More

    ನಾ ಹೇಡಿಯಲ್ಲ, ಆದರೆ ನನ್ನ ಕ್ಷಮಿಸಿ… ಐಟಿಐ ವಿದ್ಯಾರ್ಥಿಯ ಆತ್ಮಹತ್ಯೆ ಹಿಂದಿದೆ ದಾರುಣ ಕಥೆ

    ಲಖನೌ: ಮನುಷ್ಯನಿಗೆ ಮಾನಸಿಕ ನೆಮ್ಮದಿ ತುಂಬಾ ಮುಖ್ಯ. ಮಾನಸಿಕ ನೆಮ್ಮದಿ ಇಲ್ಲವಾದರೆ ಬದುಕುವುದು ಕಷ್ಟ ಸಾಧ್ಯ. ತನ್ನ ಸಂಬಂಧಿಯೊಬ್ಬರಿಂದ ಮಾನಸಿಕ ನೆಮ್ಮದಿ ಕಳೆದುಕೊಂಡ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಇದನ್ನೂ ಓದಿ: ಮೆದುಳಿನ ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಬಿಗ್​ ಬಾಸ್​ ನೋಡಿದ ರೋಗಿ; ಕಾರಣವೇನು ಗೊತ್ತಾ?

    ರಾಜ್ಯದ ಪ್ರತಾಪ್​ಗಢ ಸನಿಹದ ಹಳ್ಳಿಯೊಂದರ ಮೂಲದ ಐಟಿಐ ವಿದ್ಯಾರ್ಥಿ ಧಿರೇಂದ್ರ ಶರ್ಮಾ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಧಿರೇಂದ್ರ ಪ್ರತಾಪಗಢದಲ್ಲಿ ಐಟಿಐ ಓದುತ್ತಿದ್ದ. ಈ ವಾರಾಂತ್ಯಕ್ಕೆ ಆತ ತನ್ನ ಊರಿಗೆ ಬಂದಿದ್ದಾನೆ. ಆದರೆ ಈತನಿಗೆ ಸೋದರ ಮಾವ ಭೀಷಂ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರಂತೆ. ಅದರಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದ ಆತ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣವನ್ನು ಡೆತ್​ ನೋಟ್​ನಲ್ಲಿ ಬರೆದಿಟ್ಟು ಹೋಗಿದ್ದಾನೆ.

    ಇದನ್ನೂ ಓದಿ: ಬಟ್ಟೆ ಬದಲಿಸುವಾಗ ನಿರ್ಮಾಪಕರು​ ವ್ಯಾನಿಟಿ ವ್ಯಾನ್​ಗೇ ಬಂದು ಬಿಟ್ಟರು; ಖ್ಯಾತ ನಟಿಯ ಆರೋಪ

    ಅಪ್ಪಾ… ನಾನು ಹೇಡಿಯಲ್ಲ. ಆದರೆ ನನ್ನನ್ನು ಕ್ಷಮಿಸಿಬಿಡಿ. ನನಗೆ ಅವರು ಬ್ಲಾಕ್​ಮೇಲ್​ ಮಾಡುತ್ತಿದ್ದಾರೆ. ನನ್ನ ರೀತಿ ಯಾರೂ ಮಾಡಿಕೊಳ್ಳಬೇಡಿ. ಸ್ಸಾರಿ ಅಮ್ಮ….

    ನಾ ಹೇಡಿಯಲ್ಲ, ಆದರೆ ನನ್ನ ಕ್ಷಮಿಸಿ... ಐಟಿಐ ವಿದ್ಯಾರ್ಥಿಯ ಆತ್ಮಹತ್ಯೆ ಹಿಂದಿದೆ ದಾರುಣ ಕಥೆ
    ಇದು ಮೃತ ಧಿರೇಂದ್ರ ಬರೆದಿರುವ ಡೆತ್​ ನೋಟ್​ನ ಸಾರಾಂಶ. ಯಾವ ವಿಚಾರದಲ್ಲಿ ಆತನ ಮಾವ ಮಾನಸಿಕ ಹಿಂಸೆ ಕೊಡುತ್ತಿದ್ದರು ಎನ್ನುವ ವಿಚಾರ ಇನ್ನೂ ತಿಳಿದುಬಂದಿಲ್ಲ. ಪೊಲೀಸ್​ ತನಿಖೆಯ ನಂತರ ಇನ್ನಷ್ಟು ವಿಚಾರಗಳು ಹೊರಬರಬೇಕಿದೆ. (ಏಜೆನ್ಸೀಸ್​)

    ಲಾಕ್​ಡೌನ್​ ಬಗ್ಗೆ 8-10 ದಿನದಲ್ಲಿ ನಿರ್ಧಾರ; ಎಲ್ಲದಕ್ಕೂ ಸಿದ್ಧರಾಗಿರಿ

    ಪಾಕಿಸ್ತಾನದಲ್ಲಿ ತಳ್ಳದೆ ಬಸ್​ ಕೂಡ ಮುಂದೋಗಲ್ಲ; ಭಯಂಕರ ಟ್ರೋಲ್​ ಆಗುತ್ತಿದೆ ಈ ವಿಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts