More

    ಇಂದು ಕೆಕೆಆರ್-ಸಿಎಸ್‌ಕೆ ಮುಖಾಮುಖಿ

    ಮುಂಬೈ: ಸೋಲಿನೊಂದಿಗೆ ಲೀಗ್ ಅಭಿಯಾನ ಆರಂಭಿಸಿದರೂ ಸತತ ಎರಡು ಗೆಲುವಿನೊಂದಿಗೆ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ಬ್ಯಾಟಿಂಗ್ ವಿಭಾಗದ ದಯನೀಯ ವೈಲ್ಯದಿಂದಾಗಿ ಹ್ಯಾಟ್ರಿಕ್ ಸೋಲಿನ ಸುಳಿಗೆ ಸಿಲುಕಿರುವ ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ವಾಂಖೆಡೆ ಮೈದಾನದಲ್ಲಿ ಬುಧವಾರ ಎದುರಾಗಲಿವೆ. ಸೋಮವಾರ ರಾಜಸ್ಥಾನ ರಾಯಲ್ಸ್ ಎದುರು ಸುಲಭ ಜಯ ದಾಖಲಿಸಿರುವ ವಿಶ್ವಾಸದಲ್ಲಿ ಸಿಎಸ್‌ಕೆ ತಂಡಕ್ಕೆ ಬೌಲರ್‌ಗಳೇ ದೊಡ್ಡ ಶಕ್ತಿಯಾಗಿದ್ದಾರೆ. ಸನ್‌ರೈಸರ್ಸ್‌ ತಂಡವನ್ನು ಮಣಿಸಿ ಶುಭಾರಂಭ ಕಂಡಿದ್ದ ಕೆಕೆಆರ್, ಬಳಿಕ ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ತಂಡಗಳ ಎದುರು ನಿರಾಸೆ ಅನುಭವಿಸಿತ್ತು.

    ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಸಿಎಸ್‌ಕೆ ತಂಡ ರಾಯಲ್ಸ್ ಎದುರು ಬ್ಯಾಟಿಂಗ್ ವಿಭಾಗದಲ್ಲಿ ಸಂಘಟಿತ ಹೋರಾಟ ನೀಡಿತ್ತು. ಇದೀಗ ಅದೇ ನೆಲದಲ್ಲಿ ಮತ್ತೊಂದು ಹಣಾಹಣಿಗೆ ಸಿಎಸ್‌ಕೆ ಸಜ್ಜಾಗಿದೆ. ಇಂಗ್ಲೆಂಡ್‌ನ ಮೊಯಿನ್ ಅಲಿ, ಸ್ಯಾಮ್ ಕರ‌್ರನ್, ಆಲ್ರೌಂಡರ್ ರವೀಂದ್ರ ಜಡೇಜಾ ಒಳಗೊಂಡ ಬೌಲಿಂಗ್ ಪಡೆ ಎದುರಾಳಿಗೆ ಕಂಟಕವಾಗಬಲ್ಲದು. ಮತ್ತೊಂದೆಡೆ, ಎರಡೂ ವಿಭಾಗದಲ್ಲೂ ನಿಸ್ತೇಜವಾಗಿರುವ ಕೆಕೆಆರ್ ಗೆಲುವಿನ ಹಳಿಗೇರುವ ತವಕದಲ್ಲಿದೆ. ಇದಕ್ಕೆ ತಂಡದ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಪ್ರಮುಖ ಕಾರಣವಾಗಿತ್ತು.

    ಸಿಎಸ್‌ಕೆ: ಗೆಲುವಿನ ಲಯದಲ್ಲಿರುವ ಸಿಎಸ್‌ಕೆ ತಂಡದಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ. ಸತತ 3ನೇ ಪಂದ್ಯದಲ್ಲೂ ಒಂದೇ ತಂಡ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಆರಂಭಿಕ ಹಂತದಲ್ಲಿ ರನ್‌ಗಳಿಸಲು ಪರದಾಡುತ್ತಿರುವ ಋತುರಾಜ್ ಗಾಯಕ್ವಾಡ್ ಬದಲಿಗೆ ಅನುಭವಿ ರಾಬಿನ್ ಉತ್ತಪ್ಪಗೆ ಅವಕಾಶ ನೀಡಬಹುದು.
    ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 45 ರನ್ ಜಯ

    ಕೆಕೆಆರ್: ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಕೆಕೆಆರ್ ತಂಡದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಗಳಿವೆ. ಸತತ 3ನೇ ಪಂದ್ಯದಲ್ಲೂ ವಿಲವಾಗಿರುವ ಅನುಭವಿ ಹರ್ಭಜನ್ ಸಿಂಗ್ ಬದಲಿಗೆ ಕುಲದೀಪ್ ಯಾದವ್, ಕನ್ನಡಿಗ ಪ್ರಸಿದ್ಧ ಕೃಷ್ಣ, ಕಮಲೇಶ್ ನಾಗರಕೋಟಿ, ಶಿವಂ ಮಾವಿ ಈ ಮೂವರಲ್ಲಿ ಒಬ್ಬರು ಸ್ಥಾನ ಪಡೆಯಬಹುದು. ಶಕೀಬ್ ಅಲ್ ಹಸನ್ ಬದಲಿಗೆ ಸುನೀಲ್ ನಾರಾಯಣ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
    ಕಳೆದ ಪಂದ್ಯ: ಆರ್‌ಸಿಬಿ ವಿರುದ್ಧ 38 ರನ್‌ಗಳಿಂದ ಸೋಲು

    ಮುಖಾಮುಖಿ: 22
    ಸಿಎಸ್‌ಕೆ: 14
    ಕೆಕೆಆರ್: 8
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    * 9: ಕೆಕೆಆರ್ ತಂಡ ವಾಂಖೆಡೆಯಲ್ಲಿ ಆಡಿರುವ ಕಡೇ 9 ಪಂದ್ಯಗಳಲ್ಲಿ 8ರಲ್ಲಿ ಸೋಲನುಭವಿಸಿದೆ. 2012ರಲ್ಲಿ ಕಡೇ ಬಾರಿಗೆ ವಾಂಖೆಡೆಯಲ್ಲಿ ಕೆಕೆಆರ್ ಜಯ ದಾಖಲಿಸಿತ್ತು.

    * ಕೆಕೆಆರ್ ತಂಡದ ಮಾಜಿ ನಾಯಕ ದಿನೇಶ್ ಕಾರ್ತಿಕ್‌ಗಿದು 200ನೇ ಐಪಿಎಲ್ ಪಂದ್ಯವಾಗಿರಲಿದೆ.

    * 712: ಹರ್ಭಜನ್ ಸಿಂಗ್, ಐಪಿಎಲ್‌ನಲ್ಲಿ ವಿಕೆಟ್ ಕಬಳಿಸಿ 712 ದಿನಗಳು ಕಳೆದಿವೆ. 2020ರ ಆವೃತ್ತಿಯಿಂದ ಹೊರಗುಳಿದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts