More

    ಸಿಸಿಟಿವಿ ದೃಶ್ಯಾವಳಿ​ ಹೆಚ್ಚುವರಿ ಸಾಕ್ಷ್ಯವೇ ಹೊರತು ಅದೇ ಮುಖ್ಯವಲ್ಲ; ಹೈಕೋರ್ಟ್​

    ನವದೆಹಲಿ: ಎಷ್ಟೋ ಪ್ರಕರಣಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಅಪರಾಧವನ್ನು ಸಾಬೀತು ಪಡಿಸಲು, ಅಪರಾಧಿಗಳನ್ನು ಪತ್ತೆ ಹಚ್ಚಲು ನೆರವಾಗಿದೆ. ಹಾಗಂತ ಸಿಸಿಟಿವಿ ದೃಶ್ಯಾವಳಿ ಇರದಿದ್ದರೆ ಅಪರಾಧವೇ ನಡೆದಿಲ್ಲ ಎನ್ನಲಾಗದು. ಹೀಗೆಂದು ಪ್ರಕರಣವೊಂದರಲ್ಲಿ ಹೈಕೋರ್ಟ್​ ಹೇಳಿದೆ.

    ಪ್ರಕರಣವೊಂದರಲ್ಲಿ ಸಿಸಿಟಿವಿ ದೃಶ್ಯಾವಳಿ ಲಭ್ಯ ಇಲ್ಲದ್ದರ ಪ್ರಯೋಜನ ಪಡೆದು ಜಾಮೀನು ಪಡೆಯಲು ಆರೋಪಿಯೊಬ್ಬ ಯತ್ನಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್​ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ದೆಹಲಿ ಹೈಕೋರ್ಟ್​ನ ಹೆಚ್ಚುವರಿ ಸೆಷನ್ಸ್​ ನ್ಯಾಯಾಧೀಶ ಅಮಿತಾಭ್ ರಾವತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    2020ರ ಫೆಬ್ರವರಿ 24ರಂದು ಮೌಜ್​ಪುರ್ ಚೌಕ್​ನಲ್ಲಿ ಗಲಭೆಯಲ್ಲಿ ಪಾಲ್ಗೊಂಡಿದ್ದ ಆರೋಪದ ಮೇಲೆ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಮೇಲೆ ಮಾರ್ಚ್ 12ರಂದು ಸಲ್ಮಾನ್ ಎಂಬಾತನನ್ನು ಬಂಧಿಸಲಾಗಿತ್ತು. ಆದರೆ ಗಲಭೆ ನಡೆದ ಬಗ್ಗೆ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿಲ್ಲ ಎಂಬುದನ್ನೇ ಆಧಾರವಾಗಿಸಿ ಆರೋಪಿ ಜಾಮೀನು ಪಡೆಯಲು ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಮೇಲಿನಂತೆ ಅಭಿಪ್ರಾಯ ಪಟ್ಟ ಕೋರ್ಟ್​, ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts