More

    ಬೆಳ್ಳಂಬೆಳಗ್ಗೆ ಎಲ್ಲರಿಗಿಂತ ಬೇಗ ಎಚ್ಚರಗೊಂಡ ಗೇಲ್ ಏಕಾಂಗಿಯಾಗಿ ಹೊರಟಿದ್ದೆಲ್ಲಿಗೆ?​

    ನವದೆಹಲಿ: ಪಂಜಾಬ್​ ಕಿಂಗ್ಸ್​ ತಂಡದ ಸ್ಫೋಟಕ ದಾಂಡಿಗ ಕ್ರಿಸ್​ ಗೇಲ್​ ಬಗ್ಗೆ ಯಾರಿಗೂ ಪರಿಚಯವೇ ಬೇಕಿಲ್ಲ. ಸಿಕ್ಸರ್​ ವಿಚಾರಕ್ಕೆ ಬಂದಾಗ ಮೊದಲ ಹೆಸರು ಬರುವುದೇ ಯೂನಿವರ್ಸಲ್​ ಬಾಸ್​ ಗೇಲ್​, ಚುಟುಕು ಕ್ರಿಕೆಟ್​ನಲ್ಲಿ 1000ಕ್ಕೂ ಹೆಚ್ಚು ಸಿಕ್ಸರ್​ ಸಿಡಿಸಿದ ವಿಶ್ವದ ಏಕೈಕ ಆಟಗಾರನೆಂಬ ಹೆಸರಿಗೆ ಗೇಲ್​ ಭಾಜನರಾಗಿದ್ದಾರೆ. ಈಗಲೂ ತಮ್ಮ ಸ್ಫೋಟಕ ಬ್ಯಾಟಿಂಗ್​ ಮುಂದುವರಿಸಿದ್ದಾರೆ.

    ಕ್ರಿಕೆಟ್​ ಹೊರತುಪಡಿಸಿದರೆ, ಗೇಲ್​ ತುಂಬಾ ಮೋಜು-ಮಸ್ತಿ ಮಾಡುವ ಹವ್ಯಾಸ ಹೊಂದಿದ್ದಾರೆ. ಅದಕ್ಕೆ ಉದಾಹರಣೆ ಅವರ ಇನ್​ಸ್ಟಾಗ್ರಾಂನಲ್ಲಿರುವ ಸಾಕಷ್ಟು ವಿಡಿಯೋಗಳೇ ಸಾಕ್ಷಿ. ಇಂದು ಸನ್​ ರೈಸರ್ಸ್ ಹೈದರಾಬಾದ್​ ವಿರುದ್ಧ ಪಂಜಾಬ್​ ಸೆಣಸಾಡಲಿದ್ದು, ನಿನ್ನೆ ಸಂಜೆಯೇ ಪಂಜಾಬ್​ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಗೇಲ್​ಗೆ ಸಂಬಂಧಿಸಿದ ವಿಡಿಯೋವೊಂದನ್ನು ಶೇರ್​ ಮಾಡಿ ಕೊಂಡಿದೆ. ವಿಡಿಯೋಗೆ ಗೇಲ್​ ಅವರು “ಎಗ್​-ಸೆಪ್ಸೆನಲ್​” ಬ್ರೇಕ್​ಫಾಸ್ಟ್​ ಎಂಜಾಯ್​ ಮಾಡುತ್ತಿದ್ದಾರೆ ಎಂದು ಅಡಿಬರಹ ನೀಡಲಾಗಿದೆ.

    ಇಂದು ಎಲ್ಲರೂ ಏಳುವ ಮುಂಚೆಯೇ ನಾನು ಎದ್ದು ಬಿಟ್ಟೆ ಎಂದಿರುವ ಗೇಲ್​, ಹೋಟೆಲ್​ನ ಊಟದ ಏರಿಯಾಗೆ ಬಂದು ಏಕಾಂಗಿಯಾಗಿ ನೆಮ್ಮದಿಯಿಂದ ತಮ್ಮ ಬ್ರೇಕ್​ಫಾಸ್ಟ್​ ಮುಗಿಸಿದ್ದಾರೆ. ಈ ವೇಳೆ ಆಮ್ಲೆಟ್​ ಸವಿದ ಗೇಲ್​, ಕೊನೆಯಲ್ಲಿ ತಮಗೆ ಚೆನ್ನಾಗಿ ಉಣಬಡಿಸಿದ ಹೋಟೆಲ್​ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತಾ ಕಲ್ಲಂಗಡಿ ಹಣ್ಣಿನ ತುಣುಕೊಂದನ್ನು ತಿನ್ನುತ್ತಾ ವಿಡಿಯೋ ಮುಗಿಸಿದರು.

    ಇನ್ನು ಐಪಿಎಲ್​ ವಿಚಾರಕ್ಕೆ ಬಂದರೆ ಗೇಲ್​ ಮೂರು ಪಂದ್ಯಗಳಲ್ಲಿ 61 ರನ್​ ಮಾತ್ರ ಕಲೆಹಾಕಿದ್ದಾರೆ. ರಾಜಸ್ಥಾನ ರಾಯಲ್ಸ್​ ವಿರುದ್ಧದ ಮೊದಲ ಪಂದ್ಯದಲ್ಲಿ 40 ರನ್​ ಕಲೆಹಾಕುವ ಮೂಲಕ ಉತ್ತಮವಾಗಿ ಟೂರ್ನಿ ಆರಂಭಿಸಿದ ಗೇಲ್​ ಉಳಿದ ಚೆನ್ನೈ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಎರಡು ಪಂದ್ಯಗಳಲ್ಲಿ ಕ್ರಮವಾಗಿ 10 ಮತ್ತು 11 ರನ್​ ಕಲೆಹಾಕಿದರು.

    ಟೂರ್ನಿಯಲ್ಲಿ ಪಂಜಾಬ್​ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಕೈಚೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಪಂಜಾಬ್​ ಕುಸಿದಿದೆ. ಇಂದು ಎಸ್​ಆರ್​ಎಚ್​ ವಿರುದ್ಧ ನಡೆಯುವ ಪಂದ್ಯದಲ್ಲಿ ಪಂಜಾಬ್​ ಮತ್ತೆ ಪುಟಿದೇಳುತ್ತಾ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಸೋತವರ ಕಾಳಗದಲ್ಲಿ ಗೆಲುವಿಗೆ ಹೋರಾಟ; ಪಂಜಾಬ್ ಕಿಂಗ್ಸ್ -ಸನ್‌ರೈಸರ್ಸ್‌ ಹೈದರಾಬಾದ್ ಹಣಾಹಣಿ

    ಇಂದು ಕೆಕೆಆರ್-ಸಿಎಸ್‌ಕೆ ಮುಖಾಮುಖಿ

    ಮುಂಬೈ ಇಂಡಿಯನ್ಸ್ ಎದುರು ಸತತ 5 ಸೋಲಿನ ಬಳಿಕ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts