More

    ಸುಶಾಂತ್ ಮೃತಪಟ್ಟು ಇಂದಿಗೆ ಏಳು ತಿಂಗಳಾದವು; ಎಲ್ಲಿಗೆ ಬಂತು ನಿಗೂಢ ಸಾವಿನ ತನಿಖೆ?

    ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ರೀತಿಯಲ್ಲಿ ಸತ್ತು ಏಳು ತಿಂಗಳಾದರೂ ಅವರ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 2020ರ ಆಗಸ್ಟ್​​ನಲ್ಲಿ ಪ್ರಕರಣದ ಸಮಗ್ರ ತನಿಖೆ ಆರಂಭಿಸಿದ ಸಿಬಿಐ ಈವರೆಗೂ ತನ್ನ ಅಂತಿಮ ತನಿಖಾ ವರದಿ ಸಲ್ಲಿಸಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಸಿಬಿಐ ತನಿಖೆಯು ಅಂತಿಮ ಘಟ್ಟದಲ್ಲಿದ್ದು ಇಷ್ಟರಲ್ಲೇ ಸತ್ಯ ಹೊರಬೀಳಲಿದೆ.

    2020ರ ಜೂನ್ 14ರಂದು ತನ್ನ ಮುಂಬೈನ ಬಾಂದ್ರಾ ನಿವಾಸದಲ್ಲಿ 34 ವರ್ಷದ ನಟ ಸುಶಾಂತರ ಶವ ಸಿಕ್ಕಿತ್ತು. ಪ್ರಕರಣದ ತನಿಖೆ ನಡೆಸಿದ ಮುಂಬೈ ಪೊಲೀಸರು ಆತ್ಮಹತ್ಯೆ ಎಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ, ನಟನ ತಂದೆ ಕೆ.ಕೆ.ಸಿಂಗ್ ಪಾಟ್ನಾ ಪೊಲೀಸರಿಗೆ ಆತನ ಗರ್ಲ್ ಫ್ರೆಂಡ್ ರಿಯಾ ಚರ್ಕಬೋರ್ತಿ, ಸಾಮುಯಲ್ ಮಿರಾಂಡಾ ಮತ್ತಿತರರ ವಿರುದ್ಧ ದೂರು ಸಲ್ಲಿಸಿದರು. ಆ ನಂತರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು.

    ಇದನ್ನೂ ಓದಿ: ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದಳು, ಇವತ್ತು ಬೆಳಗ್ಗೆ ಮನೆ ಪಕ್ಕದಲ್ಲೇ ಶವವಾಗಿದ್ದಳು!

    ಕಳೆದ ಡಿಸೆಂಬರ್​ನಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಸಿಬಿಐ ತನಿಖೆಯ ಸ್ಥಿತಿಯನ್ನು ಪ್ರಶ್ನಿಸಿದಾಗ, ಸಿಬಿಐ ತಾನು ಎಲ್ಲಾ ಅಂಶಗಳನ್ನು ಪರಿಗಣಿಸಿ ಆಮೂಲಾಗ್ರ ತನಿಖೆ ನಡೆಸುತ್ತಿರುವುದಾಗಿ ತಿಳಿಸಿ ಪ್ರತಿಕ್ರಿಯಿಸಿತ್ತು. ಸಿಬಿಐ ಸುಶಾಂತ್​ರ ಹಾಲಿ ಮತ್ತು ಮಾಜಿ ಕೆಲಸಗಾರರು, ಮುಖ್ಯ ಆರೋಪಿ ರಿಯಾ ಚಕ್ರಬೋರ್ತಿ ಮತ್ತು ಅವರ ಕುಟುಂಬದ ಸದಸ್ಯರನ್ನು ಪ್ರಶ್ನೆಗೊಳಪಡಿಸಿತ್ತು. ಸುಶಾಂತ್​ರ ಕುಟುಂಬ ಮತ್ತು ಸಂಬಂಧಿಗಳ ಹೇಳಿಕೆಗಳನ್ನು, ಸುಶಾಂತ್​ರ ವೈದ್ಯರ ಹೇಳಿಕೆಗಳನ್ನು ದಾಖಲಿಸಿತ್ತು.

    ಸಿಬಿಐ ಅಧಿಕಾರಿಗಳು ಅಲಿಗಡ, ಫರೀದಾಬಾದ್, ಹೈದರಾಬಾದ್, ಮುಂಬೈ, ಮುನೇಸರ್ ಮತ್ತು ಪಾಟ್ನ ಎಲ್ಲೆಡೆ ಸಾಕ್ಷ್ಯಗಳನ್ನು ಸಂಗ್ರಹಿಸಿ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಅತ್ಯಾಧುನಿಕ ಮೊಬೈಲ್ ಫೊರೆನ್ಸಿಕ್ ಯಂತ್ರ ಮತ್ತು ಸಾಫ್ಟ್​ವೇರ್ ಬಳಸಿ ಡಿಜಿಟಲ್ ಡಿವೈಸುಗಳ ಮಾಹಿತಿಯನ್ನೆಲ್ಲ ಸಂಗ್ರಹಿಸಿದ್ದರು.

    ಇದನ್ನೂ ಓದಿ: ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…

    ಸುಶಾಂತ್ ಸತ್ತುಬಿದ್ದಿದ್ದ ಬಾಂದ್ರಾ ಮನೆಗೆ ಹಿರಿಯ ಸಿಬಿಐ ಅಧಿಕಾರಿಗಳು ಮತ್ತು ದೆಹಲಿಯ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ನಿಜವಾಗಿ ನಡೆದದ್ದೇನೆಂದು ಪರಿಶೀಲಿಸಿದ್ದಾರಂತೆ. ಸುಶಾಂತ್ ಮರಣದ ನಂತರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗಿದ್ದ ಕೂಪರ್ ಆಸ್ಪತ್ರೆಯ ವೈದ್ಯರ ಹೇಳಿಕೆಗಳನ್ನೂ ಸಿಬಿಐ ಸಂಗ್ರಹಿಸಿದೆ. ಅಲ್ಲಿನ ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಮುಂಬೈ ಪೊಲೀಸರು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ತೀರ್ಮಾನಕ್ಕೆ ಬಂದು ಆಕ್ಸಿಡೆಂಟಲ್ ಡೆತ್ ರಿಪೋರ್ಟ್ ಸಲ್ಲಿಸಿದ್ದರು.

    ಈ ನಡುವೆ ಸುಶಾಂತರ ಮರಣೋತ್ತರ ಪರೀಕ್ಷೆ ಮತ್ತು ವಿಸೇರಾ ವರದಿಗಳನ್ನು ಮರುಪರೀಕ್ಷಿಸಿದ ಏಮ್ಸ್ ವೈದ್ಯರ ತಂಡದ ಡಾ.ಸುಧೀರ್ ಗುಪ್ತ, “ಸುಶಾಂತ್ ಸಾವು ಆತ್ಮಹತ್ಯೆಯ ಪ್ರಕರಣ. ಕೊಲೆಯ ಸಾಧ್ಯತೆ ಖಂಡಿತ ಇಲ್ಲ” ಎಂದು ಸಿಬಿಐಗೆ ವರದಿ ಸಲ್ಲಿಸಿದ್ದಾರೆ. ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಸಿಬಿಐ ತನ್ನ ವಿಚಾರಣೆಯನ್ನು ಯಾವಾಗ ಅಂತಿಮಗೊಳಿಸಿ ಸುಶಾಂತ್ ಸಾವಿನ ಅಸಲಿ ಕಾರಣವನ್ನು ಬಯಲು ಮಾಡುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

    ಇದು ಮಹಿಳೆಯರ ಮುಖಭಾವನೆಯನ್ನೇ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡುತ್ತದೆಯಂತೆ!

    ನೀವು ಈ ಆ್ಯಪ್​ ಬಳಸುತ್ತಿದ್ದರೆ ನಿಮ್ಮ ಮಾಹಿತಿ ಕಳವಾಗಿರುವ ಸಾಧ್ಯತೆ ಇದೆ; 19 ಲಕ್ಷ ಬಳಕೆದಾರರ ಡೇಟಾ ಕದ್ದ ಹ್ಯಾಕರ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts