More

    ಹಲಸಿನ ಹಣ್ಣಷ್ಟೇ ಅಲ್ಲ, ಬೀಜ ಸೇವನೆಯಿಂದಲೂ ಇದೆ ಹಲವಾರು ಲಾಭ..!

    ಬೆಂಗಳೂರು: ಹಲಸಿನ ಬೀಜಗಳು ಫೈಬರ್, ಪ್ರೊಟೀನ್, ವಿಟಮಿನ್ ಎ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಸೇರಿದಂತೆ ಹಲವಾರು ಅಗತ್ಯ ಪೋಷಕಾಂಶಗಳ ಒಳಗೊಂಡಿದ್ದು, ಹಲವು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತಿದ್ದು ಇವುಗಳ ಪ್ರಯೋಜನ ಇಂತಿವೆ:

    ಹಲಸಿನ ಬೀಜಗಳಲ್ಲಿನ ಫೈಬರ್​​ನ್ನು ಹೊಂದಿದ್ದು, ಇದು ಜೀರ್ಣಕ್ರಿಯೆ ಉತ್ತೇಜಿಸಲು ಮತ್ತು ನಿಯಮಿತ ಕರುಳಿನ ಚಲನೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಈ ಬೀಜಗಳು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಹಲಸಿನ ಬೀಜದಲ್ಲಿ ಪೊಟ್ಯಾಸಿಯಮ್​​ ಇದ್ದು, ರಕ್ತನಾಳಗಳಿಗೆ ವಿಶ್ರಾಂತಿ ನೀಡಿ ರಕ್ತದೊತ್ತಡದವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: VIDEO | ಚಲಿಸುತ್ತಿದ್ದ ರೈಲಿನಲ್ಲಿ ಏಕಾಏಕಿ ಬೆಂಕಿ, ಬೋಗಿಯಿಂದ ಜಿಗಿದ ಪ್ರಯಾಣಿಕರು

    ಆರೋಗ್ಯಕರ ಮೂಳೆಗಳಿಗೆ ಕ್ಯಾಲ್ಸಿಯಂ ಹೊರತುಪಡಿಸಿ ನಿಮಗೆ ಹಲವಾರು ಇತರ ಪೋಷಕಾಂಶಗಳು ಬೇಕಾಗುತ್ತವೆ. ಅವುಗಳಲ್ಲಿ ಒಂದು ಮೆಗ್ನೀಸಿಯಮ್. ಹಲಸಿನ ಬೀಜಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ, ಇದು ಕ್ಯಾಲ್ಸಿಯಂ ಹೀರಿಕೊಳ್ಳಲು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

    ಹಲಸು ಬೀಜಗಳು ತಮ್ಮ ಕಾರ್ಬೋಹೈಡ್ರೇಟ್ ಅಂಶದಿಂದಾಗಿ ಶಕ್ತಿಯ ಉತ್ತಮ ಮೂಲವಾಗಿದ್ದು, ಅವು ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳನ್ನು ಒಳಗೊಂಡಿರುತ್ತವೆ, ಇದು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಮತ್ತು ಆರೋಗ್ಯಕರ ಚಯಾಪಚಯವನ್ನು ಬೆಂಬಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

    ರಕ್ತಹೀನತೆಯು ವಿಶೇಷವಾಗಿ ಮಹಿಳೆಯರು ಎದುರಿಸುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಹಲಸಿನ ಬೀಜಗಳು ಕಬ್ಬಿಣದ ಉತ್ತಮ ಮೂಲವಾಗಿದ್ದು ಅದು ಆರೋಗ್ಯಕರ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಹಲಸಿನ ಬೀಜಗಳಲ್ಲಿ ಪೋಷಕಾಂಶ-ವಿರೋಧಿ ಅಂಶವಿರುವ ಕಾರಣ ಅವುಗಳನ್ನು ಹಸಿಯಾಗಿ ಸೇವಿಸಬಾರದು ಎಂದು ಪೌಷ್ಟಿಕತಜ್ಞರು ಹೇಳಿದ್ದು, ಇದನ್ನು ಸೇವಿಸುವ ಮುಂಚೆ ವೈದ್ಯರ ಅಭಿಪ್ರಾಯಪಡೆಯುವುದು ಒಳ್ಳೆಯದು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts