More

    ರಾಜ್ಯ ಬಜೆಟ್​; ಅರಿವು ಸೇರಿದಂತೆ ವಿದ್ಯಾರ್ಥಿ ವೇತನ ಯೋಜನೆಗಳ ಮರು ಜಾರಿ

    ಬೆಂಗಳೂರು: ದಾಖಲೆಯ 14ನೇ ಬಾರಿ ಬಜೆಟ್​ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ನುಡಿದಂತೆ ನಡೆದಿದ್ದೇವೆ. ಮುಂದೆಯೂ ಈಗೆ ಇರುತ್ತೇವೆ ಎಂದು ನಾಡಿನ ಜನತೆಗೆ ಭರವಸೆಯನ್ನು ನೀಡಿದ್ದಾರೆ.

    ಹಿಂದಿನ ಬಿಜೆಪಿ ಸರ್ಕಾರವು ಅನುದಾನ ನೀಡದೆ ಸ್ಥಗಿತಗೊಂಡಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ಯೋಜನೆಗಳನ್ನು ಮರುಜಾರಿ ಮಾಡಲಾಗುವುದು. ಈ ಬಾರಿ ಇದಕ್ಕಾಗಿಯೇ ಬಜೆಟ್​ನಲ್ಲಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

    ಬಜೆಟ್​ಗಳೇ ಸಾಕ್ಷಿ

    ಹಿಂದುಳಿದ ವರ್ಗಗಳ ಬಗ್ಗೆ ನಮ್ಮ ಸರ್ಕಾರಕ್ಕೆ ಇರುವ ಕಾಳಜಿ ಹಾಗೂ ಬದ್ಧತೆಗೆ ನಾವು ಮಂಡಿಸಿರುವ ಬಜೆಟ್​ಗಳೇ ಸಾಕ್ಷಿ. ಸಾಮಾಜಿಕ ನ್ಯಾಯ ಎನ್ನುವುದು ರಾಜಕೀಯವಾಗಿ ಬಳಸಿಕೊಳ್ಳುವ ಅಸ್ತ್ರವಲ್ಲ. ದಮನಿತರಿಗೆ ನೀಡುವ ಪ್ರಾತಿನಿಧ್ಯ ಹಾಗೂ ಅವಕಾಶ ಎಂದುಕೊಂಡಿದ್ದೇವೆ.

    Siddaramaiah

    ಕಳೆದ ನಾಲ್ಕು ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ನೀಡದೆ, ಅನುಷ್ಠಾನಗೊಳಿಸದೆ ನಿರ್ಲಕ್ಷಿಸಿರುವುದು ಖಂಡನನೀಯ ನಡೆ ಎಂದು ಬಜೆಟ್​ ಭಾಷಣದ ವೇಳೆ ಪರೋಕ್ಷವಾಗಿ ಬಿಜೆಪಿಗೆ ಚಾಟಿ ಬೀಸಿದರು.

    ಇದನ್ನೂ ಓದಿ: ತಲೆಗೆ ಗುಂಡು ಹಾರಿಸಿಕೊಂಡು ಹಿರಿಯ ಐಪಿಎಸ್​ ಅಧಿಕಾರಿ ಮೃತ್ಯು

    ಯೋಜನೆಗಳ ಮರುಜಾರಿ

    ವೈದ್ಯಕೀಯ, ಇಂಜಿನಿಯರಿಂಗ್​ ಸೇರಿದಂತೆ ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಯೋಜನೆಯಡಿ ಶೇ.2 ರಷ್ಟು ಬಡ್ಡಿ ದರದಲ್ಲಿ ವಾರ್ಷಿಕ 1 ಲಕ್ಷ ರೂಪಾಯಿ ಸಾಲವನ್ನು ಕೊಡಲಾಗುತ್ತಿತ್ತು. ಈ ಯೋಜನೆಯಿಮದ 11,956 ವಿದ್ಯಾರ್ಥಿಗಳು ಲಾಭವನ್ನು ಪಡೆದಿದ್ದರು. ಆದರೆ, ಹಿಂದಿನ ಬಿಜೆಪಿ ಸರ್ಕಾರವು 2020-21ರ ಅವಧಿಯಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಿದ್ದು, ನಾವು ಮರುಜಾರಿ ಮಾಡುತ್ತೇವೆ.

    ಅರಿವು ಸೇರಿದಂತೆ ವಿದ್ಯಾಸಿರಿ, ವಿದ್ಯಾರ್ಥಿ ವೇತನ ಸೇರಿದಂತೆ ಸ್ಥಗಿತಗೊಳಿಸಲಾಗಿದ್ದ ನಮ್ಮ ಸರ್ಕಾರದ ಯೋಜನೆಗಳನ್ನು ಮರು ಜಾರಿ ಮಾಡಲಾಗುವುದು. ಹಿಂದುಳಿದ ವರ್ಗಗಳ ನಿಲಯಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ್​ ಕಿಟ್​ ನೀಡುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್​ ಭಾಷಣದಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts