More

    ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ದೇಶದ್ರೋಹ ಅಲ್ಲ: ಕರ್ನಾಟಕ ಹೈಕೋರ್ಟ್​

    ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ ನಿಂದನಾತ್ಮಕ ಪದ ಬಳಸಿರುವುದು ಅವಹೇಳನಕಾರಿ ಹಾಗೂ ಬೇಜವಾಬ್ದಾರಿತನದ ನಡೆ ಎಂದು ಹೇಳಿರುವ ಕರ್ನಾಟಕ ಹೈ ಕೋರ್ಟ್​ ಇದನ್ನು ದೇಶದ್ರೋಹ ಎನ್ನಲಾಗದು ಎಂದು ಹೇಳಿದೆ.

    ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂದು ಆರೋಪಿಸಿ ಖಾಸಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ನ್ಯಾಯಾಲಯ ವಜಾ ಮಾಡಿದೆ.

    ಯಾವುದೇ ಅಂಶಗಳು ಕಂಡು ಬಂದಿಲ್ಲ

    ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್​ನ ಕಲಬುರ್ಗಿ ವಿಭಾಗೀಯ ಪೀಠದ ಮುಖ್ಯ ನ್ಯಾಯಾಮೂರ್ತಿ ಹೇಮಂತ್​ ಚಂದನ್​ಗೌಡರ್​ ಅವರಿದ್ದ ಏಕಸದಸ್ಯ ಪೀಠವು ಬೀದರ್​ನ ಶಾಹೀನ್​ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಅಲ್ಲಾವುದ್ದೀನ್, ಅನ್ದುಲ್​ ಕಲೇಕ್​, ಮೊಹಮ್ಮದ್​ ಬಿಲಾಲ್​ ಇನಾಮ್​ದಾರ್​, ಮೊಹಮ್ಮದ್​ ಮೆಹ್ತಾಬ್​ ವಿರುದ್ಧ ದಾಖಲಾಗಿದ್ದ FIRಅನ್ನು ರದ್ದು ಮಾಡಿದೆ.

    kalaburgi HC

    ಇದನ್ನೂ ಓದಿ: ರಾಜ್ಯ ಬಜೆಟ್​; ಕ್ರಿಶ್ಚಿಯನ್​ ಅಭಿವೃದ್ಧಿ ನಿಗಮ ಸ್ಥಾಪನೆಗೆ 100 ಕೋಟಿ ರೂ. ಅನುದಾನ

    ವಾದ-ಪ್ರತಿವಾದವನ್ನು ಸುಧೀರ್ಘವಾಗಿ ಆಲಿಸಿದ ನ್ಯಾಯಾಧೀಶರು ಐಪಿಸಿ ಸೆಕ್ಷನ್​ 153(ಎ) ಅಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಯಾವುದೇ ಅಂಶಗಳು ಸಹ ಕಂಡು ಬಂದಿಲ್ಲ. ಪ್ರಧಾನಿ ಚಪ್ಪಳಿಯಲ್ಲಿ ಹೊಡೆಯಬೇಕು ಎಂದು ಹೇಳಿರುವುದು ಅವಹೇಳನಕಾರಿಯಲ್ಲ ಬೇಜವಾಬ್ದಾರಿತನದಿಂದ ಕೂಡಿರುವ ಹೇಳಿಕೆ.

    ಬೇಕಂತಲೇ ಮಾಡಿಸಿದ್ದಾರೆ ಎಂದು ಹೇಳಲಾಗದು

    ಸರ್ಕಾರ ಹೊಸದಾಗಿ ನೀತಿ ಅಥವಾ ಕಾಯ್ದೆಗಳನ್ನು ಜಾರಿಗೆ ತಂದಾಗ ಟೀಕಿಸುವುದು ಸಹಜ. ಆದರೆ, ಮಕ್ಕಳ ನಾಟಕದ ಮೂಲಕ ಹಿಂಸಾಚಾರ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕದಡುವ ಯಾವುದೇ ಆಂಶಗಳು ಕಂಡು ಬಂದಿಲ್ಲ. ಆರೋಪಿತರ ಪೈಕಿ ಒಬ್ಬರು ನಾಟಕದ ತುಣಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಆದ್ದರಿಂದ ಆರೋಪಿತರ ಸ್ಥಾನದಲ್ಲಿರುವವರು ಸರ್ಕಾರದ ವಿರುದ್ಧವಾಗಲಿ, ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ ನಿಟ್ಟಿನಲ್ಲಿ ನಾಟಕ ಮಾಡಿಸಿದ್ದಾರೆ ಎಂದು ಹೇಳಲಾಗದು. 124(ಎ), 505(2)ರ ಅಡಿಯಲ್ಲಿ FIR ದಾಖಲಿಸಿರುವುದನ್ನು ನ್ಯಾಯಾಲಯ ರದ್ದು ಪಡಿಸಲಾಗುತ್ತಿದೆ ಎಂದು ಕಲಬುರ್ಗಿ ವಿಭಾಗೀಯ ಪೀಠದ ಮುಖ್ಯ ನ್ಯಾಯಾಮೂರ್ತಿ ಹೇಮಂತ್​ ಚಂದನ್​ಗೌಡರ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts