 ರನ್ ಗಳಿಸಲಷ್ಟೇ ಶಕ್ತವಾಯಿತು. ಗಂಗೂಲಿ ಅವರ 53 ರನ್‌ಗಳ ಹೋರಾಟ ವ್ಯರ್ಥವಾಯಿತು. ಜಯ್ ಷಾ 39 ರನ್‌ಗೆ 2 ವಿಕೆಟ್ ಕಬಳಿಸಿ ಮಿಂಚಿದರು. ಗಂಗೂಲಿ ಕ್ಯಾಚ್ ಡ್ರಾಪ್ ಆಗದಿದ್ದರೆ ಜಯ್ ಷಾಗೆ 3ನೇ ವಿಕೆಟ್ ಕೂಡ ಒಲಿಯುತ್ತಿತ್ತು.

    1.10 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯ ಇದಾಗಿದೆ. ಉಭಯ ತಂಡಗಳ ಆಟಗಾರರು 1985ರ ವಿಶ್ವ ಸರಣಿ ಮತ್ತು 1992ರ ವಿಶ್ವಕಪ್‌ನಲ್ಲಿ ಭಾರತ ತಂಡ ಧರಿಸಿದ್ದ ಜೆರ್ಸಿಯ ರೆಟ್ರೋ ಲುಕ್‌ನೊಂದಿಗೆ ಆಡಿದರು.

    PHOTO | ಕ್ರಿಕೆಟಿಗ ಯಜುವೇಂದ್ರ ಚಾಹಲ್ ವಿವಾಹ

    ಕರೊನಾವನ್ನು ಮಣಿಸಿದ ಸೈನಾ ನೆಹ್ವಾಲ್​-ಕಶ್ಯಪ್ ದಂಪತಿ

    ಮಗುವಿನ ನಿರೀಕ್ಷೆಯಲ್ಲಿ ತವರಿಗೆ ಮರಳಿದ ವಿರಾಟ್ ಕೊಹ್ಲಿ

    ಕ್ರಿಕೆಟ್ V/s ಪಿತೃತ್ವ ರಜೆ; ಕ್ರಿಕೆಟಿಗರ ಪಿತೃತ್ವ ರಜೆ ಹೊಸದಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts