More

    ಮಕ್ಕಳ ಕಬ್ಬಿಣಾಂಶ ಮಾತ್ರೆಗೂ ಕರೊನಾ ಕೊಳ್ಳಿ! : ಶಾಲೆ ಆರಂಭವಾಗುತ್ತಲೇ ಆರೋಗ್ಯ ತಪಾಸಣೆ

    ಬೆಂಗಳೂರು: ಕರೊನಾದಿಂದಾಗಿ ಅಂಗನವಾಡಿ ಹಾಗೂ ಶಾಲೆಗಳು ಪ್ರಾರಂಭವಾಗದೆ ಮಕ್ಕಳು ಕಬ್ಬಿಣಾಂಶ ಮಾತ್ರೆಗಳಿಂದ ವಂಚಿತರಾಗಿದ್ದಾರೆ. ಕೆಲ ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ತಿಳಿದುಬಂದಿದ್ದು, ಆರೋಗ್ಯ ಇಲಾಖೆ ಶಾಲೆ ಪುನರಾರಂಭವಾಗುತ್ತಲೇ ಎಲ್ಲ ಮಕ್ಕಳಿಗೂ ಆರೋಗ್ಯ ತಪಾಸಣೆ ನಡೆಸಲು ಸಜ್ಜಾಗಿದೆ.

    ಪ್ರತಿ ಸೋಮವಾರ ವಿತರಣೆ

    ಇನ್ನುಮುಂದೆ ವೀಕ್ಲೀ ಐರನ್ ಪೋಲಿಕ್ ಸಪ್ಲಿಮೆಂಟೇಷನ್ ಬ್ರೇಕ್ ಡೇ ಹೆಸರಿನಡಿ ಪ್ರತಿ ಸೋಮವಾರ ಮಧ್ಯಾಹ್ನ ಊಟದ ನಂತರ ಮಕ್ಕಳಿಗೆ ಕಬ್ಬಿಣಾಂಶದ ಮಾತ್ರಗಳನ್ನು ನೀಡಲಾಗುವುದು ಎಂದರು.

    ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ತಡೆಗಟ್ಟಲು ಆರೋಗ್ಯ ಇಲಾಖೆ ವತಿಯಿಂದ ಅಂಗನವಾಡಿ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿ ವಾರ ಕಬ್ಬಿಣಾಂಶದ ಮಾತ್ರೆಗಳನ್ನು ನೀಡಲಾಗುತ್ತಿತ್ತು. ಕರೊನಾ ಹಿನ್ನೆಲೆಯಲ್ಲಿ ಇದು ಸ್ಥಗಿತಗೊಂಡಿದೆ. ಸದ್ಯ 6 ವರ್ಷದೊಳಗಿನ ಮಕ್ಕಳನ್ನು ಸುರಕ್ಷಿತ ನಿಯಮ ಪಾಲಿಸುವ ಮೂಲಕ ಅಂಗನವಾಡಿಗೆ ಕರೆ ತಂದು ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಉಳಿದ ಮಕ್ಕಳಿಗೆ ಶಾಲೆ ಆರಂಭವಾಗುತ್ತಲೇ ‘4 ಡಿ’ (40 ಬಗೆಯ ಆರೋಗ್ಯ ಸಮಸ್ಯೆಗಳ ಕುರಿತು) ತಪಾಸಣೆ ನಡೆಸಲಾಗುವುದು ಎಂದು ಇಲಾಖೆಯ ರಾಷ್ಟ್ರೀಯ ಬಾಲ ಸುರಕ್ಷಾ ಯೋಜನೆ (ಶುಚಿ ಕಾರ್ಯಕ್ರಮ) ಜಂಟಿ ನಿರ್ದೇಶಕಿ ಡಾ.ವಿ.ವೀಣಾ ತಿಳಿಸಿದ್ದಾರೆ.

