ಶ್ರೀಹರಿಕೋಟ: ಲಾಕ್ಡೌನ್ ಆರಂಭವಾದಾಗಿನಿಂದ ಯಾವುದೇ ಉಪಗ್ರಹ ಮಾಡಿರದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಹೊಸ ಉಪಗ್ರಹವೊಂದನ್ನು ಉಡಾವಣೆ ಮಾಡಿದೆ. ಶನಿವಾರ ಮಧ್ಯಾಹ್ನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ 49 ಉಡಾವಣಾ ವಾಹನದಲ್ಲಿ ಇಒಎಸ್ -01 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಇದರ ಜತೆ ಒಂಬತ್ತು ಅಂತರರಾಷ್ಟ್ರೀಯ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಇದನ್ನೂ ಓದಿ: ಸಿಸಿಟಿವಿ ದೃಶ್ಯಾವಳಿ ಹೆಚ್ಚುವರಿ ಸಾಕ್ಷ್ಯವೇ ಹೊರತು ಅದೇ ಮುಖ್ಯವಲ್ಲ; ಹೈಕೋರ್ಟ್
ಇಒಎಸ್-01 ಭೂ ವೀಕ್ಷಣಾ ಉಪಗ್ರಹವಾಗಿದ್ದು, ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆಗೆ ಸಹಕರಿಸಲಿದೆ ಎಂದು ಇಸ್ರೋ ಹೇಳಿದೆ. ಮಧ್ಯಾಹ್ನ 3.02ಕ್ಕೆ ಸರಿಯಾಗಿ ಉಪಗ್ರಹ ಉಡಾವಣೆಯಾಗಿದೆ. (ಏಜೆನ್ಸೀಸ್)
ನಾದಿನಿಯೊಂದಿಗೆ ಜಗಳವಾಡಿ 4 ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