More

    ಜೈಲುಪಾಲಾಗಿದ್ದರು ಇನ್ಫೋಸಿಸ್​ ನಾರಾಯಣ ಮೂರ್ತಿ; ವಿದೇಶದಲ್ಲಿ 5 ದಿನ ಅನ್ನಾಹಾರವಿಲ್ಲದೇ ಕಳೆದಿದ್ದರು….!

    ನವದೆಹಲಿ: ಐಟಿ ದಿಗ್ಗಜ, ಇನ್ಫೋಸಿಸ್​ ಸಂಸ್ಥಾಪಕ ನಾರಾಯಣ ಮೂರ್ತಿ ಬದುಕಿನ ಹಲವು ರೋಚಕಗಾಥೆಗಳು ಜನರಿಗೆ ತಿಳಿದಿವೆ. ಜಗತ್ತಿನ ಅತಿ ದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್​ ಸ್ಥಾಪನೆಗೆ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ.

    ದೇಶದ ಅತಿ ಶ್ರೀಮಂತರಲ್ಲಿ ಒಬ್ಬರಾದರೂ ಇಂದಿಗೂ ಅವರು ವಿಮಾನದಲ್ಲಿ ಎಕಾನಮಿ ಕ್ಲಾಸ್​ನಲ್ಲಿಯೇ ಪ್ರಯಾಣಿಸುತ್ತಾರೆ. ಅತ್ಯಂತ ಸರಳ ಜೀವನ ಅವರದ್ದು. ಸರಳತೆಯಿಮದಾಗಿಯೇ ಇತರರಿಗೆ ಮಾದರಿಯಾಗಬೇಕು ಎಂಬುದೇ ಅವರ ಜೀವನ ಧ್ಯೇಯ.

    ಹೀಗಿರುವ ನಾರಾಯಣಮೂರ್ತಿ ಒಮ್ಮೆ ಜೈಲುಪಾಲಾಗಿದ್ದರು. ಅದರಲ್ಲೂ, ಐದು ದಿನಗಳವರೆಗೆ ಅನ್ನಾಹಾರವಿಲ್ಲದೇ ಕಳೆಯಬೇಕಾಯಿತು. ಈ ಘಟನೆಯನ್ನು ಅವರೇ ಇತ್ತೀಚೆಗೆ ವಿದೇಶಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ; ಅಂಧತ್ವಕ್ಕೆ ಸವಾಲು ಹಾಕಿ ಬಾಳು ಬೆಳಗಿಸಿಕೊಂಡ ಮೇಘನಾ; ಯುಪಿಎಸ್​ಸಿಯಲ್ಲಿ 465ನೇ ಸ್ಥಾನ 

    ಇನ್ಫೋಸಿಸ್​ ಸ್ಥಾಪನೆ 1981ರಲ್ಲಾದರೆ, ಅದಕ್ಕೂ ಮುಂಚಿನ ದಿನಮಾನಗಳವು. ಅಂದರೆ 1974ರಲ್ಲಿ ಬಲ್ಗೇರಿಯಾದಲ್ಲಿ ನಡೆದ ಘಟನೆಯಿದು. ಅಲ್ಲಿನ ಜೈಲಿನಲ್ಲಿ ಮೂರು ದಿನಗಳನ್ನು ಕಳೆಯುವ ದೌರ್ಭಾಗ್ಯ ಅವರದ್ದಾಗಿತ್ತು. ಈ ಘಟನೆಯೇ ಅವರನ್ನು ಅತ್ಯಂತ ಸಹಾನುಭೂತಿಯ ಉದ್ಯಮಿಯಾಗಿ ರೂಪಿಸಿತು ಎಂದು ಅವರೇ ಹೇಳಿಕೊಂಡಿದ್ದಾರೆ.

    ಆಗ ಯುಗೋಸ್ಲಾವಿಯಾ ಆಗಿದ್ದ, ಈಗ ಸರ್ಬಿಯಾ ಹಾಗೂ ಬಲ್ಗೇರಿಯಾ ಆಗಿರುವ ದೇಶಗಳ ಗಡಿಭಾಗವಾದ ನಿಸ್​ ಪಟ್ಟಣದ ರೈಲಿನಲ್ಲಿ ಸಂಭವಿಸಿದ ಘಟನೆಯಿದು. ಅವರು ಕಾರ್ಯನಿಮಿತ್ತ ನಿಸ್​ ಪಟ್ಟಣಕ್ಕೆ ತೆರಳಿದ್ದರು. ರೈಲು ನಿಲ್ದಾಣದಲ್ಲಿ ಇಳಿದಾಗ ಅವರ ಬಳಿ ಯುಗೋಸ್ಲಾವಿಯನ್​ ಹಣ ಇರಲಿಲ್ಲ. ಹೀಗಾಗಿ ಅವರಿಗೆ ರೆಸ್ಟೋರಂಟ್​ನವರು ಆಹಾರ ನೀಡಲಿಲ್ಲ. ಮರುದಿನ ಭಾನುವಾರ ಬ್ಯಾಂಕ್​ ರಜೆ. ಹೀಗಾಗಿ ಏನೂ ತಿನ್ನಲು ಸಿಗದೇ, ಮರುದಿನ ರೈಲು ಹಿಡಿಯಲು ನಿಲ್ದಾಣದಲ್ಲಿಯೇ ಉಪವಾಸದಿಂದ ಮಲಗಿದ್ದರು.

    ಮರುದಿನ ರಾತ್ರಿ ಎಂಟು ಗಂಟೆಗೆ ಸೋಫಿಯಾ ಎಕ್ಸ್​ಪ್ರೆಸ್​ ರೈಲು ಹತ್ತಿದರು. ನಾರಾಯಣಮೂರ್ತಿ ಅವರಿಗೆ ಇಂಗ್ಲಿಷ್​ ಸುಲಲಿತವಾಗಿದ್ದರೆ, ಫ್ರೆಂಚ್​ ರಷ್ಯನ್​ ಕೂಡ ಬರುತ್ತಿತ್ತು. ರೈಲಿನಲ್ಲಿ ಎದುರು ಕುಳಿತಿದ್ದ ಯುವತಿಗೆ ಫ್ರೆಂಚ್​ ಬಿಟ್ಟರೆ ಬೇರಾವ ಭಾಷೆ ಅರ್ಥವಾಗುತ್ತಿರಲಿಲ್ಲ. ಅವಳೊಂದಿಗೆ ಫ್ರೆಂಚ್​ನಲ್ಲಿ ಬಲ್ಗೇರಿಯಾದ ಜನಜೀವನದ ಬಗ್ಗೆ ಮಾತನಾಡುತ್ತಿದ್ದರು. ಇದು ಅವಳೊಂದಿಗೆ ಇದ್ದ ಗೆಳೆಯನಿಗೆ ಆಗಿ ಎಂದು ಕಾಣುತ್ತದೆ. ಕೂಡಲೇ ಅಲ್ಲಿದ್ದ ಪೊಲೀಸರನ್ನು ಕರೆತಂದಿದ್ದ.

    ಇದನ್ನೂ ಓದಿ; ಮುಗಿಯುತ್ತ ಬಂತು ಅರ್ಧ ಶೈಕ್ಷಣಿಕ ವರ್ಷ; ನರ್ಸರಿ ಬಳಿಕ ಮುಚ್ಚುವ ಭೀತಿಯಲ್ಲಿವೆಯೇ ಖಾಸಗಿ ಶಾಲೆಗಳು? 

    ಪೊಲೀಸರು ನಾರಾಯಣಮೂರ್ತಿಯವರನ್ನು ಏನೊಂದು ವಿಚಾರಿಸದೇ ಫ್ಲಾಟ್​ಫಾರ್ಮ್​ ಮೇಲೆ ಎಳೆದುಕೊಂಡು ಹೋಗಿ ಜೈಲಿನಲ್ಲಿ ಕೂಡ ಹಾಕಿದ್ದರು. ಅವರ ಪಾಸ್​ಪೋರ್ಟ್​, ಲಗೇಜ್​ ವಶಪಡಿಸಿಕೊಂಡಿದ್ದರು. ಅಂದಾಜು 8 ಅಡಿ ಚೌಕಾಕಾರದ ಕೊಠಡಿಯ ಮೂಲೆಯಲ್ಲಿ ತೆರೆದ ಶೌಚಗೃಹವಿತ್ತು. ನೆಲ ತಣ್ಣಗೆ ಹಾಗೂ ಬಿರುಸಾಗಿತ್ತು. ಅಂಥ ಕೋಣೆಯಲ್ಲಿ ನಾರಾಯಣ ಮೂರ್ತಿ 72 ಗಂಟೆಗಳನ್ನು ಕಳೆದಿದ್ದರು.

    ಅವರಿಗೆ ತಿನ್ನಲೂ ಏನನ್ನೂ ಕೊಟ್ಟಿರಲಿಲ್ಲ. ಬೆಳಗ್ಗೆ ಜೈಲಿನ ಬಾಗಿಲು ತೆರೆದು ತಿನ್ನಲೆಂದು ಕೊಟ್ಟಿದ್ದನ್ನು ಸೇವಿಸುವ ಸ್ಥಿತಿಯಲ್ಲೂ ಅವರಿರಲಿಲ್ಲ. ಮೂರು ದಿನಗಳ ಬಳಿಕ ಅದೇ ಫ್ಲಾಟ್​ಫಾರ್ಮ್​ ಮೇಲೆ ಎಳೆದುಕೊಂಡು ಬಂದು ಗೂಡ್ಸ್​ ರೈಲಿನ ಗಾರ್ಡ್​ ಕಂಪಾರ್ಟ್​ಮೆಂಟ್​ಗೆ ತಳ್ಳಿದ್ದರು. ಅಲ್ಲೂ ಕೂಡ ತಿನ್ನಲು ಏನೂ ಸಿಕ್ಕಿರಲಿಲ್ಲ.

    ಸ್ನೇಹಪರ ರಾಷ್ಟ್ರ ಭಾರತದವರಾಗಿದ್ದರಿಂದ ನಿಮ್ಮನ್ನು ಬಿಟ್ಟಿದ್ದೇವೆ. ಆದರೆ, ಇಸ್ತಾನ್​ಬುಲ್​ ತಲುಪಿದ ಬಳಿಕ ಪಾಸ್​ಪೋರ್ಟ್​ ತಲುಪಿಸುತ್ತೇವೆ ಎಂದು ಹೇಳಿದ್ದರು. ಈ ಘಟನೆ ತಮ್ಮನ್ನು ಗೊಂದಲಕಾರಿ ಎಡಪಂಥೀಯನಿಂದ ದೃಢಚಿತ್ತದ, ಸಹಾನುಭೂತಿಯುಳ್ಳ ಬಂಡವಾಳಶಾಹಿಯನ್ನಾಗಿಸಿತು ಎಂದು ನಾರಾಯಣಮೂರ್ತಿ ಹಲವು ಬಾರಿ ಹೇಳಿಕೊಂಡಿದ್ದಾರೆ.

    ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts