More

    ಡೆಲ್ಟಾ ಆತಂಕ ಗಡಿಯಲ್ಲಿ ಬಿಗು ಕ್ರಮ

    ಕಾರವಾರ: ಕರೊನಾ ಎರಡನೇ ಅಲೆ ಬೆನ್ನಲ್ಲೇ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಆತಂಕವನ್ನುಂಟು ಮಾಡಿದೆ. ಈಗಾಗಲೇ ನೆರೆ ರಾಜ್ಯ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಈಗಾಗಲೇ ಸದ್ದು ಮಾಡಿರುವ ವೈರಸ್ ರಾಜ್ಯಕ್ಕೆ ಕಾಲಿಡದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
    ಗೋವಾ ಮತ್ತು ಕರ್ನಾಟಕ ರಾಜ್ಯಗಳ ನಡುವಿನ ಮಾಜಾಳಿ ಚೆಕ್ ಪೋಸ್ಟ್ ಬಳಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಗೋವಾದಿಂದ ಬರುವವರ ಮೇಲೆ ಜಿಲ್ಲಾಡಳಿತ ಹದ್ದಿನ ಕಣ್ಣಿಟ್ಟಿದೆ. ಗಡಿಯ ಒಳಗೆ ಪ್ರವೇಶಿಸುವ ಎಲ್ಲ ವಾಹನಗಳನ್ನು ಪೊಲೀಸರು ತಡೆದು ಅಗತ್ಯ ಮಾಹಿತಿ ಪಡೆಯುತ್ತಿದ್ದಾರೆ.
    ಕರ್ನಾಟಕದಿಂದ ಗೋವಾಕ್ಕೆ ತೆರಳುವ ಪ್ರಯಾಣಿಕರ ಮೇಲೂ ಅಲ್ಲಿನ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಗೋವಾದಲ್ಲಿ ಇನ್ನೂ ಲಾಕ್​ಡೌನ್ ಜಾರಿಯಲ್ಲಿದೆ. ಜತೆಗೆ ಡೆಲ್ಟಾ ಪ್ಲಸ್ ಕಾಣಿಸಿದ್ದರಿಂದ ಕರ್ನಾಟಕದಿಂದ ಗೋವಾ ತೆರಳುವ ಪ್ರತಿಯೊಬ್ಬರ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯವಾಗಿ ಪರಿಶೀಲಿಸುತ್ತಿದೆ. ಸರ್ಟಿಫಿಕೇಟ್ ಇಲ್ಲದಿದ್ದಲ್ಲಿ ಗಡಿಯಲ್ಲಿಯೇ ಆಂಟಿಜನ್ ಟೆಸ್ಟ್ ಮಾಡಿ, ನೆಗೆಟಿವ್ ಬಂದರೆ ಮಾತ್ರ ಗೋವಾಕ್ಕೆ ಪ್ರವೇಶ ನೀಡಲಾಗುತ್ತಿದೆ.
    ತಪಾಸಣೆ: ಪ್ರತಿನಿತ್ಯ ಗೋವಾದಿಂದ ಕರ್ನಾಟಕಕ್ಕೆ ನೂರಾರು ವಾಹನಗಳು ಬರುತ್ತವೆ. ಅಲ್ಲದೆ, ಗೋವಾದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ವಿದೇಶಗಳಿಂದ ಪ್ರಯಾಣಿಕರು ಬರುತ್ತಾರೆ. ಆದರೆ, ವಿಮಾನದಲ್ಲಿ ಬರುವ ಬಹುತೇಕ ಜನರು ನೌಕಾನೆಲೆಯ ಉದ್ಯೋಗಿಗಳು. ಇವರ ವಿಮಾನಯಾನದ ಟಿಕೆಟ್ ನೋಡಿ ಮಾಹಿತಿ ಪಡೆದು ಬಿಡಲಾಗುತ್ತಿದೆ. ಟ್ಯಾಕ್ಸಿ ಪ್ರಯಾಣ ಮಾಡುವವರಿಗೆ ನೆಗೆಟಿವ್ ಸರ್ಟಿಫಿಕೇಟ್ ಇದ್ದರೂ ಥರ್ಮಲ್ ಸ್ಕಾ್ಯನಿಂಗ್ ಮೂಲಕ ಟೆಂಪರೇಚರ್, ಆಕ್ಸಿಮೀಟರ್ ಮೂಲಕ ಪಲ್ಸ್ ಚೆಕ್ ಮಾಡುತ್ತಿದ್ದಾರೆ. ಯಾರಿಗಾದರೂ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಲ್ಲಿ ಅವರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತಿದ್ದಾರೆ.

    ಗೋವಾದಿಂದ ಬರುವ ಪ್ರತಿಯೊಬ್ಬರ ಮಾಹಿತಿಯನ್ನು ದಾಖಲು ಮಾಡಲಾಗುತ್ತದೆ. ನಿತ್ಯ ಓಡಾಡುವವರನ್ನು ಹೊರತುಪಡಿಸಿ ಉಳಿದವರಿಗೆ ನೆಗೆಟಿವ್ ಸರ್ಟಿಫಿಕೇಟ್ ಹೊಂದಿದ್ದರೂ ಅವರ ಆರೋಗ್ಯ ತಪಾಸಣೆ ಮಾಡುತ್ತೇವೆ. ಆರೋಗ್ಯವಾಗಿದ್ದರೆ ಮುಂದೆ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಿದ್ದೇವೆ.
    | ಗೌತಮ, ಚೆಕ್ ಪೋಸ್ಟ್ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts