ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

ನವದೆಹಲಿ: ಶೈಕ್ಷಣಿಕ ಸಂಸ್ಥೆಗಳ ಮರು ಆರಂಭಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಇದರಂತೆ ಸೆಪ್ಟೆಂಬರ್​ 1ರಿಂದ ನವೆಂಬರ್​ 14ರವರೆಗೆ ಹಂತಹಂತಗಳಲ್ಲಿ ಶಾಲಾ- ಕಾಲೇಜುಗಳನ್ನು ಆರಂಭಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳ ಆರಂಭದ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕಾರ್ಯದರ್ಶಿಗಳ ಗುಂಪು ಚರ್ಚೆ ನಡೆಸಿದೆ. ಇದನ್ನು ಕೇಂದ್ರ ಸಚಿವ ಡಾ. ಹರ್ಷವರ್ಧನ್​ ನೇತೃತ್ವದ ಕೋವಿಡ್​-19 ಕುರಿತಾದ ಸಚಿವರ ಗುಂಪಿಗೆ ಸಲ್ಲಿಸಿದೆ. ಆಗಸ್ಟ್​ 31ರ ನಂತರ ರಾಜ್ಯಗಳಿಗೆ ಸೂಚಿಸಲಾಗುವ ಅನ್​ಲಾಕ್​ 4.0 ಮಾರ್ಗಸೂಚಿಯನ್ವಯ ಇದನ್ನು ಮಾರ್ಪಡಿಸಿ ಅಂತಿಮ ಅಧಿಸೂಚನೆ … Continue reading ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?