    ಇದನ್ನೂ ಓದಿ: ಹೃದಯ ಚೆನ್ನಾಗಿ ಕೆಲಸ ಮಾಡ್ಬೇಕು ಅಂದ್ರೆ ಬಾದಾಮಿ ತಿನ್ಬೇಕಂತೆ…

    ಮಾತ್ರೆಗಳ ಖರೀದಿಗೆ ಆದೇಶ: ರಾಜ್ಯದಲ್ಲಿ 10 ವರ್ಷದೊಳಗಿನ ಮಕ್ಕಳಿಗಾಗಿ 9,96,462 ಯೂನಿಟ್ ಹಾಗೂ 10-18 ವರ್ಷದ ಮಕ್ಕಳಿಗಾಗಿ 11,67,555 ಯುನಿಟ್ ಕಬ್ಬಿಣಾಂಶದ ಮಾತ್ರೆಗಳ ಖರೀದಿಗೆ ಈಗಾಗಲೆ ಆದೇಶ ನೀಡಲಾಗಿದ್ದು, ಔಷಧ ತಯಾರಕರು ಮಾತ್ರೆಗಳನ್ನು ತಯಾರಿಸಿ ನೀಡಲು ಎರಡು ತಿಂಗಳು ಬೇಕಾಗುತ್ತದೆ. ಅಷ್ಟರಲ್ಲಿ ಶಾಲೆಗಳು ಪುನರಾರಂಭವಾಗಲಿದ್ದು, ಮಕ್ಕಳಿಗೆ ಮೊದಲಿನಂತೆ ಮಾತ್ರೆಗಳನ್ನು ನೀಡಲಾಗುವುದು ಎಂದು ಹೇಳಿದರು.

    ಇದನ್ನೂ ಓದಿ: ಐಪಿಎಲ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಗಾಯಕ!

    ಸ್ಥಗಿತಗೊಂಡ ಶುಚಿ ಕಾರ್ಯಕ್ರಮ ಋತುಕಾಲದ ಸಮಯದಲ್ಲಿ ಶುಚಿತ್ವ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಶುಚಿತ್ವವಿಲ್ಲದ ಅಭ್ಯಾಸಗಳಿಂದ ಉಂಟಾಗುವ ಸೋಂಕುಗಳಿಂದ ಶಾಲೆಗೆ ಗೈರಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ 2014ರಲ್ಲಿ ಜಾರಿಗೆ ತಂದ ‘ಶುಚಿ’ ಕಾರ್ಯಕ್ರಮ ಸ್ಥಗಿತಗೊಂಡಿದ್ದು, ಇದರಿಂದ 18 ಲಕ್ಷ ಹದಿಹರೆಯದ ಹೆಣ್ಣು ಮಕ್ಕಳು ವಂಚಿತರಾಗಿದ್ದಾರೆ. ಈ ಯೋಜನೆಯಡಿ ಸರ್ಕಾರಿ, ಅನುದಾನಿತ ಹಾಗೂ ಸರ್ಕಾರಿ ವಸತಿ ಶಾಲೆಯ 6ರಿಂದ 10ನೇ ತರಗತಿ ವ್ಯಾಸಂಗ ಮಾಡುವ ಹಾಗೂ ಪದವಿಪೂರ್ವ ಕಾಲೇಜುಗಳು ಸೇರಿ 18 ಲಕ್ಷ ಹದಿಹರೆಯದ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಉಚಿತವಾಗಿ ಸ್ಯಾನಿಟರಿ ನ್ಯಾಪ್ಕೀನ್​ಗಳನ್ನು ಒದಗಿಸಲಾಗುತ್ತಿತ್ತು. ಇದಕ್ಕಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ 49 ಕೋಟಿ ರೂ. ಖರ್ಚು ಮಾಡುತ್ತಿತ್ತು. ಈ ಬಾರಿ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಕಾರ್ಯಕ್ರಮ ಸ್ಥಗಿತಗೊಂಡಿದೆ.

    ಇದನ್ನೂ ಓದಿ: VIDEO: ಸರ್ಫಿಂಗ್​ ಆಡಲು ಹೋಗಿದ್ದ ಕರೊನಾ ಸೋಂಕಿತಳನ್ನು ಬೆನ್ನಟ್ಟಿದ ಪೊಲೀಸರು; ಆಕೆ ಮಾಡಿದ್ದೇನು?

    ಜಂತುಹುಳು ನಿವಾರಣಾ ಸಪ್ತಾಹ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಜಂತುಹುಳು ಬಾಧೆ ನಿವಾರಿಸಲು ಆರೋಗ್ಯ ಇಲಾಖೆ ಸೆ.7ರಿಂದ 21ರವರೆಗೆ ಜಂತುಹುಳು ನಿವಾರಣಾ ಸಪ್ತಾಹ ಕಾರ್ಯಕ್ರಮದಡಿ 1ರಿಂದ 19 ವರ್ಷ ವಯಸ್ಸಿನ 2 ಕೋಟಿ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆಗಳನ್ನು ವಿತರಿಸುವ ಗುರಿ ಹೊಂದಿದೆ. ಕೋವಿಡ್​ನಿಂದ ಶಾಲೆಗಳು ತೆರೆಯದ ಕಾರಣ ಈ ಬಾರಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ತೆರಳಿ ಮಕ್ಕಳಿಗೆ ಜಂತುಹುಳು ಮಾತ್ರೆಗಳನ್ನು ವಿತರಿಸಲಾಗುತ್ತಿದೆ.

    ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ: ನ್ಯಾಯಮೂರ್ತಿ ವಿ.ಪಾರ್ಥಿಬನ್ ಐತಿಹಾಸಿಕ ಆಬ್ಸರ್ವೇಶನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts