More

    ಅಂಧತ್ವಕ್ಕೆ ಸವಾಲು ಹಾಕಿ ಬಾಳು ಬೆಳಗಿಸಿಕೊಂಡ ಮೇಘನಾ; ಯುಪಿಎಸ್​ಸಿಯಲ್ಲಿ 465ನೇ ಸ್ಥಾನ

    ಯುಪಿಎಸ್​ಸಿ ಪರೀಕ್ಷೆ ಬರೆದು ರ್ಯಾಂಕ್ ಪಡೆಯುವುದು ಅಭ್ಯರ್ಥಿಗಳಿಗೆ ಸಲುಭವಾಗಿರಲಿಲ್ಲ. ಅವರು ಪಟ್ಟ ಕಠಿಣ-ಪರಿಶ್ರಮದ ಬಗ್ಗೆ ಅವರ ಮಾತುಗಳಲ್ಲೇ ಕೇಳೋಣ..

    ಹುಟ್ಟು ಅಂಧರ ಕತೆ ವಿಭಿನ್ನ. ಸ್ವಲ್ಪ ವರ್ಷ ದೃಷ್ಟಿ ಇದ್ದು ಆನಂತರ ದೃಷ್ಟಿಹೀನತೆಗೆ ಒಳಗಾಗುವವರ ವ್ಯಥೆಯೇ ಬೇರೆ. ಜೀವನದಲ್ಲಿ ನಾನೆಂದು ಊಹೆ ಮಾಡದೊಂದು ಘಟನೆ ನಡೆಯಿತು. ನಾನು ಎಸ್ಸೆಸ್ಸೆಲ್ಸಿ ವರೆಗೆ ಓದುವವರೆಗೂ ನನಗೆ ದೃಷ್ಟಿ ಚೆನ್ನಾಗಿಯೇ ಇತ್ತು. ಕ್ರಮೇಣ ದೃಷ್ಟಿ ಹೀನತೆಗೆ ಒಳಗಾದೆ. ಬದುಕೇ ಕತ್ತಲನ್ನು ಆವರಿಸಿತು. ಮುಂದೇನು ಎಂಬ ಪ್ರಶ್ನೆ ನನ್ನನ್ನು ಬಲವಾಗಿ ಕಾಡಲು ಆರಂಭಿಸಿತು. ಅಂಧತ್ವದ ಆತಂಕದಿಂದ ಹೊರ ಬರುವುದಕ್ಕೆ ಬಹಳ ಸಮಯಬೇಕಾಯಿತು.

    ಪದವಿ ಓದುವಾಗ ನಾನು ಟಾರ್ಚ್ ಇಟ್ಟುಕೊಂಡು ಪರೀಕ್ಷೆ ಬರೆದೆ. ಆನಂತರದಲ್ಲಿ ಕರುಡುತನ ಹೆಚ್ಚಾಯಿತು. ಪರೀಕ್ಷೆ ಬರೆಯಲು ಮತ್ತೊಬ್ಬರ ಸಹಾಯ ಪಡೆದುಕೊಳ್ಳುವ ಅನಿವಾರ್ಯತೆ ಎದುರಾಯಿತು. ಓದು ಮುಗಿಯತ್ತಿದ್ದಂತೆಯೇ ಸ್ವಾಲಂಭಿಯಾಗಿ ಬದುಕಲು ಐಎಎಸ್, ಎಂಬಿಎ, ನಿರೂಪಣೆ ಮತ್ತು ಶಿಕ್ಷಕಿ ಈ ನಾಲ್ಕು ಕ್ಷೇತ್ರದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದುಕೊಂಡಿದ್ದೆ. ಸ್ನೇಹಿತರು-ಹಿರಿಯರ ಸಲಹೆ ಕೇಳಿದಾಗ ಐಎಎಸ್ ಮಾಡುವುದೇ ಉತ್ತಮ ಎಂದರು. ನನ್ನ ಆಯ್ಕೆಗಳಲ್ಲಿ ಮೊದಲ ಸ್ಥಾನದಲ್ಲಿ ಐಎಎಸ್ ಇದ್ದರಿಂದ ನಾನು ಪ್ರಯತ್ನ ಆರಂಭಿಸಿದೆ. ಈ ಮಧ್ಯೆ ನಾನು ಕೆಎಎಸ್ ಪರೀಕ್ಷೆ ಕೂಡ ತೆಗೆದುಕೊಂಡೆ. ಆ ವೇಳೆ ನನಗೆ ಖಜಾನೆ ಇಲಾಖೆಯಲ್ಲಿ ಕೆಲಸ ಸಿಕ್ಕಿತು. ಅದನ್ನು ಮಾಡುತ್ತಲೇ ನನ್ನ ಪ್ರಯತ್ನ ಮುಂದುವರೆಸಿದೆ.

    ಮೊದಲ ಪ್ರಯತ್ನದಲ್ಲಿ ಪಾಸ್ ಆಗಲಿಲ್ಲ. ಎರಡನೇ ಪ್ರಯತ್ನ ನನ್ನ ಕೈ ಹಿಡಿಯಿತು.

    ಬಹುತೇಕ ವಿಷಯಗಳನ್ನು ನನ್ನ ಅಮ್ಮ ನನಗೆ ಓದಿ ಹೇಳುತ್ತಿದ್ದರು. ಇಂದಿಗೂ ನಮ್ಮ ಅಮ್ಮನ ಬಳಿ ಪ್ರಶ್ನೆ ಕೇಳಿದರೆ ಸುಲಲಿತವಾಗಿ ಉತ್ತರ ನೀಡುತ್ತಾರೆ. ದೃಷ್ಟಿ ಹೀನರು ಅಥವಾ ಅಂಗವಿಕಲರು ಎಂದರೆ ಅವರನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ. ಅಲ್ಲದೆ, ಸವಲತ್ತುಗಳು ಸಿಗುವುದು ಕೂಡ ಕಮ್ಮಿ. ನಾನು ಯುಪಿಎಸ್​ಸಿ ಪಾಸ್ ಮಾಡಿದರೆ ಮುಂದೊಂದು ದಿನ ಇತರೆ ಸಾಕಷ್ಟು ಅಂಧರಿಗೆ ಒಂದು ಸ್ಪೂರ್ತಿಯಾಗಬಹುದು ಎಂಬ ಆಲೋಚನೆ ನನಗೆ ಬಂತು. ಇದರಿಂದ ನಾನು ಯುಪಿಎಸ್​ಸಿ ಪರೀಕ್ಷೆ ಬರೆದೆ.

    ಓದುಗರಿಗೆ ಟಿಪ್ಸ್: ಬಹುತೇಕರು ಕಷ್ಟದ ವಿಷಯಗಳನ್ನು ಬಿಟ್ಟುಬಿಡುತ್ತಾರೆ. ಈ ರೀತಿ ಬಿಟ್ಟು ಬಿಡುತ್ತಲೇ ಇದ್ದರೆ ಅಭ್ಯಾಸ ನಡೆಸುವುದು ಕಷ್ಟ. ನನಗೆ ಬೆಳಗ್ಗೆ ಸಮಯದಲ್ಲಿ ಹೆಚ್ಚು ಎನರ್ಜಿ ಇರುವುದರಿಂದ ಆ ಸಮಯದಲ್ಲಿ ನಾನು ಕಷ್ಟದ ವಿಷಯಗಳನ್ನು ವ್ಯಾಸಂಗ ಮಾಡುತ್ತೇನೆ. ಇದೇ ರೀತಿ ನಿಮ್ಮ ದೈಹಿಕ ಸಾಮರ್ಥ್ಯ ಅನುಗುಣವಾಗಿ ವೇಳಾಪಟ್ಟಿ ರಚಿಸಿಕೊಂಡು ವ್ಯಾಸಂಗ ಮಾಡುವುದು ಉತ್ತಮ.

    |ಕೆ.ಟಿ.ಮೇಘನಾ, 465ನೇ ರ್ಯಾಂಕ್,

    ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts