More

    VIDEO | ಚಲಿಸುತ್ತಿದ್ದ ರೈಲಿನಲ್ಲಿ ಏಕಾಏಕಿ ಬೆಂಕಿ, ಬೋಗಿಯಿಂದ ಜಿಗಿದ ಪ್ರಯಾಣಿಕರು

    ಯಾದಾದ್ರಿ: ಇತ್ತೀಚಿಗೆ ರೈಲು ಸಂಬಂಧ ದುರಂತಗಳು ಹೆಚ್ಚಾಗುತ್ತಿದ್ದು, ಚಲಿಸುತ್ತಿದ್ದ ರೈಲಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ತೆಲಂಗಾಣದ ಯಾದಾದ್ರಿ ಬಳಿ ನಡೆದಿದೆ.

    ಇದನ್ನೂ ಓದಿ: ಇದು​ ಐದು ಗ್ಯಾರಂಟಿ ಮತ್ತು ಪ್ರಣಾಳಿಕೆ ಅಂಶಗಳನ್ನು ಒಳಗೊಂಡ ಬಜೆಟ್​​​: ಸಿಎಂ ಸಿದ್ದರಾಮಯ್ಯ

    ಹೌರಾ-ಸಿಕಂದರಾಬಾದ್ ಫಲಕ್ನುಮಾ ಎಕ್ಸ್‌ಪ್ರೆಸ್‌ನ S3, S4 ಮತ್ತು S5 ಕೋಚ್‌ಗಳು ಬೆಂಕಿಗಾಹುತಿಯಾಗಿದ್ದು, ಬೆಂಕಿ ಹೊತ್ತಿಕೊಂಡ ತಕ್ಷಣ ಹೌರಾ-ಸಿಕಂದರಾಬಾದ್ ರೈಲನ್ನು ಬೊಮ್ಮಾಯಿಳ್ಳಿ ಗ್ರಾಮದ ಬಳಿ ನಿಲ್ಲಿಸಲಾಯಿತು. ಜ್ವಾಲೆ ಹರಡುವ ಮುನ್ನವೇ ಬೋಗಿಯಿಂದ ಪ್ರಯಾಣಿಕರು ಜಿಗಿದಿದ್ದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

    ದಟ್ಟವಾದ ಕಪ್ಪು ಹೊಗೆ ಮೂರು ಬೋಗಿಗಳಲ್ಲಿ ಆವರಿಸಿದ್ದು, ಫಲಕ್ನುಮಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್‌ ಮೂಲಕ ಸ್ಥಳಾಂತರಿಸಲಾಗಿದೆ. ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ರೈಲ್ವೆ ಇಲಾಖೆಗಳು ಜತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಎಂದು ತೆಲಂಗಾಣ ಡಿಜಿಪಿ ಹೇಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts