More

    ಟೆಕ್ನಾಲಜಿ ಕಂಪನಿ ಐಪಿಒ ಖರೀದಿಗೆ ಮುಗಿಬಿದ್ದ ಹೂಡಿಕೆದಾರರು: ಗ್ರೇ ಮಾರುಕಟ್ಟೆಯಲ್ಲಿ ಷೇರು ಬೆಲೆ ದುಪ್ಪಟ್ಟು, ಮೊದಲ ದಿನವೇ ಬಂಪರ್​ ಲಾಭದ ನಿರೀಕ್ಷೆ

    ಮುಂಬೈ: ಎಸ್ಕಾನೆಟ್ ಟೆಕ್ನಾಲಜೀಸ್‌ (Esconet Technologies) ಐಪಿಒಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಸ್ಕಾನೆಟ್ ಟೆಕ್ನಾಲಜೀಸ್ ಐಪಿಗೆ ಎರಡನೇ ದಿನದಲ್ಲಿ 84 ಪಟ್ಟು ಹೆಚ್ಚು ಚಂದಾದಾರಿಕೆಯಾಗಿದೆ. ಅಂದರೆ, ಈ ಐಪಿಒದಲ್ಲಿ ನೀಡಲಾಗುತ್ತಿರುವ ಒಟ್ಟು ಷೇರುಗಳನ್ನು ಖರೀದಿಸಲು 84 ಪಟ್ಟು ಅರ್ಜಿಗಳನ್ನು ಈ ಎರಡೇ ದಿನದಲ್ಲಿ ಸಲ್ಲಿಸಲಾಗಿದೆ. ಈ ಐಪಿಒದಲ್ಲಿ ಷೇರು ಖರೀದಿಸಲು ಫೆ. 20ರವರೆಗೆ ಅವಕಾಶವಿದೆ. ಈ ಐಪಿಒಗೆ ಚಂದಾದಾರಿಕೆ ಫೆಬ್ರವರಿ 16 ರಂದು ಆರಂಭವಾಗಿಎ. ಎಸ್ಕಾನೆಟ್ ಟೆಕ್ನಾಲಜೀಸ್‌ ಷೇರುಗಳ ಸಾರ್ವಜನಿಕ ವಿತರಣೆಯ ಒಟ್ಟು ಗಾತ್ರವು 28.22 ಕೋಟಿ ರೂ. ಇದೆ.

    ಎಸ್ಕಾನೆಟ್ ಟೆಕ್ನಾಲಜೀಸ್ ಐಪಿಒ ಬೆಲೆ 80 ರಿಂದ 84 ರೂ. ಇದೆ. ಇದೇ ಸಮಯದಲ್ಲಿ, ಗ್ರೇ ಮಾರ್ಕೆಟ್‌ನಲ್ಲಿ ಕಂಪನಿಯ ಷೇರುಗಳ ಬೆಲೆ 83 ರೂ. ಪ್ರೀಮಿಯಂನಲ್ಲಿ ವ್ಯಾಪಾರವಾಗುತ್ತಿದೆ. ಹೀಗಾಗಿ, ಮೊದಲ ದಿನವೇ ಹೂಡಿಕೆದಾರರ ಹಣವು ದುಪ್ಪಟ್ಟಾಗುವ ಸಾಧ್ಯತೆಗಳು ಇವೆ. ಈ ಷೇರುಗಳು 167 ರೂ ಬೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಆಗಬಹುದಾಗಿದೆ. ಹೀಗಾದರೆ, ಕಂಪನಿಯ ಷೇರುಗಳು ಹಂಚಿಕೆಯಾದ ಹೂಡಿಕೆದಾರರು ಪಟ್ಟಿಯ ದಿನದಂದೇ ಅಂದಾಜು 100% ಲಾಭವನ್ನು ನಿರೀಕ್ಷಿಸಬಹುದು. ಕಂಪನಿಯ ಷೇರುಗಳನ್ನು 23 ಫೆಬ್ರವರಿ 2024 ರಂದು ಪಟ್ಟಿ ಮಾಡಲಾಗುವುದು.

    ಆಸ್ಕೋನೆಟ್ ಟೆಕ್ನಾಲಜೀಸ್‌ನ ಐಪಿಒ ಎರಡನೇ ದಿನದಲ್ಲಿ ಒಟ್ಟು 84.05 ಬಾರಿ ಚಂದಾದಾರಿಕೆಯಾಗಿದೆ. ಇದರಲ್ಲಿ ಚಿಲ್ಲರೆ ಹೂಡಿಕೆದಾರರ ಕೋಟಾದಡಿ 135.13 ಪಟ್ಟು ಚಂದಾದಾರಿಕೆಯಾಗಿದೆ. ಸಾಂಸ್ಥಿಕವಲ್ಲದ ಹೂಡಿಕೆದಾರರ (NII) ವಿಭಾಗದಲ್ಲಿ 75.08 ಪಟ್ಟು ಚಂದಾದಾರಿಕೆಯನ್ನು ಸ್ವೀಕರಿಸಲಾಗಿದೆ. ಆದರೆ, ಅರ್ಹ ಸಾಂಸ್ಥಿಕ ಖರೀದಿದಾರರ (QIB) ಕೋಟಾದಡಿ 1.33 ಬಾರಿ ಚಂದಾದಾರಿಕೆಯನ್ನು ಸ್ವೀಕರಿಸಲಾಗಿದೆ. ಕಂಪನಿಯ IPO ನಲ್ಲಿ ಚಿಲ್ಲರೆ ಹೂಡಿಕೆದಾರರು ಕನಿಷ್ಠ 1 ಲಾಟ್‌ಗೆ ಬಿಡ್ ಮಾಡಬಹುದು. ಒಂದು ಲಾಟ್​ನಲ್ಲಿ 1600 ಷೇರುಗಳಿವೆ. ಚಿಲ್ಲರೆ ಹೂಡಿಕೆದಾರರಿಗೆ ಕನಿಷ್ಠ ಹೂಡಿಕೆಯ ಮೊತ್ತ 1,34,400 ರೂ. ಆಗುತ್ತದೆ. ಐಪಿಒಗೂ ಮುನ್ನ ಕಂಪನಿಯಲ್ಲಿ ಪ್ರವರ್ತಕರ ಪಾಲು ಶೇ. 89.18ರಷ್ಟಿದ್ದು, ಈಗ ಶೇ. 64.94ಕ್ಕೆ ಇಳಿಕೆಯಾಗಲಿದೆ.

    “ಉದ್ದೇಶಿತ ಐಪಿಒ ನಂತರ, ಕಂಪನಿಯ ನಿವ್ವಳ ಮೌಲ್ಯವು ಒಟ್ಟು ರೂ 33.88 ಕೋಟಿ ಆಗುತ್ತದೆ. ಐಪಿಒ ನಂತರ, ಈಕ್ವಿಟಿ ಬಂಡವಾಳವು ರೂ 12.36 ಕೋಟಿ ರೂ.ಗಳಷ್ಟಿರುತ್ತದೆ. ಎಸ್ಕಾನೆಟ್ ಟೆಕ್ ಸ್ಥಿರವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ ಮತ್ತು ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಅತ್ಯುತ್ತಮ ಹೂಡಿಕೆ ಅವಕಾಶವನ್ನು ಒದಗಿಸುತ್ತದೆ ಎಂದು ನಾವು ನಂಬುತ್ತೇವೆ ಎಂದು” ProfitMart ಸೆಕ್ಯುರಿಟೀಸ್ ಹೇಳಿದೆ.

    ಮಾರುಕಟ್ಟೆ ತೆರೆದ ತಕ್ಷಣ ಅದಾನಿ ಪೋರ್ಟ್ಸ್ ಸೇರಿದಂತೆ ಈ 3 ಷೇರುಗಳನ್ನು ಖರೀದಿಸಿ; ಮುಂದಿನ ವಾರದ ವಹಿವಾಟಿಗೆ ತಜ್ಞರ ಸಲಹೆ

    ಹೂಡಿಕೆದಾರರಿಗೆ ಸಾಕಷ್ಟು ಲಾಭ ನೀಡಿದ ಗೇಲ್​ ಷೇರು: ಈ PSU ಸ್ಟಾಕ್ ಖರೀದಿಗೆ 3 ಬ್ರೋಕರೇಜ್‌ ಸಂಸ್ಥೆಗಳು ಸಲಹೆ ನೀಡಿದ್ದೇಕೆ?

    ರೂ. 84,650 ಕೋಟಿ ಮೌಲ್ಯದ ಖರೀದಿಗೆ ಸರ್ಕಾರದ ಒಪ್ಪಿಗೆ: ರಕ್ಷಣಾ ವಲಯದ ಕಂಪನಿಗಳ ಷೇರುಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ ಹೂಡಿಕೆದಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts